ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajath Kishan: 'ಅವನು ನನ್ನ ಜೊತೆ ಮಾತು ಬಿಟ್ಟಿದ್ದಾನೆ': ವಿನಯ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ರಜತ್

ಕಳೆದ ವಾರ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ರಜತ್ ಹಾಜರಿದ್ದರು ಆದರೆ, ವಿನಯ್ ಕಾಣಿಸಿಕೊಂಡಿರಲಿಲ್ಲ. ಇದೀಗ ಸಂದರ್ಶನವೊಂದರಲ್ಲಿ ರಜತ್ ಕಿಶನ್ ಕೆಲ ಪ್ರಮುಖ ವಿಚಾರ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ವಿನಯ್ ಹಾಗೂ ರಜತ್ ಮಧ್ಯೆ ಭಿರುಕು ಮೂಡಿದೆಯಂತೆ.

'ಅವನು ನನ್ನ ಜೊತೆ ಮಾತು ಬಿಟ್ಟಿದ್ದಾನೆ': ವಿನಯ್ ಬಗ್ಗೆ ರಜತ್ ಮಾತು

Rajath Kishan Vinay Gowda

Profile Vinay Bhat Apr 12, 2025 3:59 PM

ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನಯ್ ಗೌಡ (Vinay Gowda) ಹಾಗೂ ಸೀಸನ್ 11ರ ರಜತ್ ಕಿಶನ್ ರೀಲ್ಸ್ ಮಾಡುವುದಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವುದು ಗೊತ್ತೇ ಇದೆ. ಇಬ್ಬರೂ ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಇವರಿಗೆ ವಿನಯ್ ಗೌಡ ಕೂಡ ಸಾಥ್ ನೀಡಿದ್ದರು. ಇದನ್ನು ರಜತ್ ಕಿಶನ್ ತನ್ನ ಇನ್​ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಆ ವಿಡಿಯೋಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಶಸ್ತ್ರಾಸ್ತ್ರ ಕಾಯ್ದೆ ಅಡಿ ಇಬ್ಬರನ್ನೂ ಬಂಧಿಸಲಾಗಿತ್ತು.

ಮನೋರಂಜನೆಗಾಗಿ ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ರಜತ್‌ ಹಾಗೂ ವಿನಯ್ ಈಗಾಗಲೇ ಬಿಡುಗಡೆ ಭಾಗ್ಯ ಸಿಕ್ಕಿದೆ. ಮೂರು ದಿನಗಳ ಜೈಲುವಾಸ ಅನುಭವಿಸಿದ್ದ ಇಬ್ಬರಿಗೂ ಈ ಪ್ರಕರಣದಲ್ಲಿ ರಿಲೀಫ್‌ ಸಿಕ್ಕಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ವಿನಯ್ ಅವರು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದರು. ಆದರೆ, ರಜತ್ ಈ ಕುರಿತು ಎಲ್ಲೂ ಮಾತನಾಡಿರಲಿಲ್ಲ. ಕಳೆದ ವಾರ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ರಜತ್ ಹಾಜರಿದ್ದರು ಆದರೆ, ವಿನಯ್ ಕಾಣಿಸಿಕೊಂಡಿರಲಿಲ್ಲ. ಇದೀಗ ಸಂದರ್ಶನವೊಂದರಲ್ಲಿ ರಜತ್ ಕಿಶನ್ ಕೆಲ ಪ್ರಮುಖ ವಿಚಾರ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ವಿನಯ್ ಹಾಗೂ ರಜತ್ ಮಧ್ಯೆ ಭಿರುಕು ಮೂಡಿದೆಯಂತೆ.

‘‘ವಿನಯ್​ ನನಗಿಂತ 10 ವರ್ಷ ದೊಡ್ಡವನು. ಅವನಿಗೆ ಗೊತ್ತಿದೆ ಎಲ್ಲಿ ಏನು ಮಾತಾಡಬೇಕು ಅಂತ ಚೆನ್ನಾಗಿ ಗೊತ್ತಿದೆ. ಅವನು ನಮ್ಮ ಅಣ್ಣ ತಾನೇ ಮಾತಾಡಲಿ ಬಿಡಿ. ರೀಲ್ಸ್​ ಮಾಡಬೇಕು ಅನ್ನೋ ಅವಶ್ಯಕತೆ ಇಲ್ಲ. ಇಲ್ಲಿ ಯಾರು ವಿನಯ್​ ಗೌಡ ಜೊತೆಗೆ ರೀಲ್ಸ್​ ಮಾಡಬೇಕು ಅಂತ ಕಾಯುತ್ತಾ ಕೂತಿಲ್ಲ. ಅವನ ಪಾಡಿಗೆ ನೆಮ್ಮದಿಯಾಗಿ ಇರಲಿ’’ ಎಂದು ರಜತ್ ಅವರು ನೇರವಾಗಿ ಹೇಳಿದ್ದಾರೆ.

Karna Serial: ಕರ್ಣ ಧಾರಾವಾಹಿಯ ಮತ್ತೊಂದು ವಿಡಿಯೋ ಲೀಕ್: ಭವ್ಯಾ-ನಮೃತಾ ಏನು ಮಾಡ್ತಿದ್ದಾರೆ ನೋಡಿ

ಇನ್ನು, ಸೋಷಿಯಲ್ ಮೀಡಿಯಾದಲ್ಲಿ ರಜತ್​ ಜೊತೆಗಿನ ಸಹವಾಸ ಬಿಟ್ಟು ಬಿಡಿ ಎಂದು ಒಬ್ಬರು ವಿನಯ್ ಗೌಡ ಪೋಸ್ಟ್​ಗೆ ಕಾಮೆಂಟ್ ಹಾಕಿದ್ದರು. ಅಚ್ಚರಿ ಎಂದರೆ ಈ ಕಾಮೆಂಟ್ಸ್​ಗೆ ವಿನಯ್​ ಗೌಡ ಅವರು ಲೈಕ್ ಕೂಡ ಮಾಡಿದ್ದರು. ಈ ಕುರಿತು ಮಾತನಾಡಿರುವ ರಜತ್,​ ‘‘ಅದು ತುಂಬಾ ಬೇಜಾರ್​ ಆಗಿದೆ. ವಿನಯ್​ ಗೌಡ ಕಾಮೆಂಟ್ಸ್​ಗೆ ಲೈಕ್​ ಮಾಡಬಾರದಿತ್ತು. ನಂದು ವಿನಿದು 10 ವರ್ಷದ ಗೆಳತನ. ವಿನಯ್​ ಏನ್​ ಅಂತ ನನಗೆ ಗೊತ್ತು, ನಾ ಏನ್​ ಅಂತ ವಿನಯ್​ಗೆ ಗೊತ್ತು. ಯಾರೋ 3ನೇ ವ್ಯಕ್ತಿ ಬಂದು ಹೀಗೆ ಕಾಮೆಂಟ್ಸ್​ ಮಾಡಿದಾಗ ಬಿಟ್ಟು ಬಿಡಬೇಕಾಗಿತ್ತು. ಆದ್ರೆ ಫ್ರೆಂಡ್​ಶಿಪ್ ಅನ್ನು ಬಿಟ್ಟು ಕೊಡಬಾರದಿತ್ತು. ನನಗೆ ಇದು ವ್ಯಯಕ್ತಿಕವಾಗಿ ಬೇಸರ ಆಗಿದೆ. ಆದ್ರೆ ನಾನು ಫೋನ್​ ಮಾಡಿ ಹೀಗೆ ಮಾಡಬಾರದಾಗಿತ್ತು ಅಂತ ಹೇಳಿದ ಕೂಡಲೇ ನನ್ನ ಜೊತೆಗೆ ಮಾತು ಬಿಟ್ಟ. ನನ್ನ ಹಾಗೂ ವಿನಯ್​ ಗೌಡ ಮಧ್ಯೆ ಮನಸ್ತಾಪ ಆಗಿದೆ’’ ಎಂಬ ಸತ್ಯವನ್ನು ರಜತ್ ಬಿಚ್ಚಿಟ್ಟಿದ್ದಾರೆ.