ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karna Serial: ಕರ್ಣ ಧಾರಾವಾಹಿಯ ಮತ್ತೊಂದು ವಿಡಿಯೋ ಲೀಕ್: ಭವ್ಯಾ-ನಮೃತಾ ಏನು ಮಾಡ್ತಿದ್ದಾರೆ ನೋಡಿ

ಕರ್ಣ ಸೀರಿಯಲ್​ನಲ್ಲಿ ಇಬ್ಬರು ನಾಯಕಿಯರು ಇರ್ತಾರೆ ಎಂದು ಸುದ್ದಿ ಹರಿದಾಡಿದೆ. ಇದೀಗ ಮತ್ತೊಬ್ಬ ನಾಯಕಿ ನಾಗಿಣಿ ಸೀರಿಯಲ್ ಖ್ಯಾತಿಯ ನಮ್ರತಾ ಗೌಡ ಎಂದು ಹೇಳಲಾಗಿದೆ. ಹೌದು, ಕರ್ಣನಿಗೆ ರಂಜನಿ ರಾಘವನ್.. ಇಲ್ಲ ಮೋಕ್ಷಿತಾ ಪೈ ಬರಬೇಕು ಅಂತ ಫ್ಯಾನ್ಸ್ ಆಸೆ ಪಟ್ಟಿದ್ದರು. ಇವರು ಇಬ್ಬರೂ ಅಲ್ಲ. ಕರ್ಣನಿಗೆ ಜೋಡಿಯಾಗಿ ಮತ್ತೆ ಬಣ್ಣ ಹಚ್ಚುತಿದ್ದಾರೆ ನಟಿ ನಮ್ರತಾ.

ಕರ್ಣ ಧಾರಾವಾಹಿಯ ಮತ್ತೊಂದು ವಿಡಿಯೋ ಲೀಕ್

Bhavya Gowda and Namrutha Gowda

Profile Vinay Bhat Apr 12, 2025 12:00 PM

ಝೀ ಕನ್ನಡ ವಾಹಿನಿಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿರುವ ಕರ್ಣ ಧಾರಾವಾಹಿ (Karna Serial) ದೊಡ್ಡ ಹೈಪ್ ಕ್ರಿಯೆಟ್ ಮಾಡಿದೆ. ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿ ಕೇವಲ ಒಂದೇ ಒಂದು ಪ್ರೊಮೋ ಮೂಲಕ ವೀಕ್ಷಕರನ್ನು ಕಾದು ಕುಳಿದುಕೊಳ್ಳುವಂತೆ ಮಾಡಿದೆ. ಡಾಕ್ಟರ್​ ಕರ್ಣ ಆಗಿ ಕರಿಣ್ ರಾಜ್ ಟಿವಿ ಪರೆದೆ ಮೇಲೆ ಮಿಂಚೋಕೆ ಮತ್ತೇ ಬರುತ್ತಿದ್ದಾರೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಧಾರಾವಾಹಿಯ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಆಗಿದೆ.

ಈ ಧಾರಾವಾಹಿಗೆ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮಿಂಚಿದ ಭವ್ಯಾ ಗೌಡ ನಾಯಕಿಯಾಗಿದ್ದಾರೆ. ಎರಡನೇ ನಾಯಕಿ ಕೂಡ ಇದರಲ್ಲಿದ್ದು, ನಾಗಿಣಿ ಸೀರಿಯಲ್​ ಮೂಲಕ ಸೂಪರ್​ ಸಕ್ಸಸ್​ ಕಂಡಿದ್ದ ನಮ್ರತಾ ಗೌಡ ಆಗಿದ್ದಾರೆ. ಆದರೆ, ಹೀರೊಯಿನ್ ಪಾತ್ರವನ್ನು ಝೀ ಕನ್ನಡ ಇನ್ನೂ ಅಧಿಕೃತವಾಗಿ ಹೇಳಿಲ್ಲ. ಮೊನ್ನೆಯಷ್ಟೆ ಕರ್ಣನಿಗೆ ಜೋಡಿ ಯಾರು ಎಂಬ ವಿಚಾರ ಬಹಿರಂಗವಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಲೀಕ್ ಆಗಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಇದರಲ್ಲಿ ಭವ್ಯಾ ಗೌಡ ಹಾಗೂ ಕಿರಣ್ ರಾಜ್ ಮಳೆಯ ಮಧ್ಯೆ ಪ್ರೊಮೋ ಶೂಟ್​ಗೆ ನಟಿಸಿದ್ದರು.

ಇದೀಗ ಮತ್ತೊಂದು ವಿಡಿಯೋ ಲೀಕ್ ಆಗಿದೆ. ಬ್ರಹ್ಮಗಂಟು, ಶ್ರೀಗೌರಿ ಖ್ಯಾತಿಯ ಹಿರಿಯ ನಟಿ ಗಾಯತ್ರಿ ಪ್ರಭಾಕರ್ ಮಡಿಲಲ್ಲಿ ಫೋನ್​ ನೋಡುತ್ತಾ ನಮ್ರತಾ ಮಲಗಿದ್ದಾರೆ. ಇನ್ನೊಂದು ಬದಿಯಲ್ಲಿ ಭವ್ಯಾ ಮುದ್ದು ಮುದ್ದಾಗಿ ಅದೇನೋ ಹೇಳುತ್ತಿದ್ದಾರೆ. ಇದು ಕರ್ಣ ಧಾರಾವಾಹಿಯ ಶೂಟಿಂಗ್​ ಝಲಕ್​ ಅನ್ನೋದು ಮೇಲ್ನೋಟಕ್ಕೆ ಕಂಡುಬರ್ತಿದೆ. ಇದರ ಜೊತೆಗೆ ಭವ್ಯಾ ಹಾಗೂ ನಮ್ರತಾ ಒಟ್ಟೊಟ್ಟಿಗೆ ಕಾಣಿಸಿಕೊಂಡಿರೋ ಮತ್ತೊಂದು ವಿಡಿಯೋ ಕೂಡ ವೈರಲ್​ ಆಗಿದೆ. ಈ ಧಾರಾವಾಹಿಯಲ್ಲಿ ಇಬ್ಬರೂ ಅಕ್ಕ-ತಂಗಿಯ ಪಾತ್ರ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೂಲದಿಂದ ಬಂದಿದೆ.

ಶ್ರುತಿ ನಾಯ್ಡು ನಿರ್ಮಾಣದ ಕರ್ಣ ಸೀರಿಯಲ್‌ನಲ್ಲಿ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ಶ್ಯಾಮ್ ಸಿಮ್ರನ್, ವರಲಕ್ಷ್ಮೀ ಶ್ರೀನಿವಾಸ್‌ ಮುಂತಾದವರು ನಟಿಸಲಿದ್ದಾರೆ. ಈ ಧಾರಾವಾಹಿಯಲ್ಲಿ ಕರ್ಣ (ಕಿರಣ್‌ ರಾಜ್‌) ಪ್ರಶಸ್ತಿ ಪುರಸ್ಕೃತ ಸ್ತ್ರೀರೋಗ ತಜ್ಞನಾಗಿದ್ದಾನೆ. ಆದರೆ, ಈತ ತನ್ನದೇ ಮನೆಯಲ್ಲಿ ಅನಾಥನಂತೆ ಬದುಕುತ್ತಿರುತ್ತಾನೆ. ಹೊರಗಿನ ಪ್ರಪಂಚಕ್ಕೆ ಜನಪ್ರಿಯ ಡಾಕ್ಟರ್‌ ಆಗಿದ್ದರೂ ಕೂಡ ಮನೆಯಲ್ಲಿ ಮಾತ್ರ ಕೆಲಸಗಾರನಂತೆ ಇರುತ್ತಾನೆ. ಮನೆಯ ಎಲ್ಲಾ ಸದಸ್ಯರ ಕೆಲಸವನ್ನು ತಾನೇ ಮಾಡುವ ಕರ್ಣ ಅಮ್ಮ, ಅಜ್ಜಿಯ ಪಾಲಿಗೆ ಮುದ್ದಿನ ಮಗ. ಎಲ್ಲ ನೋವನ್ನು ನುಂಗುತ್ತಾ, ಕಷ್ಟಗಳನ್ನು ಎದುರಿಸುವುದೇ ಈ ಧಾರಾವಾಹಿಯ ಕಥಾ ವಸ್ತು.

Lakshmi Baramma: ‘ನಿಮ್ಮ ಸಮಾಧಿನ ನೀವೆ ತೋಡಿಕೊಳ್ಳಬೇಕು’: ಅಕ್ಷರಶಃ ನಿಜವಾಯಿತು ಅಂದು ಲಕ್ಷ್ಮೀ ಹೇಳಿದ್ದ ಮಾತು