ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Trivikram: ಈ ದಿನಾಂಕದಿಂದ ಪ್ರಸಾರವಾಗಲಿದೆ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ

ಈ ಕುರಿತು ಕಲರ್ಸ್ ಕನ್ನಡ ವಾಹಿನಿ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪ್ರೊಮೊ ಮೂಲಕ ಮಾಹಿತಿ ನೀಡಿದೆ. ಮನಸ್ತುಂಬಾ ಓದು, ಮನಸೊಪ್ಪದ ಮದುವೆ, ಇವಳೇ ಮುದ್ದು ಸೊಸೆ! ಮುದ್ದು ಸೊಸೆ | ಏಪ್ರಿಲ್ 14ರಿಂದ ರಾತ್ರಿ 7:30 ಕ್ಕೆ ಎಂದು ಬರೆದುಕೊಂಡಿದೆ.

ಈ ದಿನಾಂಕದಿಂದ ಪ್ರಸಾರವಾಗಲಿದೆ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ

Muddu Sose Serial

Profile Vinay Bhat Mar 31, 2025 4:21 PM

ಕಲರ್ಸ್​ ಕನ್ನಡದಲ್ಲಿ ಸದ್ಯದಲ್ಲೇ ಹೊಸ ಧಾರಾವಾಹಿ ಶುರುವಾಗಲಿದೆ. ಈ ಸೀರಿಯಲ್​ನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್ (Trivikram)​ ಮುಖ್ಯಭೂಮಿಕೆಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ದಾಖಲೆ ಬರೆದ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಈ ಹೊಸ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹೊಸ ಧಾರಾವಾಹಿಗೆ ಮುದ್ದು ಸೊಸೆ ಎಂದು ಹೆಸರಿಡಲಾಗಿದೆ. ಇತ್ತೀಚೆಗಷ್ಟೆ ಪ್ರೋಮೋ ಕೂಡ ರಿಲೀಸ್​ ಆಗಿತ್ತು. ಇದೀಗ ಈ ಧಾರಾವಾಹಿ ಯಾವಾಗಿನಿಂದ ಮತ್ತು ಎಷ್ಟು ಗಂಟೆಗೆ ಪ್ರಸಾರ ಕಾಣಲಿದೆ ಎಂಬುದನ್ನು ಚಾನೆಲ್ ಬಹಿರಂಗ ಪಡಿಸಿದೆ.

ಈ ಸೀರಿಯಲ್​ಗೆ ನಾಯಕಿಯಾಗಿ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಟಿಸುತ್ತಿದ್ದಾರೆ. ಪ್ರೋಮೋದಲ್ಲಿ ತ್ರಿವಿಕ್ರಮ್ ಹೆಣ್ಣು ನೋಡುವ ಗೆಟಪ್​ನಲ್ಲಿ ಕಾಣಿಸಿಕೊಂದ್ದರು. ಬಳಿಕ ಮದುವೆ ಮನೆಯಲ್ಲಿ ತ್ರಿವಿಕ್ರಮ್ ತಾಳಿ ಕಟ್ಟುವ ವೇಳೆ ಪೊಲೀಸರು ಬಂದು ತಡೆದಿದ್ದನ್ನು ತೋರಿಸಲಾಗಿತ್ತು. ಮುದ್ದು ಸೊಸೆ ಧಾರಾವಾಹಿ ಬಾಲ್ಯವಿವಾಹದ ಕಥೆ ಆಗಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಧಾರಾವಾಹಿ ಏಪ್ರಿಲ್ 14 ರಿಂದ ಸಂಜೆ 7:30ಕ್ಕೆ ಪ್ರಸಾರ ಕಾಣಲಿದೆ.

ಈ ಕುರಿತು ಕಲರ್ಸ್ ಕನ್ನಡ ವಾಹಿನಿ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪ್ರೊಮೊ ಮೂಲಕ ಮಾಹಿತಿ ನೀಡಿದೆ. ಮನಸ್ತುಂಬಾ ಓದು, ಮನಸೊಪ್ಪದ ಮದುವೆ, ಇವಳೇ ಮುದ್ದು ಸೊಸೆ! ಮುದ್ದು ಸೊಸೆ | ಏಪ್ರಿಲ್ 14ರಿಂದ ರಾತ್ರಿ 7:30 ಕ್ಕೆ ಎಂದು ಬರೆದುಕೊಂಡಿದೆ.

ಈ ಸಮಯದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮುಕ್ತಾಯಗೊಳ್ಳಲಿದೆ. ಈಗಾಗಲೇ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೊನೆ ಹಂತಕ್ಕೆ ಬಂದಿದೆ. ಧಾರಾವಾಹಿ ತಂಡದ ಎಲ್ಲ ಸದಸ್ಯರು ಒಟ್ಟಾಗಿ ನಿಂತು ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ದಿನವೂ ಶೂಟಿಂಗ್ ನಡೆಯುವ ಕಾರಣ ಎಲ್ಲರೂ ಒಟ್ಟಾಗಿ ನಿಂತು, ಅಂದರೆ ತೆರೆಯ ಹಿಂದೆ ಕೆಲಸ ಮಾಡುವ ತಂತ್ರಜ್ಞರು ಹಾಗೂ ತೆರೆಯ ಮುಂಭಾಗದಲ್ಲಿ ಅಭಿನಯಿಸುವ ಕಲಾವಿದರು ಎಲ್ಲರೂ ಒಟ್ಟಾಗಿ ನಿಂತು ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ.

Bhagya Lakshmi Serial: ರೆಸಾರ್ಟ್​ನಲ್ಲಿ ಪೊಲೀಸರ ಕೈಗೆ ಸಿಕ್ಕಾಕಿಕೊಂಡ ತನ್ವಿ, ಭಾಗ್ಯಾಗೆ ಬಂತು ಕಾಲ್