ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ರೆಸಾರ್ಟ್​ನಲ್ಲಿ ಪೊಲೀಸರ ಕೈಗೆ ಸಿಕ್ಕಾಕಿಕೊಂಡ ತನ್ವಿ, ಭಾಗ್ಯಾಗೆ ಬಂತು ಕಾಲ್

ರೆಸಾರ್ಟ್​ನಲ್ಲಿ ಬರೀ ಹುಡುಗಿಯರೇ ಎಂಜಾಯ್ ಮಾಡುತ್ತಿರುವಾಗ ಅಲ್ಲಿಗೆ ದಿಢೀರ್ ಪೊಲೀಸ್ ರೈಡ್ ಆಗಿದೆ. ರೆಸಾರ್ಟ್ನ ಮ್ಯಾನೇಜರ್ ಅನ್ನು ಕರೆಸಿ ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಮೈನರ್ಸ್ಗೆ ಪಾರ್ಟಿ ಮಾಡಲು ಯಾರು ನಿಮಗೆ ಅನುಮತಿ ಕೊಟ್ಟಿದ್ದು ಎಂದು ಪೊಲೀಸ್ ಕೇಳಿದ್ದಾರೆ.

ರೆಸಾರ್ಟ್​ನಲ್ಲಿ ಪೊಲೀಸರ ಕೈಗೆ ಸಿಕ್ಕಾಕಿಕೊಂಡ ತನ್ವಿ, ಭಾಗ್ಯಾಗೆ ಬಂತು ಕಾಲ್

Bhagya Lakshmi Serial

Profile Vinay Bhat Mar 31, 2025 12:23 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಳ ಹೊಸ ಜೀವನ ಶುರುವಾಗುತ್ತಿದೆ ಎಂಬೊತ್ತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೈ ತುತ್ತು ಉದ್ಯಮಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲವೂ ಸರಾಗವಾಗಿ ಸಾಗುತ್ತಿದೆ ಎನ್ನುವಾಗ ಭಾಗ್ಯಾಗೆ ಮತ್ತೊಂದು ಆಘಾತ ಬರಸಿಡಿಲಿನಂತೆ ಬಂದಿದೆ. ಹೆತ್ತವರ ಪರ್ಮಿಷನ್ ಇಲ್ಲದೆ ರೆಸಾರ್ಟ್​ಗೆ ಟ್ರಿಪ್ ಹೋಗಿರುವ ತನ್ವಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಈ ವಿಚಾರ ಭಾಗ್ಯಾಗೆ ತಿಳಿದಿದ್ದು, ತಲೆ ಮೇಲೆ ಕೈ ಹಿಡಿದುಕೊಂಡು ಕುಸಿದು ಬೀಳುವ ಮಟ್ಟಕ್ಕೆ ಹೋಗಿದ್ದಾಳೆ.

ತನ್ವಿ ತನ್ನ ಫ್ರೆಂಡ್ಸ್ ಜೊತೆ ರೆಸಾರ್ಟ್‌ಗೆ ಟ್ರಿಪ್ ಹೋಗಲು ನಾನಾ ಕಸರತ್ತು ನಡೆಸಿದ್ದಳು. ಆದರೆ ಇದಕ್ಕೆ ಮನೆಯಿಂದ ಪರ್ಮೀಷನ್ ಸಿಕ್ಕಿಲ್ಲ, ಅನುಮತಿ ಪತ್ರದ ಮೇಲೆ ಭಾಗ್ಯ ಸೈನ್ ಮಾಡಿಲ್ಲ. ನೀವು ಹುಡುಗಿಯರೇ ಸೇರಿಕೊಂಡು ಎಲ್ಲಿಗೂ ಹೋಗುವುದು ಬೇಡ. ಸುಮ್ಮನೆ ಮನೆಯಲ್ಲಿ ಬಿದ್ದಿರು ಎಂಬ ಮಾತು ಕೇಳಿಬರುತ್ತದೆ. ತನ್ವಿ ಕೋಪದಲ್ಲಿ ಊಟ ಬಿಟ್ಟು ಕೂಡ ಕೂತಿದ್ದಳು.

ರೆಸಾರ್ಟ್‌ಗೆ ಹೋಗಲು ಮನೆಯಲ್ಲಿ ಅನುಮತಿ ಸಿಕ್ಕಿಲ್ಲ ಎಂದು ತನ್ವಿ, ಅನುಮತಿ ಪತ್ರಕ್ಕೆ ಅಪ್ಪನ ಸಹಿ ಪಡೆಯಲು ಉಪಾಯದಿಂದ ಅಪ್ಪನನ್ನು ಕರೆಸಿಕೊಂಡಿದ್ದಳು. ತಾಂಡವ್ ಕೂಡ, ಮಗಳು ಕರೆದಿದ್ದಾಳೆ ಎಂದು ಖುಷಿಯಲ್ಲಿ ಹೊರಡುತ್ತಾನೆ. ಇತ್ತ ತಾಂಡವ್ ತನ್ವಿಯನ್ನು ಭೇಟಿ ಮಾಡುತ್ತಾನೆ. ತನ್ವಿ ಅಪ್ಪನನ್ನು ತಬ್ಬಿಕೊಂಡು ಹೊಗಳಿ, ರೆಸಾರ್ಟ್ ಪ್ರವಾಸದ ಅನುಮತಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲು ಮುಂದಾದಳು. ಆದರೆ, ಅಪ್ಪನಿಂದಲೂ ತನ್ವಿಗೆ ಬೈಗುಳ ಸಿಕ್ಕಿತು.

ಕೊನೆಗೆ ಬೇರೆ ದಾರಿಯಿಲ್ಲದೆ ಪೇಪರ್​ಗೆ ಸಹಿ ಹಾಕಲು ಶ್ರೇಷ್ಠಾ ಬಳಿ ಹೋಗಿದ್ದಾಳೆ. ಮನೆಯಲ್ಲಿ ಯಾರಿಗೂ ತಿಳಿಯದಂತೆ ಶ್ರೇಷ್ಠಾಗೆ ಕರೆ ಮಾಡಿ ರೆಸಾರ್ಟ್ ಬಗ್ಗೆ ಹೇಳುತ್ತಾಳೆ. ನನಗೆ ಯಾರೂ ಕೂಡ ಸಹಾಯ ಮಾಡುತ್ತಿಲ್ಲ. ನೀವಾದರೂ ಸಹಾಯ ಮಾಡಿದರೆ ನನಗೆ ಬಹಳ ಖುಷಿ ಆಗುತ್ತದೆ ಎಂದು ಬೇಡಿಕೊಳ್ಳುತ್ತಾಳೆ. ಶ್ರೇಷ್ಠಾ ನಯವಾಗಿ ಮಾತನಾಡಿ ತನ್ವಿಯಿಂದ ಹೇಗಾದರೂ ಮಾಡಿ ಭಾಗ್ಯಳನ್ನು ದೂರ ಮಾಡ್ಬೇಕು ಎಂದುಕೊಂಡು ಸೈನ್ ಹಾಕಿ ರೆಸಾರ್ಸ್‌ಗೆ ಹೋಗು, ನಾನು ನಿನಗೆ ಹಣ ನೀಡುತ್ತೇನೆ ಎಂದು ಹೇಳುತ್ತಾಳೆ. ಶ್ರೇಷ್ಠಾ ಮಾತು ಕೇಳಿದ ತನ್ವಿಗೆ ಖುಷಿ ಆಗುತ್ತೆ.

ಹೀಗಾಗಿ ಮನೆಯಲ್ಲಿ ಸುಳ್ಳು ಹೇಳಿ ಯಾರಿಗೂ ತಿಳಿಯದಂತೆ ತನ್ವಿ ಟೂರ್ ಹೋರಟಿದ್ದಾಳೆ. ಶಾಲೆಯಲ್ಲಿ ಸ್ಪೆಷಲ್ ಕ್ಲಾಸ್ ಇದೆ, ಹೋಗಲೇಬೇಕು ಎಂದು ಮನೆಯಲ್ಲಿ ಕಥೆ ಹೇಳಿದ್ದಾಳೆ. ಆದರೆ, ಭಾಗ್ಯಾಗೆ ಒಂದು ಕಡೆಯಿಂದ ಈ ಕುರಿತು ಅನುಮಾನ ಕಕೂಡ ಮೂಡಿದೆ. ರೆಸಾರ್ಟ್​ನಲ್ಲಿ ಬರೀ ಹುಡುಗಿಯರೇ ಎಂಜಾಯ್ ಮಾಡುತ್ತಿರುವಾಗ ಅಲ್ಲಿಗೆ ದಿಢೀರ್ ಪೊಲೀಸ್ ರೈಡ್ ಆಗಿದೆ. ರೆಸಾರ್ಟ್​ನ ಮ್ಯಾನೇಜರ್ ಅನ್ನು ಕರೆಸಿ ಪೊಲೀಸರು ಪ್ರಶ್ನೆ ಮಾಡಿದ್ದಾರೆ.



ಮೈನರ್ಸ್​ಗೆ ಪಾರ್ಟಿ ಮಾಡಲು ಯಾರು ನಿಮಗೆ ಅನುಮತಿ ಕೊಟ್ಟಿದ್ದು ಎಂದು ಪೊಲೀಸ್ ಕೇಳಿದ್ದಾರೆ. ಬಳಿಕ ತನ್ವಿ ಪೊಲೀಸರ ಎದುರಿಂದಲೇ ಅಮ್ಮನಿಗೆ ಕರೆ ಮಾಡುತ್ತಾಳೆ. ಅಮ್ಮ ನಾನು ಪೊಲೀಸರು ಕೈಯಲ್ಲಿ ಸಿಕ್ಕಾಕಿಕೊಂಡಿದ್ದೇನೆ ಎಂದು ಹೇಳುತ್ತಾಳೆ, ಪೊಲೀಸರು ಭಾಗ್ಯಾಳ ಜೊತೆ ಮಾತನಾಡಿ, ಇಲ್ಲಿ ನಿಮ್ಮ ಮಗಳು ರೆಸಾರ್ಟ್​ಗೆ ಬಂದಿದ್ದಾಳೆ.. ನಾವೆಲ್ಲರನ್ನು ಇಲ್ಲಿ ರೈಡ್ ಮಾಡಿ ನಿಲ್ಲಿಸಿದ್ದೇವೆ ಎಂದು ಹೇಳುತ್ತಾರೆ. ಇದನ್ನು ಕೇಳಿ ಭಾಗ್ಯಾಗೆ ಆಘಾತವಾಗಿದೆ. ಸದ್ಯ ಭಾಗ್ಯಾ ಏನು ಮಾಡುತ್ತಾಳೆ?, ತನ್ವಿಯನ್ನು ಈ ಅಪಾಯದಿಂದ ಹೇಗೆ ಪಾರು ಮಾಡುತ್ತಾಳೆ?, ತನ್ವಿಗೆ ಏನು ಮಾಡುತ್ತಾಳೆ? ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Trivikram: ತ್ರಿವಿಕ್ರಮ್-ರಂಜಿತ್ ಸ್ನೇಹದಲ್ಲಿ ಬಿರುಕು?: ನಿಶ್ಚಿತಾರ್ಥಕ್ಕೆ ಬರದಿರಲು ಕಾರಣ ರಿವೀಲ್