ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 11: ಬಿಗ್ ಬಾಸ್​ನಿಂದ ಹೊರಬಂದ ಧನರಾಜ್​ಗೆ ಅಭಿನಂದನೆಗಳ ಮಹಾಪೂರ: ನೀನು ಗೆದ್ದಿದ್ದೀಯಾ ದೋಸ್ತ ಎಂದ ಫ್ಯಾನ್ಸ್

ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರಾಮಾಣಿಕತೆ, ಮುಗ್ಧತೆ ಹಾಗೂ ಕಾಮಿಡಿಯಿಂದಲೇ ಫೇಮಸ್ ಆಗಿದ್ದ ಧನರಾಜ್ ಫಿನಾಲೆ ವಾರಕ್ಕೆ ಎಂಟ್ರಿ ಆಗಬೇಕಿತ್ತು ಎಂದು ಅನೇಕರು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಬಿಗ್ ಬಾಸ್ ಕನ್ನಡ ಸೀಸನ್ 4ರ ರನ್ನರ್ ಅಪ್ ಆಗಿದ್ದ ಕಿರಿಕ್ ಕೀರ್ತಿ ಅವರು ಕೂಡ ಧನರಾಜ್ ಆಚಾರ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Dhanraj Achar

ಬಿಗ್ ಬಾಸ್ ಕನ್ನಡ ಸೀಸನ್​ 11ರಲ್ಲಿ (Bigg Boss Kannada 11) ಮುಗ್ಧ ಮನಸ್ಸಿನ ಸ್ಪರ್ಧಿಯಾಗಿ ಇಡೀ ಕರ್ನಾಟಕದ ಮನೆಮಾತಾಗಿರುವ ಧನರಾಜ್ ಆಚಾರ್ ಅಂತಿಮ ಹಂತದಲ್ಲಿ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. ಬಿಬಿಕೆ 11 ಫಿನಾಲೆಗೆ ಒಂದು ವಾರ ಇರುವಾಗ ದೊಡ್ಮನೆಯಿಂದ ಆಚೆ ಬಂದರು. ಬಿಗ್ ಬಾಸ್​ನಿಂದ ಹೊರಬಂದ ಧನರಾಜ್​ಗೆ ಅಭಿನಂದನೆಗ ಮಹಾಪೂರವೇ ಹರಿದುಬರುತ್ತಿದೆ. ನೀನು ಕಪ್ ಗೆದ್ದಿಲ್ಲದಿರಬಹುದು.. ಆದರೆ ಕರ್ನಾಟಕ ಮಂದಿಯ ಹೃದಯದಲ್ಲಿ ಸ್ಥಾನ ಪಡೆದಿದ್ದಿ ದೋಸ್ತಾ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರಾಮಾಣಿಕತೆ, ಮುಗ್ಧತೆ ಹಾಗೂ ಕಾಮಿಡಿಯಿಂದಲೇ ಫೇಮಸ್ ಆಗಿದ್ದ ಧನರಾಜ್ ಫಿನಾಲೆ ವಾರಕ್ಕೆ ಎಂಟ್ರಿ ಆಗಬೇಕಿತ್ತು ಎಂದು ಅನೇಕರು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಬಿಗ್ ಬಾಸ್ ಕನ್ನಡ ಸೀಸನ್ 4ರ ರನ್ನರ್ ಅಪ್ ಆಗಿದ್ದ ಕಿರಿಕ್ ಕೀರ್ತಿ ಅವರು ಕೂಡ ಧನರಾಜ್ ಆಚಾರ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

"ಈ ಸೀಸನ್‌ನ ಬಿಗ್‌ ಬಾಸ್‌ನಲ್ಲಿ ನಂಗೆ ತುಂಬಾ ಇಷ್ಟವಾದ ಕಂಟೆಸ್ಟೆಂಟ್‌ಗಳಲ್ಲಿ ಒಬ್ಬ ಧನರಾಜ್ ಆಚಾರ್. ಸಹೋದರ ತನಗೆ ಸಿಕ್ಕ ಎಲ್ಲಾ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡ. ತನ್ನ ಶಕ್ತಿ‌ಮೀರಿ ಟಾಸ್ಕ್ ಆಡಿದ್ದ. ಪ್ರತೀ ಕ್ಷಣ ಮನರಂಜನೆ ಕೊಟ್ಟಿದ್ದಾನೆ. ನಕ್ಕಿದ್ದಾನೆ, ನಗಿಸಿದ್ದಾನೆ, ಮನಸಾರೆ ಆಟವಾಡಿದ್ದಾನೆ. ತನ್ನ ವ್ಯಕ್ತಿತ್ವಕ್ಕೆ ತಕ್ಕಂತೆ ನಡೆದುಕೊಂಡಿದ್ದಾನೆ, ಸ್ನೇಹ ಉಳಿಸಿಕೊಂಡಿದ್ದಾನೆ. ಮನಸ್ಸಿಗೆ ಅನಿಸಿದ್ದನ್ನು ಮುಖದ ಮೇಲೆ ಹೇಳಿದ್ದಾನೆ" ಎಂದು ಕೀರ್ತಿ ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ.



ಇನ್ನು ಬಿಗ್ ಬಾಸ್​ನಲ್ಲಿ ಧನರಾಜ್ ಅವರ ಆಪ್ತ ಹನುಮಂತ ಅವರ ಅಭಿಮಾನಿಗಳು ಕೂಡ ಇವರನ್ನು ಹೊಗಳಿ ಪೋಸ್ಟ್ ಹಾಕುತ್ತಿದ್ದಾರೆ. ಮನೆಯೊಳಗೆ ಹನುಮಂತು ಅಳುತ್ತಿದ್ದಂತೆ ಹೊರಗಡೆ ಧನರಾಜ್ ಕಣ್ಣೀರು ಹಾಕಿ ದುಃಖದಲ್ಲೇ ಬಿಗ್ ​ಬಾಸ್​ಗೆ ವಿದಾಯ ಹೇಳಿದ್ದರು. ಅಷ್ಟೇ ಅಲ್ಲದೆ ಹನುಮಂತನ ಕುರಿತು ಮಾತಾಡುತ್ತ ಕಿಚ್ಚನ ಎದುರೇ ಧನರಾಜ್ ಕಣ್ಣೀರು ಹಾಕಿದ್ದರು. ಇವರಿಬ್ಬರ ಸ್ನೇಹಕ್ಕೆ ಇಡೀ ಕರ್ನಾಟಕವೇ ಫಿದಾ ಆಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಇದೀಗ ಫಿನಾಲೆ ವೀಕ್ ಪ್ರಾರಂಭವಾಗಿದ್ದು ಮುಂದಿನ ಶನಿವಾರ-ಭಾನುವಾರ ಗ್ರ್ಯಾಂಡ್ ಫೈನಲ್ ನಡೆಯಲಿದೆ. ಕಳೆದ ವಾರ ನಡೆದ ಡಬಲ್ ಎಲಿಮಿನೇಷನ್​ನಿಂದಾಗಿ ಸದ್ಯ ಮನೆಯೊಳಗೆ ಆರು ಮಂದಿ ಇದ್ದಾರಷ್ಟೆ. ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್​, ಭವ್ಯಾ ಗೌಡ, ರಜತ್ ಹಾಗೂ ಉಗ್ರಂ ಮಂಜು ಗ್ರ್ಯಾಂಡ್​ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಘಟಾನುಘಟಿಗಳೇ ಈ ಲಿಸ್ಟ್​ನಲ್ಲಿರುವ ಕಾರಣ ಯಾರು ಗೆಲ್ಲುತ್ತಾರೆ ಎಂಬುದು ರೋಚಕತೆ ಸೃಷ್ಟಿಸಿದೆ.

BBK 11: ಕೋಪದಲ್ಲಿ ಬಿಗ್ ಬಾಸ್ ಪ್ರಾಪರ್ಟಿ ಪೀಸ್ ಪೀಸ್ ಮಾಡಿದ್ರಾ ಉಗ್ರಂ ಮಂಜು?