BBK 11: ಕೋಪದಲ್ಲಿ ಬಿಗ್ ಬಾಸ್ ಪ್ರಾಪರ್ಟಿ ಪೀಸ್ ಪೀಸ್ ಮಾಡಿದ್ರಾ ಉಗ್ರಂ ಮಂಜು?
ಪ್ರಾಪರ್ಟಿ ಬಗ್ಗೆ ಜಾಗರೂಕರಾಗಿರಿ ಎಂದು ಬಿಗ್ ಬಾಸ್ ಸಾವಿರ ಸಲ ಹೇಳಿದರೂ ಸ್ಪರ್ಧಿಗಳು ಅದರ ಕಡೆ ಗಮನವೇ ಕೊಡುತ್ತಿಲ್ಲ. ಇದು ಮತ್ತೊಮ್ಮೆ ಸಾಬೀತಾಗಿದೆ. ಭವ್ಯಾ ಮೇಲಿನ ಕೋಪಕ್ಕೆ ಮಂಜು ಅವರು ಬಿಗ್ ಬಾಸ್ ಪ್ರಾಪರ್ಟಿಗಳು ಪುಡಿ ಪುಡಿಯಾಗಿವೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada 11) ಮುಕ್ತಾಯಕ್ಕೆ ಇನ್ನೇನು ಕೇವಲ ಆರು ದಿನಗಳಷ್ಟೆ ಬಾಕಿಯಿದೆ. ಫಿನಾಲೆ ವೀಕ್ ಪ್ರಾರಂಭವಾಗಿದ್ದು, ಮುಂದಿನ ಶನಿವಾರ-ಭಾನುವಾರ ಗ್ರ್ಯಾಂಡ್ ಫೈನಲ್ ನಡೆಯಲಿದೆ. ಹೀಗಿರುವಾಗ ಎಲ್ಲ ಸ್ಪರ್ಧಿಗಳು ಜೊತೆಗೂಡಿ ನಗು-ನಗುತ್ತಾ ಇರುವ ಒಂದು ವಾರವನ್ನು ಎಂಜಾಯ್ ಮಾಡುವುದು ಕಾಮನ್. ಆದರೆ, ಈ ಬಾರಿಯ ಸೀಸನ್ನಲ್ಲಿ ಹೀಗೆ ನಡೆಯುತ್ತಿಲ್ಲ. ಬಿಬಿಕೆ 11 ಮುಗಿಯುವ ಹೊತ್ತಿಗೆ ಸ್ಪರ್ಧಿಗಳ ಮಧ್ಯೆ ದೊಡ್ಡ ಕಿಡಿ ಹೊತ್ತಿಕೊಂಡಿದೆ.
ಪದೇ ಪದೇ ಹಳೆಯ ವಿಚಾರಗಳನ್ನೇ ಎತ್ತಿಕೊಂಡು ಮತ್ತೆ ದ್ವೇಷ ಬೆಳಸಿಕೊಳ್ಳುತ್ತಿದ್ದಾರಾ ಸ್ಪರ್ಧಿಗಳು ಅಂತ ಅನುಮಾನ ಮೂಡಿದೆ. ಜೊತೆಗೆ ಪ್ರಾಪರ್ಟಿ ಬಗ್ಗೆ ಜಾಗರೂಕರಾಗಿರಿ ಎಂದು ಬಿಗ್ ಬಾಸ್ ಸಾವಿರ ಸಲ ಹೇಳಿದರೂ ಸ್ಪರ್ಧಿಗಳು ಅದರ ಕಡೆ ಗಮನವೇ ಕೊಡುತ್ತಿಲ್ಲ. ಇದು ಮತ್ತೊಮ್ಮೆ ಸಾಬೀತಾಗಿದೆ. ಇಷ್ಟಕ್ಕೆಲ್ಲ ಕಾರಣವಾಗಿದ್ದು ಬಿಗ್ ಬಾಸ್ ನೀಡಿರುವ ಟಾಸ್ಕ್.
ಬಿಗ್ ಬಾಸ್ ಒಂದು ಚಟುವಟಿಕೆ ನೀಡಿದ್ದಾರೆ. ಮನದಲ್ಲಿ ಉದಿಗಿರುವ ಕೋಪ-ಬೇಸರ-ಹತಾಶೆಯನ್ನು ಮಡಿಕೆ ಒಡೆಯುತ್ತ ಮನದೊಳಗಿನ ಭಾರವನ್ನು ಇಳಿಸಬೇಕು ಎಂದು ಬಿಗ್ ಬಾಸ್ ಒಂದು ಚಟುವಟಿಕೆ ನೀಡಿದ್ದಾರೆ. ನಿಮಗೆ, ಯಾರ ಮೇಲೆ ಕೋಪ ಇದೆಯೋ ಅವರ ಫೋಟೋವನ್ನು ಗೊಂಬೆ ತಲೆಯಾಗಿರುವ ಮಡಿಕೆಗೆ ಅಂಟಿಸಿ, ಕೋಲಿನಿಂದ ಹೊಡೆಯಬೇಕು ಎಂದು ಟಾಸ್ಕ್ ಕೊಡಲಾಗಿದೆ.
ಈ ಟಾಸ್ಕ್ನಲ್ಲಿ ಉಗ್ರಂ ಮಂಜು ರುದ್ರವತಾರ ತಾಳಿದ್ದಾರೆ. ಇದರಲ್ಲಿ ಮಂಜು ಅವರು ರಜತ್ ಹಾಗೂ ಭವ್ಯಾ ಗೌಡ ಹೆಸರು ತೆಗೆದುಕೊಂಡಿದ್ದಾರೆ. ಒಂದು ಹಂತದಲ್ಲಿ ಮಂಜು ಅವರು ಭವ್ಯಾ ಮೇಲಿನ ಕೋಪಕ್ಕೆ ಅಲ್ಲಿರುವ ಪ್ರಾಪರ್ಟಿಯನ್ನು ಪುಡಿ.. ಪುಡಿ.. ಮಾಡಿದ್ದಾರೆ. ಡ್ರಮ್ ಅನ್ನು ಕಾಲಿನಲ್ಲಿ ಒದ್ದಿದ್ದಾರೆ. ಭವ್ಯಾ ಬಗ್ಗೆ ಮಾತನಾಡಿದ ಮಂಜು, ಮೊದಲಿಗೆ ಅಣ್ಣ ಅಂತೀಯ.. ಅಮೇಲೆ ಮಂಜು ಅವ್ರೇ ಅಂತೀಯಾ.. ಹನುಮಂತುಗೆ ಹೊಡಿತೀಯ.. ತ್ರಿವಿಕ್ರಮ್ ಸ್ಟೇಟ್ಮೆಂಟ್ ಕೊಟ್ರು ಅಲ್ವ ನನ್ನಿಂದಲೇ ಇಲ್ಲಿ ತನಕ ಬಂದಿದ್ದಿ ಅಂತ ಇಂಡಿವ್ಯೂಜುವಲ್ ಆಡ್ತಾ ಇಲ್ವೆ.. ಯಾರಿಗೋ ಸಿಗಬೇಕಾದ ಕ್ಯಾಪ್ಟನ್ಸಿ.. ಮೋಸ ಮಾಡ್ಕೊಂಡು ಕ್ಯಾಪ್ಟನ್ ಆದ್ನಾ ಎಂದು ಮಾತನಾಡಿದ್ದಾರೆ.
ಅತ್ತ ಭವ್ಯಾ ಕೂಡ ನಾನೇನಾದ್ರೂ ಅಗ್ರಿಮೆಂಟ್ ಮಾಡಿದ್ನಾ ಮಂಜಣ್ಣ ಅಂತ ಕರೀತೀನಿ ಅಂತ. ಮೊದಲು ನಿಮ್ಮಲ್ಲಿ ಎಷ್ಟು ತೂತು ಇದೆ ಅಂತ ನೋಡಿಕೊಳ್ಳಿ, ನಿಮ್ಮ ಗೌತಮಿ ವಿಚಾರಕ್ಕೆ ನಾನು ಬಂದಿದ್ದೀನಾ, ಅರ್ಹತೆ ಇಲ್ಲ ನಿಮಗೆ ನನ್ನ ಬಗ್ಗೆ ಮಾತಾಡೋಕೆ ಗೇಟ್ ಲಾಸ್ಟ್ ಅಂತ ಸಿಟ್ಟಿಗೆದ್ದಿದ್ದಾರೆ. ಭವ್ಯಾ ಮೇಲಿನ ಕೋಪಕ್ಕೆ ಮಂಜು ಅವರು ಬಿಗ್ ಬಾಸ್ ಪ್ರಾಪರ್ಟಿಗಳು ಪುಡಿ ಪುಡಿಯಾಗಿವೆ. ಭವ್ಯಾ ಫೋಟೋ ಹಾಕಿದ್ದ ಮಡಿಕೆ ಒಡೆದ ಅವರು ಟೇಬಲ್, ಡ್ರಮ್ ಸೇರಿದಂತೆ ಇನ್ನಿತರ ವಸ್ತುಗಳಿಗೆ ಹೊಡೆದಿದ್ದಾರೆ.
BBK 11: ಫಿನಾಲೆ ವೀಕ್ನಲ್ಲಿ ಮಂಜು ಉಗ್ರ ಅವತಾರ: ಭವ್ಯಾ-ರಜತ್ ಟಾರ್ಗೆಟ್