ಗೀತಾ ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿದ್ದ ನಟಿ ಭವ್ಯಾ ಗೌಡ (Bhavya Gowda) ಬಿಗ್ ಬಾಸ್ಗೆ ಹೋಗಿ ಬಂದು ತಮ್ಮ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದರು. ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದ ಭವ್ಯಾ ಫಿನಾಲೆವರೆಗೂ ಬಂದಿದ್ದರು. ಈಗ ಇವರ ಅಭಿಮಾನಿಗಳ ಬಳಗ ದೊಡ್ಡದಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕೂಡ ಭವ್ಯಾ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಮೊನ್ನೆಯಷ್ಟೆ ಈವೆಂಟ್ ಒಂದರಲ್ಲಿ ಪ್ರಭುದೇವ ಅವರನ್ನು ಭೇಟಿ ಆಗಿ ಫೋಟೋ ಕ್ಲಿಕ್ಕಿಸಿಗೊಂಡಿದ್ದರು. ಇತ್ತೀಚೆಗಷ್ಟೆ ಇವರು ರಂಜಿತ್ ಅವತ ಎಂಗೇಜ್ಮೆಂಟ್ಗೆ ತೆರಳಿ ಮಜಾ ಮಾಡಿದ್ದರು.
ಅಪ್ಪು ಹುಟ್ಟುಹಬ್ಬದಂದು ಅನುಷಾ ರೈ ಜೊತೆ ಸಮಾದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು. ಭವ್ಯ ಅವರು ಕೆಲ ಬಿಗ್ ಬಾಸ್ ಸ್ಪರ್ಧಿಗಳ ಜೊತೆಗೆ ಮಾತ್ರ ತುಂಬಾ ಕ್ಲೋಸ್ ಇದ್ದಾರೆ. ಅವರ ಜೊತೆ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ. ಆದರೀಗ ಭವ್ಯಾ ಥೈಲ್ಯಾಂಡ್ಗೆ ತೆರಳಿ ಸುದ್ದಿಯಲ್ಲಿದ್ದಾರೆ. ಭವ್ಯಾ ಅವರು ಬ್ಯಾಂಕಾಕ್ ಟ್ರಿಪ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದು ಸಖತ್ ವೈರಲ್ ಆಗುತ್ತಿದೆ.
ಭವ್ಯಾ ಗೌಡ ಅವರ ಪೋಸ್ಟ್‌ಗೆ ಅಕ್ಕ ದಿವ್ಯಾ ಗೌಡ ಖುಷಿ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಅದನ್ನು ನೋಡಿ ಭವ್ಯಾ ಅವರು ‘ನಾನು ನಿನ್ನನ್ನು ಮಿಸ್ ಮಾಡಿಕೊಳ್ತಿಲ್ಲ’ ಎಂದು ಹೇಳಿದ್ದಾರೆ. ಭವ್ಯಾ ಗೌಡ ಅವರು ಮಾತು ಕೇಳಿ ದಿವ್ಯಾ ಗೌಡ, ‘ನಾನು ಕೂಡ ನಿನ್ನನ್ನು ಮಿಸ್ ಮಾಡಿಕೊಳ್ತಿಲ್ಲ’ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಅಕ್ಕ-ತಂಗಿ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಕಾಲೆಳೆದುಕೊಂಡಿದ್ದಾರೆ.
ಇತ್ತೀಚೆಗಷ್ಟೆ ಭವ್ಯಾ ಅವರು ಕರ್ಣ ಧಾರಾವಾಹಿಯ ಪ್ರೊಮೋ ಶೂಟ್ನಲ್ಲಿ ಭಾಗವಹಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಝೀ ಕನ್ನಡದಲ್ಲಿ ಸದ್ಯದಲ್ಲೇ ಕರ್ಣ ಧಾರಾವಾಹಿ ಶುರುವಾಗಲಿದೆ. ಇದರಲ್ಲಿ ಕಿರಣ್ ರಾಜ್ ನಾಯಕನಾದರೆ ಭವ್ಯಾ ಗೌಡ ನಾಯಕಿಯಾಗಿದ್ದಾರೆ. ಎರಡನೇ ನಾಯಕಿ ಕೂಡ ಇದರಲ್ಲಿದ್ದು, ನಾಗಿಣಿ ಸೀರಿಯಲ್ ಮೂಲಕ ಸೂಪರ್ ಸಕ್ಸಸ್ ಕಂಡಿದ್ದ ನಮ್ರತಾ ಗೌಡ ಆಗಿದ್ದಾರೆ. ಆದರೆ, ಹೀರೊಯಿನ್ ಪಾತ್ರವನ್ನು ಝೀ ಕನ್ನಡ ಇನ್ನೂ ಅಧಿಕೃತವಾಗಿ ಹೇಳಿಲ್ಲ.
ಮೊನ್ನೆಯಷ್ಟೆ ಕರ್ಣನಿಗೆ ಜೋಡಿ ಯಾರು ಎಂಬ ವಿಚಾರ ಬಹಿರಂಗವಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಲೀಕ್ ಆಗಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಇದರಲ್ಲಿ ಭವ್ಯಾ ಗೌಡ ಹಾಗೂ ಕಿರಣ್ ರಾಜ್ ಮಳೆಯ ಮಧ್ಯೆ ಪ್ರೊಮೋ ಶೂಟ್ಗೆ ನಟಿಸಿದ್ದರು. ಒಟ್ಟಿನಲ್ಲಿ ಭವ್ಯಾ ಗೌಡ ಅವರು ಧಾರಾವಾಹಿ ಶೂಟಿಂಗ್ ಮಧ್ಯೆ ಈಗ ಥೈಲ್ಯಾಂಡ್ನಲ್ಲಿ ಪಾರ್ಟಿ ಮಾಡ್ತಿದ್ದಾರೆ.
ಸದ್ದಿಲ್ಲದೆ ನಡೆಯಿತು ಚಂದನ್ ಶೆಟ್ಟಿ- ಸೀತಾ ವಲ್ಲಭ ಸೀರಿಯಲ್ ನಟಿ ಸುಪ್ರೀತಾ ಸತ್ಯನಾರಾಯಣ್ ನಿಶ್ಚಿತಾರ್ಥ