ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shobha Shetty: ಕೊನೆಗೂ ಮದುವೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಶೋಭಾ ಶೆಟ್ಟಿ

Shobha Shetty Marraige: ಯಶವಂತ್‌ ರೆಡ್ಡಿ ಜತೆ ಕಳೆದ ವರ್ಷ ಇದೇ ದಿನ ಶೋಭಾ ಎಂಗೇಜ್‌ ಆಗಿದ್ದರು. ಇತ್ತೀಚೆಗಷ್ಟೆ ಏಪ್ರಿಲ್‌ 25ರಂದು ಮೊದಲ ಶೋಭಾ ಅವರು ಯಶವಂತ್‌ ರೆಡ್ಡಿ ಜತೆಗೆ ಎಂಗೇಜ್ಮೆಂಟ್ ಅನಿವರ್ಸರಿ ಕೂಡ ಮಾಡಿಕೊಂಡಿದ್ದರು. ಇದೀಗ ಶೋಭಾ ತಮ್ಮ ಮದುವೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.

Shobha Shetty

ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೂಲಕ ಕನ್ನಡಿಗರಿಗೆ ಹೆಚ್ಚು ಹತ್ತಿರವಾದ ಶೋಭಾ ಶೆಟ್ಟಿ (Shobha Shetty) ಇದೀಗ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್​ಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಇವರು ಒಂಬತ್ತನೇ ವಾರ ಮನೆಯಿಂದ ಹೊರಹೋದರು. ಎಲಿಮಿನೇಷನ್​ನಿಂದ ಪಾರಾದರೂ ತನ್ನ ಸ್ವ-ಇಚ್ಚೆಯ ಮೇಲೆ ಶೋಭಾ ಅವರು ಬಿಗ್ ಬಾಸ್ ತೊರೆದರು. ಶೋಭಾ ಅವರಿಗೆ ತೆಲುಗು ರಂಗ ಎರಡನೇ ಮನೆಯಿದ್ದಂತೆ. ಈ ಹಿಂದೆ ತೆಲುಗು ಬಿಗ್​ಬಾಸ್ ಸೀಸನ್ 7 ರಲ್ಲಿ ಕೂಡ ಶೋಭಾ ಭಾಗಿಯಾಗಿದ್ದರು.

ಬಿಗ್ ಬಾಸ್ ತೆಲುಗಿನಲ್ಲಿ ಶೋಭಾ ತಮ್ಮ ಜಗಳ, ಮಾತುಗಳ ಮೂಲಕವೇ ಜನಪ್ರಿಯ ಆಗಿದ್ದರು. ಮೂಲತ ಕರ್ನಾಟಕದವರಾದ ಶೋಭಾ ತೆಲುಗು ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯವಾಗಿದ್ದಾರೆ. ಕಾರ್ತಿಕ ದೀಪಂ ಧಾರವಾಹಿ ಮೂಲಕ ಹೆಚ್ಚು ಜನಪ್ರಿಯವಾಗಿದ್ದರು. ಇದೇ ಧಾರವಾಹಿಯಲ್ಲಿ ಆದಿತ್ಯ ಪಾತ್ರ ಮಾಡಿದ್ದ ಯಶ್ವಂತ್ ರೆಡ್ಡಿಯೊಂದಿಗೆ ಕಳೆದ ವರ್ಷ ಎಂಗೇಜ್ಮೆಂಟ್ ಕೂಡ ಆಗಿತ್ತು. ಆದರೆ, ನಿಶ್ಚಿತಾರ್ಥ ಆಗಿ ಒಂದು ವರ್ಷವಾದರೂ ಶೋಭಾ ಮದುವೆ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ.

ಹೌದು, ಯಶವಂತ್‌ ರೆಡ್ಡಿ ಜತೆ ಕಳೆದ ವರ್ಷ ಇದೇ ದಿನ ಶೋಭಾ ಎಂಗೇಜ್‌ ಆಗಿದ್ದರು. ಇತ್ತೀಚೆಗಷ್ಟೆ ಏಪ್ರಿಲ್‌ 25ರಂದು ಮೊದಲ ಶೋಭಾ ಅವರು ಯಶವಂತ್‌ ರೆಡ್ಡಿ ಜತೆಗೆ ಎಂಗೇಜ್ಮೆಂಟ್ ಅನಿವರ್ಸರಿ ಕೂಡ ಮಾಡಿಕೊಂಡಿದ್ದರು. ಇದೀಗ ಶೋಭಾ ತಮ್ಮ ಮದುವೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ತೆಲುಗು ಚಾನೆಲ್ ಒಂದರ ಸಂದರ್ಶನದಲ್ಲಿ ಶೋಭಾ, ಇದೇ ವರ್ಷ ನಾವು ಮದುವೆ ಆಗಲಿದ್ದೇವೆ ಎಂದು ಹೇಳಿದ್ದಾರೆ. ‘‘ನಾವಿಬ್ಬರೂ 2025 ರಲ್ಲಿ ಮದುವೆಯಾಗಲು ಯೋಜಿಸಿದ್ದೇವೆ. ಯಶವಂತ್ ಇಲ್ಲದೆ ನನ್ನ ಜೀವನವನ್ನು ಊಹಿಸಲು ಸಾಧ್ಯವಿಲ್ಲ’’ ಎಂದು ಹೇಳಿದ್ದಾರೆ.

OTT Movies: ಈ ವಾರ ಒಟಿಟಿಗೆ ಬಂದಿವೆ 4 ಕನ್ನಡ ಸಿನಿಮಾಗಳು: ಯಾವುವು?

ಇದೇ ಸಂದರ್ಶನದಲ್ಲಿ ತಮ್ಮ ಕಷ್ಟದ ದಿನಗಳನ್ನು ನೆನೆದ ಶೋಭಾ, ‘‘ಮಲಗಿದ್ದರೂ ಫೋಟೋ ತೆಗೆದು ಆಡಿಷನ್‌ಗೆ ಹೋಗುತ್ತಿದ್ದೆ. ಸ್ಟುಡಿಯೋಗಳಲ್ಲಿ ಸುತ್ತಾಡಲು ಸಹ ತನ್ನ ಬಳಿ ಹಣವಿರಲಿಲ್ಲ. ತಾಯಿಯ ಮಂಗಳಸೂತ್ರವನ್ನು ಒತ್ತೆ ಇಟ್ಟು ಬೆಂಗಳೂರಿನಲ್ಲಿ ಬಾಡಿಗೆ ಮನೆಗೆ ಹೋಗಬೇಕಾಯಿತು ಮತ್ತು ವಿಮಾನ ನಿಲ್ದಾಣದಲ್ಲಿ ಹಲವು ಬಾರಿ ಮಲಗಿದ್ದೆ. ಹೇಗಾದರೂ ಸ್ವಂತ ಮನೆ ಖರೀದಿಸಲು ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ನಟಿಸುವ ಮೂಲಕ ಬೆಂಗಳೂರಿಗೆ ಬಂದೆ’’ ಎಂದು ಹೇಳಿದ್ದಾರೆ.