ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೂಲಕ ಕನ್ನಡಿಗರಿಗೆ ಹೆಚ್ಚು ಹತ್ತಿರವಾದ ಶೋಭಾ ಶೆಟ್ಟಿ (Shobha Shetty) ಇದೀಗ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಇವರು ಒಂಬತ್ತನೇ ವಾರ ಮನೆಯಿಂದ ಹೊರಹೋದರು. ಎಲಿಮಿನೇಷನ್ನಿಂದ ಪಾರಾದರೂ ತನ್ನ ಸ್ವ-ಇಚ್ಚೆಯ ಮೇಲೆ ಶೋಭಾ ಅವರು ಬಿಗ್ ಬಾಸ್ ತೊರೆದರು. ಶೋಭಾ ಅವರಿಗೆ ತೆಲುಗು ರಂಗ ಎರಡನೇ ಮನೆಯಿದ್ದಂತೆ. ಈ ಹಿಂದೆ ತೆಲುಗು ಬಿಗ್ಬಾಸ್ ಸೀಸನ್ 7 ರಲ್ಲಿ ಕೂಡ ಶೋಭಾ ಭಾಗಿಯಾಗಿದ್ದರು.
ಬಿಗ್ ಬಾಸ್ ತೆಲುಗಿನಲ್ಲಿ ಶೋಭಾ ತಮ್ಮ ಜಗಳ, ಮಾತುಗಳ ಮೂಲಕವೇ ಜನಪ್ರಿಯ ಆಗಿದ್ದರು. ಮೂಲತ ಕರ್ನಾಟಕದವರಾದ ಶೋಭಾ ತೆಲುಗು ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯವಾಗಿದ್ದಾರೆ. ಕಾರ್ತಿಕ ದೀಪಂ ಧಾರವಾಹಿ ಮೂಲಕ ಹೆಚ್ಚು ಜನಪ್ರಿಯವಾಗಿದ್ದರು. ಇದೇ ಧಾರವಾಹಿಯಲ್ಲಿ ಆದಿತ್ಯ ಪಾತ್ರ ಮಾಡಿದ್ದ ಯಶ್ವಂತ್ ರೆಡ್ಡಿಯೊಂದಿಗೆ ಕಳೆದ ವರ್ಷ ಎಂಗೇಜ್ಮೆಂಟ್ ಕೂಡ ಆಗಿತ್ತು. ಆದರೆ, ನಿಶ್ಚಿತಾರ್ಥ ಆಗಿ ಒಂದು ವರ್ಷವಾದರೂ ಶೋಭಾ ಮದುವೆ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ.
ಹೌದು, ಯಶವಂತ್ ರೆಡ್ಡಿ ಜತೆ ಕಳೆದ ವರ್ಷ ಇದೇ ದಿನ ಶೋಭಾ ಎಂಗೇಜ್ ಆಗಿದ್ದರು. ಇತ್ತೀಚೆಗಷ್ಟೆ ಏಪ್ರಿಲ್ 25ರಂದು ಮೊದಲ ಶೋಭಾ ಅವರು ಯಶವಂತ್ ರೆಡ್ಡಿ ಜತೆಗೆ ಎಂಗೇಜ್ಮೆಂಟ್ ಅನಿವರ್ಸರಿ ಕೂಡ ಮಾಡಿಕೊಂಡಿದ್ದರು. ಇದೀಗ ಶೋಭಾ ತಮ್ಮ ಮದುವೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟಂತಿದೆ. ಇನ್ಸ್ಟಾಗ್ರಾಮ್ನಲ್ಲಿ ಇವರು ಕೆಲ ಫೋಟೋ ಹಂಚಿಕೊಂಡಿದ್ದು, ಇದನ್ನ ಕಂಡ ಅಭಿಮಾನಿಗಳು ಹಳದಿ ಶಾಸ್ತ್ರ ಎಂದು ಹೇಳುತ್ತಿದ್ದಾರೆ.
ಇತ್ತೀಚೆಗಷ್ಟೆ ಶೋಭಾ ಅವರು ತೆಲುಗು ಚಾನೆಲ್ ಒಂದರ ಸಂದರ್ಶನದಲ್ಲಿ, ಇದೇ ವರ್ಷ ನಾವು ಮದುವೆ ಆಗಲಿದ್ದೇವೆ ಎಂದು ಹೇಳಿದ್ದಾರೆ. ಅದರಂತೆ ಈಗ ಸದ್ದಿಲ್ಲದೆ ಮದುವೆ ಕಾರ್ಯ ಶುರುವಾಗಿದೆಯ ಎಂಬ ಅನುಮಾನ ಮೂಡಿದೆ. ಶೋಭಾ ಅವರು ಹಳದಿ ಬಣ್ಣದ ಸಾರಿಯಲ್ಲಿ ಕೈಗೆಲ್ಲ ಅರಿಶಿನ ಹಚ್ಚಿಕೊಂಡು ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ.
Praveen Jain: ಕಾಮಿಡಿ ಕಿಲಾಡಿಗಳು ಪ್ರವೀಣ್ ಜೈನ್ ಮನೆಗೆ ಹೊಸ ಕಾರು ಆಗಮನ: ಇದರ ಬೆಲೆ ಎಷ್ಟು ನೋಡಿ