ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ (Bigg Boss Kannada Season 12) ದಿನಗಣನೆ ಶುರುವಾಗಿದೆ. ಇದೇ ಭಾನುವಾರ ಬಿಬಿಕೆ 12ನ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. 29 ರಿಂದ ದೊಡ್ಮನೆಯ ರಿಯಲ್ ಕಹಾನಿ ಶುರುವಾಗಿದೆ. ಈಗಾಗಲೇ ಈ ಬಾರಿ ಮನೆಯೊಳಗೆ ಹೋಗುವ ಸ್ಪರ್ಧಿಗಳ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ, ಅಧಿಕೃತವಾಗಿ ಯಾರೆಲ್ಲ ಹೋಗುತ್ತಾರೆಂಬುದು ಭಾನುವಾರ ತಿಳಿಯಲಿದೆ. ಕಳೆದ ಬಾರಿಗಿಂತ ಈ ಬಾರಿ ಬಿಗ್ ಬಾಸ್ ಮನೆ ಇನ್ನಷ್ಟು ದೊಡ್ಡದಾಗಿ ಗ್ರ್ಯಾಂಡ್ ಆಗಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.
ಇವುಗಳ ಮಧ್ಯೆ ಸದ್ಯ ಬಿಗ್ ಬಾಸ್ ಮೂಲಗಳಿಂದ ಒಂದೊಂದೆ ಹೊಸ ಹೊಸ ಅಪ್ಡೇಟ್ ಬರುತ್ತಿದೆ. ಮೊನ್ನೆಯಷ್ಟೆ ದೊಡ್ಮನೆಯ ಫೋಟೋ ಲೀಕ್ ಆಗಿತ್ತು. ಅಲ್ಲದೆ ಕಳೆದ ವಾರ ಸತ್ಯನಾರಾಯಣ ಪೂಜೆ ಕೂಡ ನೆರವೇರಿದೆ. ಈ ಬಾರಿಯ ಸೀಸನ್ಗೆ ಯಾವುದೇ ಕಂಟಕ ಬರದಿರಲಿ.. ಎಲ್ಲವೂ ನಾಜೂಕಾಗಿ ನಡೆಯಲಿ ಎಂದು ಮೊದಲು ದೇವರ ಮೊರೆ ಹೋಗಿದ್ದರು. ಇದೀಗ ಬಿಗ್ ಬಾಸ್ ಮೂಲಗಳಿಂದ ಹೊಸ ಅಪ್ಡೇಟ್ ಬಂದಿದೆ.
ಈ ಬಾರಿಯ ಸೀಸನ್ ಅನ್ನು ಜಿಯೋ ಹಾಟ್ ಸ್ಟಾರ್ನಲ್ಲಿ 24 ಗಂಟೆ ಲೈವ್ ಇಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ. ಈ ಮೂಲಕ ರಾತ್ರಿ 9.30ಕ್ಕೆ ಎಪಿಸೋಡ್ಗೂ ಮೊದಲೇ ಕೆಲವು ವಿಚಾರಗಳನ್ನು ಲೈವ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದಲ್ಲಿ 24*7 ಲೈವ್ ಕೊಟ್ಟಿರಲಿಲ್ಲ. ಆದರೆ, ಈ ಬಾರಿ ಲೈವ್ ಇರಲಿದೆ ಎಂದು ಮೂಲಗಳು ತಿಳಿಸಿವೆ.
Vaishnavi Gowda: ಮದುವೆಯಾಗಿ ಮೂರು ತಿಂಗಳ ಬಳಿಕ ಗುಡ್ ನ್ಯೂಸ್ ಕೊಟ್ಟ ವೈಷ್ಣವಿ ಗೌಡ
ಇನ್ನು ಪ್ರತಿ ಸೀಸನ್ ಆರಂಭಕ್ಕೂ ಮುನ್ನ ಕಲರ್ಸ್ ಕನ್ನಡ ವಾಹಿನಿ ಒಂದು ಪ್ರೆಸ್ ಮೀಟ್ ಆಯೋಜಿಸುವುದು ವಾಡಿಕೆ. ಆದರೆ ಈ ಬಾರಿ ಪ್ರೆಸ್ ಮೀಟ್ ಇಲ್ಲ. ಈ ಮೊದಲೇ ಶೋ ಬಗ್ಗೆ ಹಬ್ಬಿದ ವದಂತಿ ಬಗ್ಗೆ ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ಕರೆಯಲಾಗಿತ್ತು. ಅದರಲ್ಲಿ ಸುದೀಪ್ ಕೂಡ ಇದ್ದರು. ಹೀಗಾಗಿ, ಈಗ ಯಾವುದೇ ಹೊಸ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗುತ್ತಿಲ್ಲ ಎನ್ನಲಾಗುತ್ತಿದೆ.