ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ನಾಲ್ಕನೇ ವಾರದಲ್ಲಿ ಟಾಪ್ ಗೇರ್ಗೇರಿದೆ. ಮುಖ್ಯವಾಗಿ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿಕೊಟ್ಟ ಬಳಿಕ ಫಿಸಿಕಲ್ ಟಾಸ್ಕ್ಗಳೆಲ್ಲ ಶುರುವಾಗಿದ್ದು, ಶೋ ರಂಗೇರಿದೆ. ಇದರ ಮಧ್ಯೆ ಬಿಗ್ ಬಾಸ್ ಮನೆ ಮೊದಲ ಕ್ಯಾಪ್ಟನ್ ಅನ್ನು ಎದುರು ನೋಡುತ್ತಿದೆ. ಮೊದಲ ಮೂರು ವಾರ ದೊಡ್ಮನೆಗೆ ಯಾರೂ ಕ್ಯಾಪ್ಟನ್ ಇರಲಿಲ್ಲ. ಉಸ್ತುವಾರಿ ಹಾಗೂ ಬಿಗ್ ಬಾಸ್ ಅವರೇ ಎಲ್ಲ ಟಾಸ್ಕ್ ನೋಡಿಕೊಳ್ಳುತ್ತಿದ್ದರು. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಕ್ಯಾಪ್ಟನ್ ಆಗಲು ಮ್ಯೂಟೆಂಟ್ ರಘು ಹಾಗೂ ರಿಷಾ ಗೌಡ ಮಧ್ಯೆ ಫೈಟ್ ನಡೆದಿದೆ.
ಈ ವಾದರ ಆರಂಭದಲ್ಲಿ ಬಿಗ್ ಬಾಸ್ ಈ ಮನೆಯ ಮೊದಲ ಕ್ಯಾಪ್ಟನ್ ಆಯ್ಕೆ ಮಾಡಲು ಮನೆಯ ಸದಸ್ಯರನ್ನು ಮೂರು ತಂಡಗಳನ್ನಾಗಿ ಮಾಡಿ ಒಂದು ಟಾಸ್ಕ್ ನೀಡಿದ್ದರು. ವಿವಿಧ ಮುಖಬೆಲೆಯ ನಕಲಿ ನಾಣ್ಯಗಳು ಗಾರ್ಡನ್ ಏರಿಯಾದಲ್ಲಿ ಕಾಲಕಾಲಕ್ಕೆ ಸುರಿಯುತ್ತದೆ. ಯಾರು ಹೆಚ್ಚು ನಾಣ್ಯಗಳನ್ನು ಹೊಂದುತ್ತಾರೊ ಆ ತಂಡ ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆಯುತ್ತದೆ ಎಂದಿತ್ತು. ಈ ತಂಡಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಸೂರಜ್ ಸಿಂಗ್, ಮ್ಯೂಟೆಂಟ್ ರಘು ಹಾಗೂ ರಿಷಾ ಗೌಡ ಕ್ಯಾಪ್ಟನ್ ಆಗಿದ್ದರು. ಆದರೆ, ಗುರುವಾರ ಬಿಗ್ ಬಾಸ್ ಮೂವರು ಕನ್ಫೆಷನ್ ರೂಂಗೆ ಕರೆಸಿ ಮೂವರಿಗೂ ವಿಶೇಷ ಆಫರ್ ನೀಡಿದರು.
ಮೂವರಿಗೂ ವಿಶೇಷ ನಾಣ್ಯ ನೀಡಿ, ಆ ನಾಣ್ಯವನ್ನು ತೆಗೆದುಕೊಂಡವರು ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಆಗುತ್ತಾರೆ. ಆದರೆ ಅವರ ತಂಡ ಕ್ಯಾಪ್ಟೆನ್ಸಿ ಟಾಸ್ಕ್ನಿಂದ ಹೊರಗೆ ಉಳಿಯುತ್ತದೆ ಎಂಬ ನಿಯಮ ಹಾಕಿದರು. ಆ ಆಫರ್ ಅನ್ನು ರಘು ಮತ್ತು ರಿಶಾ ಪಡೆದುಕೊಂಡರು. ಆದರೆ ಸೂರಜ್ ತೆಗೆದುಕೊಳ್ಳಲಿಲ್ಲ. ಅಂತಿಮವಾಗಿ ನಾಣ್ಯಗಳ ಟಾಸ್ಕ್ ಮುಗಿದಾಗ ಸೂರಜ್ ತಂಡ ಸೋತು, ಸೂರಜ್ ಅವರು ಕ್ಯಾಪ್ಟೆನ್ಸಿ ಟಾಸ್ಕ್ಗೆ ಆಯ್ಕೆ ಆಗಲಿಲ್ಲ.
ರಘು ಅವರ ತಂಡ ಗೆದ್ದಿತಾದರೂ ರಘು, ಆಫರ್ ಸ್ವೀಕಾರ ಮಾಡಿದ್ದರಿಂದ ಅವರ ತಂಡ, ಕ್ಯಾಪ್ಟೆನ್ಸಿ ಟಾಸ್ಕ್ಗೆ ಹೋಗಲಿಲ್ಲ. ಅತ್ಯಂತ ಕಡಿಮೆ ನಾಣ್ಯಗಳನ್ನು ಸಂಗ್ರಹಿಸಿದ್ದ ರಿಷಾ ಸಹ ಕ್ಯಾಪ್ಟೆನ್ಸಿ ಟಾಸ್ಕ್ಗೆ ಆಯ್ಕೆ ಆದರು. ಈಗ ರಘು ಮತ್ತು ರಿಷಾ ಮಾತ್ರವೇ ಕ್ಯಾಪ್ಟೆನ್ಸಿ ಫೈನಲ್ ಟಾಸ್ಕ್ಗೆ ಅರ್ಹತೆ ಪಡೆದಿದ್ದಾರೆ. ಅದರಂತೆ ಇಂದು ಇವರಿಬ್ಬರ ಮಧ್ಯೆ ಕ್ಯಾಪ್ಟನ್ಸಿ ಟಾಸ್ಕ್ ನಡೆಯಲಿದೆ. ಟಾಸ್ಕ್ ಏನಪ್ಪ ಅಂದ್ರೆ, ಆ್ಯಕ್ಟಿವಿಟಿ ರೂಮ್ನಲ್ಲಿ ಕಗ್ಗತ್ತಲ ವಾತಾವರಣ ಸೃಷ್ಟಿಸಲಾಗಿದೆ. ಇಲ್ಲಿ ತನ್ನ ಹೆಸರಿನ ಅಕ್ಷರಗಳನ್ನು ಹುಡುಕಬೇಕು.. ಅದನ್ನು ಸರಿಯಾಗಿ ಜೋಡಿಸಬೇಕು.. ಅತಿ ಕಡಿಮೆ ಸಮಯದಲ್ಲಿ ಈ ಟಾಸ್ಕ್ ಅನ್ನು ಯಶಸ್ವಿಯಾಗಿ ಮುಗಿಸಿದ ಸದಸ್ಯ ಬಿಬಿಕೆ 12ರ ಮೊದಲ ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಾರೆ. ಮೂಲಗಳ ಪ್ರಕಾರ ಈ ಟಾಸ್ಕ್ ಅನ್ನು ಮ್ಯೂಟೆಂಟ್ ರಘು ಗೆದ್ದು ಕ್ಯಾಪ್ಟನ್ ಆಗಿದ್ದಾರಂತೆ.
BBK 12: ಬಿಗ್ ಬಾಸ್ನಲ್ಲಿ ಸಿಕ್ಕ ಸಂಭಾವನೆ ಎಷ್ಟು?, ರಿವೀಲ್ ಮಾಡಿದ ಮಂಜು ಭಾಷಿಣಿ