ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12 AI Concept: ಈ ಬಾರಿಯ ಬಿಗ್ ಬಾಸ್ ಸೀಸನ್​ನಲ್ಲಿ ಊಹಿಸಲಾಗದ ಕಾನ್ಸೆಪ್ಟ್

ಪ್ರತಿ ಸೀಸನ್‌ಗೂ ಆಯಾ ಕಾನ್ಸೆಪ್ಟ್ ಮೇಲೆ ಪ್ರೋಮೋ ಶೂಟ್ ಮಾಡೋದು ವಾಡಿಕೆ. ಅದರಂತೆ ಈ ಬಾರಿಯ ಪ್ರೋಮೋಕ್ಕೆ ಸದ್ಯ ಟ್ರೆಂಡಿಂಗ್ನಲ್ಲಿರುವ ಎಐ ಟಚ್ ನೀಡಲಾಗಿದೆ. ಈ ಮೂಲಕ ವೀಕ್ಷಕರಿಗೆ ಅನಿರೀಕ್ಷಿತ ಸರ್‌ಪ್ರೈಸ್‌ ಸಿಕ್ಕಿದೆ. ರಿಲೀಸ್ ಆಗಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್‌ ಕಾಗೆ - ನರಿ ಕಥೆ ಹೇಳಿದ್ದಾರೆ.

BBK 12 New Promo

ಕನ್ನಡದ ಜನಪ್ರಿಯ ಹಾಗೂ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 (Bigg Boss Kannada) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ಸೆಪ್ಟೆಂಬರ್ 28 ರಿಂದ ದೊಡ್ಮನೆ ಆಟ ಶುರುವಾಗಿದೆ. ಇತ್ತೀಚೆಗಷ್ಟೆ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ದಿನ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿತು. ಬಳಿಕ ಮೊನ್ನೆ ಶನಿವಾರ ಎರಡನೇ ಪ್ರೋಮೋ ರಿಲೀಸ್ ಮಾಡಿದ್ದು, ಇದನ್ನು ನೋಡಿದ ಬಳಿಕ ಶೋ ಮೇಲಿನ ಕುತೂಹಲ ದುಪ್ಪಟ್ಟಾಗಿದೆ.

ಪ್ರತಿ ಸೀಸನ್‌ಗೂ ಆಯಾ ಕಾನ್ಸೆಪ್ಟ್ ಮೇಲೆ ಪ್ರೋಮೋ ಶೂಟ್ ಮಾಡೋದು ವಾಡಿಕೆ. ಅದರಂತೆ ಈ ಬಾರಿಯ ಪ್ರೋಮೋಕ್ಕೆ ಸದ್ಯ ಟ್ರೆಂಡಿಂಗ್​ನಲ್ಲಿರುವ ಎಐ ಟಚ್ ನೀಡಲಾಗಿದೆ. ಈ ಮೂಲಕ ವೀಕ್ಷಕರಿಗೆ ಅನಿರೀಕ್ಷಿತ ಸರ್‌ಪ್ರೈಸ್‌ ಸಿಕ್ಕಿದೆ. ರಿಲೀಸ್ ಆಗಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್‌ ಕಾಗೆ - ನರಿ ಕಥೆ ಹೇಳಿದ್ದಾರೆ. ಆ ಕಥೆಯ ಮೂಲಕ ಈ ಬಾರಿಯ ಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮದ ಕಾನ್ಸೆಪ್ಟ್‌ ಮತ್ತು ಥೀಮ್ ಬಗ್ಗೆ ದೊಡ್ಡ ಸುಳಿವು ಬಿಚ್ಚಿಟ್ಟಿದ್ದಾರೆ.

ಈ ಸಲ ನೀವಿದ್ದೀರಾ.. ನೀವಿದ್ದೀರಾ ಅಂತ ಕೇಳ್ತಾ ಇದ್ದೋರು, ಈಗ ನೆಕ್ಸ್ಟ್‌ ಏನು.. ನೆಕ್ಸ್ಟ್‌ ಏನು ಅಂತ ಕೇಳ್ತಿದ್ದೀರಾ. ಒಂದ್ ಕಥೆ ಹೇಳ್ಲಾ? ನೀವೆಲ್ಲಾ ಸ್ಕೂಲ್‌ನಲ್ಲಿ ಕೇಳಿರುವ ಕಥೆ.. ಒಂದೂರಲ್ಲಿ ಒಂದು ಕಾಗೆ ಇತ್ತಂತೆ. ಆ ಕಾಗೆಗೆ ಹಸಿವಾಗಿತ್ತಂತೆ. ಹೀಗಾಗಿ, ವಡೆ ಮಾಡುತ್ತಿರುವ ಅಜ್ಜಿ ಬಳಿ ಹೋಗಿ.. ಅಜ್ಜಿ ಅಜ್ಜಿ.. ನನಗೊಂದು ವಡೆ ಕೊಡಿ ಅಂತ ಕೇಳ್ತಂತೆ. ಅಜ್ಜಿ ಪ್ರೀತಿಯಿಂದ ಒಂದು ವಡೆ ಕೊಟ್ರಂತೆ. ಕಾಗೆ ಆ ವಡೆಯನ್ನ ತಗೊಂಡ್ ಹಾರಿಕೊಂಡು ಹೋಗಿ, ಒಂದು ಮರದ ಮೇಲೆ ಕೂತು, ಇನ್ನೇನು ತಿನ್ನಬೇಕು ಎನ್ನುವಷ್ಟರಲ್ಲಿ ಒಬ್ಬನ ಎಂಟ್ರಿ.. ವಿಲನ್!

ಕಾಗೆ ಬಾಯಲ್ಲಿದ್ದ ವಡೆಯನ್ನ ಕಿತ್ತುಕೊಳ್ಳಲು ಸ್ಕೆಚ್ ಹಾಕಿದ ನರಿ, ಕಾಕಾ.. ಕಾಕಾ.. ನೀನು ಕೋಗಿಲೆ ತರಹ ಹಾಡು ಹಾಡ್ತೀಯಾ.. ನನಗೋಸ್ಕರ ಒಂದು ಹಾಡು ಹಾಡು ಅಂತ ಹೇಳ್ತಂತೆ. ನಿಮಗೆಲ್ಲಾ ಗೊತ್ತಿರುವ ಹಾಗೆ ಕಾಗೆ ಹಾಡೋದಕ್ಕೂ, ವಡೆ ಬಾಯಿಂದ ಕೆಳಗೆ ಬೀಳೋದಕ್ಕೂ, ಇನ್ನೇನು ವಡೆ ನರಿ ಬಾಯಿಗೆ ಸೇರಬೇಕು ಎನ್ನುವಾಗ.. ನಿಮಗೆಲ್ಲಾ ಕ್ಲೈಮ್ಯಾಕ್ಸ್ ಗೊತ್ತಿದೆ ಅಂತ ಅಂದ್ಕೊಂಡ್ರೆ, ಓ ಭ್ರಮೆ! ಅಂತ್ಹೇಳಿ ಕಿಚ್ಚ ಸುದೀಪ್‌ ನಗುವ ದೃಶ್ಯ ಪ್ರೋಮೋದಲ್ಲಿದೆ.



ಕಾಗೆ - ನರಿ ಕಥೆಗೆ ಕಿಚ್ಚ ಸುದೀಪ್‌ ಕೊಟ್ಟ ಕ್ಲೈಮ್ಯಾಕ್ಸ್ ಹೇಗಿತ್ತು ಗೊತ್ತಾ? ನರಿ ಕೇಳಿದಾಗ ಕಾಗೆ ಹಾಡು ಹಾಡ್ತು ನಿಜ. ಆದರೆ, ವಡೆಯನ್ನ ಕಾಗೆ ಕಾಲಲ್ಲಿ ಇಟ್ಟುಕೊಂಡು ಹಾಡು ಹಾಡಲು ಶುರು ಮಾಡಿತು. ವಡೆ ಸಿಗದೆ ನರಿ ವಾಪಸ್ ಹೋಯ್ತು. ಕಾಗೆ - ನರಿ ಕಥೆಯ ಕೊನೆಯಲ್ಲಿ ಯಾರೂ ನಿರೀಕ್ಷಿಸದ ಈ ಟ್ವಿಸ್ಟ್‌ ಅನ್ನ ಬಿಗ್ ಬಾಸ್ ಪ್ರೋಮೋದಲ್ಲಿ ಕೊಡಲಾಗಿದೆ.

ಪ್ರೋಮೋದಲ್ಲಿರುವ ಕಾಗೆ- ನರಿ ಕಥೆಯನ್ನು ಸಂಪೂರ್ಣವಾಗಿ ಎಐಯಿಂದ ಕ್ರಿಯೆಟ್ ಮಾಡಲಾಗಿದೆ. ಹೀಗಾಗಿ ಈ ಬಾರಿ ಕೃತಕ ಬುದ್ದಿಮತ್ತೆಯ ಕುರಿತು ಕಾನ್ಸೆಪ್ಟ್ ಇರಬಹುದ ಎಂಬ ಅನುಮಾನ ಶುರುವಾಗಿದೆ.

Mark Movie: 'ಮಾರ್ಕ್‌' ಚಿತ್ರದ ಫಸ್ಟ್‌ ಸಾಂಗ್‌ ಬಿಡುಗಡೆಗೆ ದಿನಗಣನೆ; ಮಹತ್ವದ ಅಪ್‌ಡೇಟ್‌ ಹಂಚಿಕೊಂಡ ಕಿಚ್ಚ ಸುದೀಪ್‌