ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ಮೂರು ವಾರ ಆಗುತ್ತ ಬರುತ್ತಿದೆ. ಈ ಮೂರು ವಾರಗಳಲ್ಲಿ ದೊಡ್ಮನೆಯೊಳಗಿನ ಸ್ಪರ್ಧಿಗಳು ಜನರಿಗೆ ಕನೆಕ್ಟ್ ಆಗಿದ್ದಾರೆ. ಕೆಲ ಸ್ಪರ್ಧಿಗಳನ್ನು ಜನರು ತುಂಬಾ ಇಷ್ಟಪಡುತ್ತಿದ್ದರೆ, ಇನ್ನೂ ಕೆಲ ಸ್ಪರ್ಧಿಗಳ ವಿರುದ್ಧ ಕೆಲ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಜನರು ಸದ್ಯ ಸಿಡಿದು ನಿಂತಿರುವುದು ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ ಹಾಗೂ ಜಾನ್ವಿ ವಿರುದ್ಧ. ಜಾನ್ವಿ ಅವರು ಅಶ್ವಿನಿ ಗೌಡ ಅವರ ಚಮಚದ ರೀತಿ ಕಾಣಿಸುತ್ತಿದ್ದಾರೆ. ಅವರು ಹೇಳಿದ್ದಕ್ಕೆಲ್ಲ ತಲೆ ಆಡಿಸಿಕೊಂಡಿದ್ದಾರೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಅಷ್ಟೇ ಅಲ್ಲದೆ ಅಶ್ವಿನಿ-ಜಾನ್ವಿ ಸೇರಿಕೊಂಡು ರಕ್ಷಿತಾ ಶೆಟ್ಟಿಯನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತು ಕಳೆದ ಎರಡು ಮೂರಿ ದಿನಗಳಿಂದ ಕೇಳಿ ಬರುತ್ತಿತ್ತು. ಇದಕ್ಕೆ ಬಲವಾದ ಸಾಕ್ಷಿ ಇಂದು ಸಿಕ್ಕಿದೆ. ಇಂದಿನ ಪ್ರೋಮೋದಲ್ಲಿ ರಕ್ಷಿತಾ ಮೇಲೆ ಅಶ್ವಿನಿ ಹಾಗೂ ಜಾನ್ವಿ ಅನಗತ್ಯವಾಗಿ ರೇಗಾಡಿದ್ದಾರೆ. ಇದನ್ನ ಕಂಡು ವೀಕ್ಷಕರಂತು ಇವರಿಬ್ಬರಿಗೆ ಮನಬಂದಂತೆ ಬೈಯುತ್ತಿದ್ದಾರೆ.
‘‘ಜಾಸ್ತಿ ಮಾತಾಡಬೇಡ, ಮುಚ್ಕೊಂಡ್ ಮಲಕೋ.. ಹೋಗಿ ನಿನ್ನ ಡ್ರಾಮಾನೆಲ್ಲಾ ಬಾತ್‌ರೂಮ್‌ನಲ್ಲಿ ಮಾಡು.. ಈಡಿಯೆಟ್’’, ‘‘ನೀನು ಎಲ್ಲಿಂದ ಬಂದಿದ್ಯಾ ಅಂತ ಗೊತ್ತು.. ನೋಡಿದ್ರೆ ಗೊತ್ತಾಗುತ್ತೆ’’ ಅಂತ ಸೂಟ್‌ಕೇಸ್, ಬಟ್ಟೆಗಳತ್ತ ಬೆಟ್ಟು ಮಾಡಿ ರಕ್ಷಿತಾ ಶೆಟ್ಟಿ ಮೇಲೆ ಅಶ್ವಿನಿ ಗೌಡ ಹಾಗೂ ಜಾನ್ವಿ ದರ್ಪ ತೋರಿಸಿದ್ದಾರೆ. ಇದನ್ನೆಲ್ಲಾ ಕಂಡ ವೀಕ್ಷಕರು ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ ಛೀಮಾರಿ ಹಾಕುತ್ತಿದ್ದಾರೆ.
ಈ ಮೊದಲು ಅಶ್ವಿನಿ ಹಾಗೂ ಜಾನ್ವಿ ಅವರು ಒಟ್ಟಾಗಿ ಗಿಲ್ಲಿ ನಟನ ಮೇಲೆ ಎರಗಿ ಬೀಳಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಗಿಲ್ಲಿ ನಟ ಸರಿಯಾಗಿ ತಿರುಗೇಟು ಕೊಡಲು ಆರಂಭಿಸಿದರು. ಈ ಕಾರಣದಿಂದ ಈಗ ಇವರಿಬ್ಬರೂ ರಕ್ಷಿತಾ ಶೆಟ್ಟಿನ ಟಾರ್ಗೆಟ್ ಮಾಡಿದ್ದಾರೆ. ಅವರ ಮೇಲೆ ಎಗರಾಡುತ್ತಿದ್ದಾರೆ.
ಇನ್ನು ಕಳೆದ ವಾರ ಕಿಚ್ಚನ ಪಂಚಾಯಿತಿಯಲ್ಲಿ ಅಶ್ವಿನಿ ಗೌಡ ಬಗ್ಗೆ ಕಾಕ್ರೋಚ್ ಸುಧಿ ಮಾತನಾಡುತ್ತ ಈಯಮ್ಮ ಎಂದಿದ್ದರು. ಅದನ್ನು ಮಧ್ಯದಲ್ಲೇ ತಡೆದ ಅಶ್ವಿನಿ ಗೌಡ, ನನಗೆ ಹೆಸರಿದೆ, ಈಯಮ್ಮ ಎಂದೆಲ್ಲಾ ಕರೆಯೋದು ನನಗೆ ಇಷ್ಟ ಇಲ್ಲ ಎಂದು ಹೇಳಿದ್ದರು. ಆ ಸಂದರ್ಭ ಕಿಚ್ಚ ಸುದೀಪ್ ಮುಂದೆ ಒಳ್ಳೆಯವಳಂತೆ ಪೋಸ್ ಕೊಟ್ಟ ಅಶ್ವಿನಿ ಗೌಡ, ಉಳಿದ ಸ್ಪರ್ಧಿಗಳನ್ನು ಅಡ್ಡ ಹೆಸರಲ್ಲಿ ಕರೆಯೋದು ಸರೀನಾ? ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.
BBK 12 TRP: ಬಿಗ್ ಬಾಸ್ ಟಿಆರ್ಪಿ ಔಟ್: ಮೊದಲ ವಾರದ ಕತೆಗೆ ಎಷ್ಟು ರೇಟಿಂಗ್?
ಈ ಹಿಂದೆ ಒಂಟಿಯಾಗಿದ್ದ ರಕ್ಷಿತಾ, ಜಂಟಿಗಳ ಜೊತೆ ಹೋದಾಗ, ಆ ಕಾರ್ಟೂನ್ ಅಲ್ಲಿ ಏನ್ ಮಾಡ್ತಿದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ ಇತ್ತೀಚೆಗೆ ಕಾವ್ಯಾ ಶೈವಾಗೆ ಆಕೆ ಫ್ರೀ ಪ್ರಾಡಕ್ಟ್, ಗಿಲ್ಲಿಯಿಂದಾಗಿಯೇ ಆಕೆ ಗುರುತಿಸಿಕೊಂಡಿದ್ದಾಳೆ ಎಂದು ಹೇಳಿದ್ದರು. ಇನ್ನೊಂದು ಸಲ ಮಾತಿನ ಬರದಲ್ಲಿ ಮಂಜು ಭಾಷಿಣಿಗೆ ಡುಮ್ಮಿ ಎಂದು ಕರೆದಿದ್ದರು. ಆದರೆ, ಇದನ್ನೆಲ್ಲಾ ಮರೆತು, ತಮ್ಮನ್ನು ಇನ್ಯಾರೋ ಈಯಮ್ಮ ಎಂದಿದ್ದಕ್ಕೆ ಮಾತ್ರ ಕೋಪ ಮಾಡಿಕೊಂಡು, ಸುದೀಪ್ ಎದುರು ನನ್ನನ್ನು ಹಾಗೆ ಕರೆಯಬಾರದು ಎಂದು ಹೇಳೀರ್ದಕ್ಕೆ ವೀಕ್ಷಕರು ಕಿಡಿ ಕಾರಿದ್ದಾರೆ.
ಎಲ್ಲರ ಕಾಲೆಳೆಯುತ್ತಾ, ತಾವೇ ಸರ್ವಾಧಿಕಾರಿ ಎನ್ನುವಂತೆ ಆಡುವ ಅಶ್ವಿನಿ ಗೌಡ ಅವರಿಗೆ ಸುದೀಪ್ ಈ ವೀಕೆಂಡ್ನಲ್ಲಾದರೂ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಜನ ಕೇಳಿದ್ದಾರೆ. ಹಾಗೆಯೆ ಜಾನ್ವಿಗೆ ಎಚ್ಚರಿಕೆಯ ಸಂದೇಶ ನೀಡಬೇಕು ಎಂಬುದು ಜನರ ಅಭಿಪ್ರಾಯ. ಸದ್ಯ ಈ ವಾರದ ವೀಕೆಂಡ್ ಸಾಕಷ್ಟು ಕುತೂಹಲ ಮೂಡಿಸಿದೆ.