ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kannada Serial TRP: ಕರ್ಣ ನಂಬರ್ 1, ಅಮೃತಧಾರೆ ನಂಬರ್ 2: ಬಿಗ್ ಬಾಸ್​ಗೆ ಎಷ್ಟು ಟಿಆರ್​ಪಿ?

ಕಳೆದ ಕೆಲವು ವಾರಗಳಿಂದ ಭರ್ಜರಿ ಟ್ವಿಸ್ಟ್-ಟರ್ನ್ ಮೂಲಕ ನಗುವಿನ ಚಟಾಕಿ ಹಾರಿಸುತ್ತಿರುವ ಝೀ ಕನ್ನಡದ ಅಮೃತಧಾರೆ ಧಾರಾವಾಹಿಯ ಟಿಆರ್ಪಿಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಕಳೆದ ವಾರ ನಂಬರ್ ಒನ್ ಸ್ಥಾನದಲ್ಲಿದ್ದ ಈ ಸೀರಿಯಲ್ ಈಗ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಅಮೃತಧಾರೆ 9.1 ಟಿವಿಆರ್ ಪಡೆದು ಎರಡನೇ ಸ್ಥಾನದಲ್ಲಿದೆ.

Kannada Serial TRP

ಕನ್ನಡ ಕಿರುತೆರೆಯಲ್ಲಿ ಸೀರಿಯಲ್​ಗಳ (Kannada Serial) ಹಾಗೂ ರಿಯಾಲಿಟಿ ಶೋಗಳ ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಇದರಲ್ಲಿ ಕೆಲವು ವರ್ಕೌಟ್ ಆದರೆ ಇನ್ನೂ ಕೆಲವು ಧಾರಾವಾಹಿಗೆ ಕೆಟ್ಟ ಕಮೆಂಟ್​ಗಳು ಬರುತ್ತವೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್​​ಪಿ ಮೂಲಕ ತಿಳಿಯಲಿದೆ. ಇದೀಗ 42ನೇ ವಾರದ ಟಿಆರ್​ಪಿ ಹೊರಬಿದ್ದಿದ್ದು, ಕಳೆದ ಮೂರು ವಾರಗಳಿಂದ ಧೂಳೆಬ್ಬಿಸುತ್ತಿರುವ ಅಮೃತಧಾರೆ ಧಾರಾವಾಹಿ ಟಿಆರ್​ಪಿ ಕುಸಿದರೆ ಕರ್ಣ ಮತ್ತೆ ನಂಬರ್ ಒನ್ ಆಗಿದ್ದಾನೆ.

ಹೌದು, ಕಳೆದ ಕೆಲವು ವಾರಗಳಿಂದ ಭರ್ಜರಿ ಟ್ವಿಸ್ಟ್-ಟರ್ನ್ ಮೂಲಕ ನಗುವಿನ ಚಟಾಕಿ ಹಾರಿಸುತ್ತಿರುವ ಝೀ ಕನ್ನಡದ ಅಮೃತಧಾರೆ ಧಾರಾವಾಹಿಯ ಟಿಆರ್​ಪಿಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಕಳೆದ ವಾರ ನಂಬರ್ ಒನ್ ಸ್ಥಾನದಲ್ಲಿದ್ದ ಈ ಸೀರಿಯಲ್ ಈಗ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಅಮೃತಧಾರೆ 9.1 ಟಿವಿಆರ್ ಪಡೆದು ಎರಡನೇ ಸ್ಥಾನದಲ್ಲಿದೆ. ಕಳೆದ ಕೆಲವು ವಾರಗಳಿಂದ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದ ಕರ್ಣ ಧಾರಾವಾಹಿ 10.1 ಟಿವಿಆರ್​ನೊಂದಿಗೆ ಟಾಪ್​ ಗೇರಿದೆ.

ಅಣ್ಣಯ್ಯ 9.0 ಟಿವಿಆರ್ ಪಡೆದು ಮೂರನೇ ಸ್ಥಾನ ಕಾಪಾಡಿಕೊಂಡಿದೆ. ಕಳೆದ ಕೆಲವು ವಾರಗಳಿಂದ ಅಣ್ಣಯ್ಯ ಧಾರಾವಾಹಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ಧಾರಾವಾಹಿ ಮುಂದಿನ ವಾರ ನಂಬರ್ ಒನ್ ಸ್ಥಾನಕ್ಕೇರುವ ಸಾಧ್ಯತೆ ಇದೆ.

ಇತ್ತ ಕಲರ್ಸ್ ಕನ್ನಡದ ವಿಚಾರಕ್ಕೆ ಬಂದರೆ, ನಂದಗೋಕುಲ ಧಾರಾವಾಹಿ ಟಾಪ್​ನಲ್ಲಿದೆ. ಈ ಧಾರಾವಾಹಿಗೆ 6.4 ಟಿವಿಆರ್ ಲಭಿಸಿದೆ. ಭಾರ್ಗವಿ ಎಲ್​.ಎಲ್​.ಬಿ ಧಾರಾವಾಹಿ ಅರ್ಬಲ್‌ + ರೂರಲ್‌ ಮಾರ್ಕೆಟ್‌ನಲ್ಲಿ 5.4 ಟಿವಿಆರ್‌ ಸಿಕ್ಕಿದೆ. ಮುದ್ದು ಸೊಸೆ ಧಾರಾವಾಹಿ 5.2 ಟಿವಿಆರ್ ಪಡೆದು ಕಲರ್ಸ್​ನ ಮೂರನೇ ಧಾರಾವಾಹಿ ಆಗಿದೆ.

BBK 12: ಅಶ್ವಿನಿ ಗೌಡ ತಾಕತ್ತಿಗೆ ಸಿಂಗಲ್ ಸಿಂಹ ಗಿಲ್ಲಿ ಸವಾಲ್

ಇನ್ನು ಬಿಗ್ ಬಾಸ್ ವಿಚಾರಕ್ಕೆ ಬಂದರೆ ಬಿಬಿಕೆ 12ರ ನಾಲ್ಕನೇ ವಾರದ ಶನಿವಾರದ ಸಂಚಿಕೆಗೆ ಅರ್ಬನ್‌ + ರೂರಲ್‌ ಮಾರ್ಕೆಟ್‌ನಲ್ಲಿ 7.9 ಟಿವಿಆರ್‌ ದಾಖಲಾಗಿದೆ. ಭಾನುವಾರದ ಸೂಪರ್ ಸಂಡೆ ವಿಥ್ ಸುದೀಪ ಸಂಚಿಕೆಗೆ 8.2 ಟಿವಿಆರ್ ಲಭಿಸಿದೆ. ವಾರದ ರಿಯಾಲಿಟಿ ಸಂಚಿಕೆಗಳಿಗೆ ಅರ್ಬನ್ + ರೂರಲ್‌ ಮಾರ್ಕೆಟ್‌ನಲ್ಲಿ 6.0 ಟಿವಿಆರ್‌ ಲಭಿಸಿದೆ. ಝೀ ಕನ್ನಡದಲ್ಲಿ ಪ್ರಸಾರ ಕಂಡ ಝೀ ಕುಟುಂಬ ಅವಾರ್ಡ್ ಕಾರ್ಯಕ್ರಮಕ್ಕೆ 5.4 ಟಿವಿಆರ್‌ ಸಿಕ್ಕಿದೆ.