ಬಿಗ್ ಬಾಸ್ ಕನ್ನಡ (Bigg Boss Kannada 12) ಹೊಸ ಸೀಸನ್ಗಾಗಿ ಕಾತುರದಿಂದ ಕಾಯುತ್ತಿದ್ದ ಫ್ಯಾನ್ಸ್ಗೆ ಕೊನೆಗೂ ಗುಡ್ ನ್ಯೂಸ್ ಸಿಗುತ್ತಿದೆ. ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಕಾರಣ ಇಂದು ಬಿಬಿಕೆ 12ರ ಮೊದಲ ಪ್ರೋಮೋ ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೆ ಸ್ವಾತಂತ್ರ್ಯ ದಿನದಂದು ಆಗಸ್ಟ್ 15 ರಂದು ಬಿಗ್ ಬಾಸ್ ಕನ್ನಡ ಸೀಸನ್ 12ರ ಹೊಸ ಲೋಗೋ ಬಿಡುಗಡೆ ಮಾಡುವ ಮೂಲಕ ಸದ್ಯದಲ್ಲೇ ಅತಿ ದೊಡ್ಡ ರಿಯಾಲಿಟಿ ಶೋ ಶುರುವಾಗುವ ಸೂಚನೆ ನೀಡಿತ್ತು. ಇದೀಗ ಇಂದು ಸುದೀಪ್ ಅವರ ಮೊದಲ ಪ್ರೋಮೋ ಔಟ್ ಆಗಲಿದೆ.
ಈ ಬಾರಿ ಹೊಸ ಸೀಸನ್‌ಗೆ ತಕ್ಕಂತೆ ವಿಶೇಷ ಪ್ರೋಮೋವನ್ನು ಶೂಟ್ ಮಾಡಲಾಗಿದೆಯಂತೆ. ಈ ಬಾರಿ ಬಿಗ್ ಬಾಸ್ ಲೋಗೊ ಕೂಡ ಭಿನ್ನವಾಗಿದೆ. ಚಿನ್ನದ ಬಣ್ಣದ ಅಂಚು ಅದರೊಳಗೆ ವಜ್ರಗಳ ರೀತಿ ಕಾಣುವಂತೆ ಡಿಸೈನ್ ಮಾಡಲಾಗಿದೆ. ಬಿಗ್ ಬಾಸ್ನ ಲೋಗೋದ ಮಧ್ಯ ಭಾಗದಲ್ಲಿ ಗಡಿಯಾರವೊಂದು ಕಾಣುತ್ತದೆ. ಲೋಗೋದ ಕಣ್ಣಿನಲ್ಲೇ 12 ಎಂದು ಡಿಸೈನ್ ಮಾಡಲಾಗಿದೆ. ಪ್ರತಿ ಸೀಸನ್‌ಗೂ ಆಯಾ ಕಾನ್ಸೆಪ್ಟ್ ಮೇಲೆ ಲೋಗೋ ಡಿಸೈನ್ ಆಗೋದು ವಾಡಿಕೆ.
ಈ ಬಾರಿ ಲೋಗೋದಲ್ಲಿ ಗಡಿಯಾರ ಇರುವುದರಿಂದ ಸಮಯದ ಮೇಲೆ ಏನಾದರೂ ಕಾನ್ಸೆಪ್ಟ್ ಮಾಡಲಾಗಿದೆಯಾ? ಎಂಬ ಅನುಮಾನ ಹುಟ್ಟುಕೊಂಡಿದೆ. ಇದಕ್ಕೆಲ್ಲ ಇಂದು ತೆರೆ ಬೀಳುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ವಾಚ್ ಅಥವಾ ಗಡಿಯಾರ ಇರುವುದಿಲ್ಲ. ಹೀಗಿರುವಾಗ ಈ ಬಾರಿ ಲೋಗೋದಲ್ಲೇ ವಾಚ್ ಬಂದಿರುವ ಕಾರಣ ಸಮಯಕ್ಕೆ ಸಂಬಂಧಿಸಿದ ಡಿಫರೆಂಟ್ ಕಾನ್ಸೆಪ್ಟ್ ಇರಬಹುದು ಎಂಬ ಚರ್ಚೆ ನಡೆಯುತ್ತಿದೆ.
Vijay Surya: ವಿಜಯ್ ಸೂರ್ಯ ಮನೆಯಲ್ಲಿ ಅದ್ಧೂರಿ ಲಕ್ಷ್ಮೀ ಪೂಜೆ: ಮನೆಗೆ ಬಂದ್ರು ಕಿರುತೆರೆ ಎಲ್ಲ ಮಹಾಲಕ್ಷ್ಮಿಯರು
ಬಿಗ್ ಬಾಸ್ ಸೀಸನ್ 12 ಸೆಪ್ಟೆಂಬರ್ 28ಕ್ಕೆ ಪ್ರಾರಂಭ ಆಗಲಿದೆ ಎಂದು ಈಗಾಗಲೇ ಕಿಚ್ಚ ಸುದೀಪ್ ಘೋಷಣೆ ಮಾಡಿದ್ದಾರೆ. ಸ್ಪರ್ಧಿಗಳ ಸಂಭಾವ್ಯ ಪಟ್ಟಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಪೈಕಿ ನ್ಯೂಸ್ ಆಂಕರ್ ಚಂದನ್ ಶರ್ಮಾ, ಡಾ ಬ್ರೋ, ಅರ್ಚನಾ ಜೋಯಿಸ್, ಜಾಹ್ನವಿ, ಶ್ರೀ ಮಹಾದೇವ್, ಗಗನ್ ಚಿನ್ನಪ್ಪ, ಪೂಜಾ ಲೋಕೇಶ್, ನೂರು ಜನ್ಮಕೂ, ಗೀತಾ ಸೀರಿಯಲ್‌ನಲ್ಲಿ ನಟಿಸಿದ್ದ ಧನುಷ್ ಗೌಡ ಹೀಗೆ ಕೆಲವು ಹೆಸರುಗಳಿವೆ.