Satya Naidu Marriage: ಅದ್ಧೂರಿಯಾಗಿ ನಡೆಯಿತು ಚೈತ್ರಾ ವಾಸುದೇವನ್ ಮಾಜಿ ಪತಿಯ ಎರಡನೇ ಮದುವೆ: ವಿಡಿಯೋ ನೋಡಿ
ಚೈತ್ರಾ ವಾಸುದೇವನ್ ಎರಡನೇ ಮದುವೆಯಾದ ಬೆನ್ನಲ್ಲೇ ಇವರ ಮೊದಲ ಪತಿ ಕೂಡ ಎರಡನೇ ಮದುವೆಯಾಗಿದ್ದಾರೆ. ಚೈತ್ರಾ ಮಾಜಿ ಗಂಡ ಸತ್ಯ ಅವರ ಅದ್ಧೂರಿ ಮದುವೆ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. 2017ರಲ್ಲಿ ಚೈತ್ರಾ ವಾಸುದೇವನ್ - ಸತ್ಯ ನಾಯ್ಡು ಮದುವೆಯಾದರು. ಕಾರಣಾಂತರಗಳಿಂದ 2023ರಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ಇಬ್ಬರೂ ವಿಚ್ಛೇದನ ಪಡೆದರು.

Satya Naidu Marriage

ಚಂದನವನದ ಸ್ಟಾರ್ ನಿರೂಪಕಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್ ಮೊನ್ನೆಯಷ್ಟೆ ಅದ್ಧೂರಿಯಾಗಿ ಎರಡನೇ ಮದುವೆಯಾಗಿದ್ದಾರೆ. ಉದ್ಯಮಿ ಜಗದೀಪ್ ಜೊತೆ ನಿರೂಪಕಿ ಹಸೆಮಣೆ ಏರಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಚೈತ್ರಾ ಅವರು, ಜಗದೀಪ್ ಎಲ್. ಅವರ ಜೊತೆ ವಿವಾಹವಾದರು. ಈ ಹಿಂದೆ ಚೈತ್ರಾ ಅವರು 2017 ರಲ್ಲಿಯೇ ಸತ್ಯ ನಾಯ್ಡು ಅವರನ್ನ ಮದುವೆ ಆಗಿದ್ದರು. ಅಪ್ಪ ಅಮ್ಮನ ಆಸೆಯಂತೆ ಮದುವೆ ಆಗಿದ್ದ ಚೈತ್ರಾ ವಾಸುದೇವನ್, ಬಳಿಕ ವಿಚ್ಛೇದನ ಪಡೆದುಕೊಂಡರು. ಇದೀಗ ಚೈತ್ರಾ ವಾಸುದೇವನ್ ಎರಡನೇ ಮದುವೆಯಾದ ಬೆನ್ನಲ್ಲೇ ಇವರ ಮೊದಲ ಪತಿ ಕೂಡ ಎರಡನೇ ಮದುವೆಯಾಗಿದ್ದಾರೆ.
ಚೈತ್ರಾ ಮಾಜಿ ಗಂಡ ಸತ್ಯ ಅವರ ಅದ್ಧೂರಿ ಮದುವೆ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. 2017ರಲ್ಲಿ ಚೈತ್ರಾ ವಾಸುದೇವನ್ - ಸತ್ಯ ನಾಯ್ಡು ಮದುವೆಯಾದರು. ಕಾರಣಾಂತರಗಳಿಂದ 2023ರಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ಇಬ್ಬರೂ ವಿಚ್ಛೇದನ ಪಡೆದರು. ಬಳಿಕ ಜಗದೀಪ್ ಅವರನ್ನ ಪ್ರೀತಿಸಿದ ಚೈತ್ರಾ ಮಾರ್ಚ್ 2 ರಂದು ಎರಡನೇ ವಿವಾಹವಾದರು. ಇದರ ಬೆನ್ನಲ್ಲೇ ಮಾರ್ಚ್ 3 ರಂದು ಮಾಜಿ ಪತಿ ಸತ್ಯ ನಾಯ್ಡು ಸಹ ವಸುಂಧರಾ ರೆಡ್ಡಿ ಜೊತೆಗೆ ಹೊಸ ಜೀವನ ಆರಂಭಿಸಿದ್ದಾರೆ.
ಸತ್ಯ ನಾಯ್ಡು - ವಸುಂಧರಾ ರೆಡ್ಡಿ ಅವರ ಮದುವೆಗೆ ರಾಜಕೀಯ ಮುಖಂಡರು ಹಾಜರಾಗಿದ್ದರು. ಸತ್ಯ ನಾಯ್ಡು ಅವರು ನಲಪಾಡ್ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ನಲಪಾಡ್ ಅವರ ಜೊತೆ ಸತ್ಯ ನಾಯ್ಡು ಅವರು ಕಾಣಿಸಿಕೊಳ್ಳೋದು ಜಾಸ್ತಿ. ಇನ್ನು ಚಿತ್ರರಂಗದ ಕೆಲ ಗಣ್ಯರ ಜೊತೆ ಆತ್ಮೀಯತೆ ಹೊಂದಿದ್ದಾರೆ.
2017ರಲ್ಲಿ ಉದ್ಯಮಿ ಸತ್ಯ ನಾಯ್ಡು - ಚೈತ್ರಾ ವಾಸುದೇವನ್ ವಿವಾಹ ಮಹೋತ್ಸವ ಅತ್ಯಂತ ಗ್ರ್ಯಾಂಡ್ ಆಗಿ ನಡೆದಿತ್ತು. ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಸತ್ಯ ನಾಯ್ಡು - ಚೈತ್ರಾ ವಾಸುದೇವನ್ ಮದುವೆಗೆ ಹಾಜರಾಗಿ, ನವದಂಪತಿಗೆ ಶುಭ ಹಾರೈಸಿದ್ದರು. ಆದರೆ, ಮದುವೆಯಾದ ಆರು ವರ್ಷಗಳಲ್ಲಿ ಸಂಸಾರ ಮುರಿದುಬಿತ್ತು. ಬೇರೆ ಬೇರೆಯಾಗಲು ಚೈತ್ರಾ ವಾಸುದೇವನ್ - ಸತ್ಯ ನಾಯ್ಡು ನಿರ್ಧರಿಸಿದರು. 2023ರಲ್ಲಿ ಚೈತ್ರಾ ವಾಸುದೇವನ್ - ಸತ್ಯ ನಾಯ್ಡು ವಿಚ್ಛೇದನ ಪಡೆದರು.
Bhagya Lakshmi Serial: ಕುಸುಮಾ ಕಾಲಿಗೆ ಬಿತ್ತು ಬಿಸಿ-ಬಿಸಿ ಕುದಿಯುವ ನೀರು: ಭಾಗ್ಯಾಳ ಹೊಸ ಕೆಲಸಕ್ಕೂ ಸಂಕಷ್ಟ