Bhagya Lakshmi Serial: ಕುಸುಮಾ ಕಾಲಿಗೆ ಬಿತ್ತು ಬಿಸಿ-ಬಿಸಿ ಕುದಿಯುವ ನೀರು: ಭಾಗ್ಯಾಳ ಹೊಸ ಕೆಲಸಕ್ಕೂ ಸಂಕಷ್ಟ
Bhagya Lakshmi Serial: ಭಾಗ್ಯ ಕೂಡಲೇ ಮನೆಗೆ ಫೋನ್ ಮಾಡಿ, ಅತ್ತೆ ಹಾಗೂ ತಂಗಿಯನ್ನು ಕರೆಸಿಕೊಳ್ಳುತ್ತಾಳೆ. ಅದರಂತೆ ಮೂವರು ಸೇರಿಕೊಂಡು 250 ಜನರಿಗೆ ಅಡುಗೆ ಶುರುಮಾಡುತ್ತಾರೆ. ಆದರೆ, ಹೀಗೆ ಅಡುಗೆ ಮಾಡುವಾಗ ಕುಸುಮಾ ದೊಡ್ಡ ಎಡವಟ್ಟಿ ಮಾಡಿಕೊಂಡಿದ್ದಾರೆ.

Bhagya Lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯಾಗೆ ಹೊಸ ಕೆಲಸ ಸಿಕ್ಕಿದೆ. ದೇವಸ್ಥಾನದಲ್ಲಿ 250 ಮಂದಿಗೆ ಅಡುಗೆ ಮಾಡುವ ಜವಾಬ್ದಾರಿ ಭಾಗ್ಯಾಗೆ ಸಿಕ್ಕಿದೆ. ಇದರಿಂದ ಮನೆಯ ಇಎಮ್ಐ ಕಟ್ಟಿ ಸಾಲ ತೀರಿಸಲು ಮುಂದಾಗಿದ್ದಳೆ. ಆದರೆ, ಭಾಗ್ಯಾಗೆ ಈ ಕೆಲಸದಲ್ಲೂ ಕಷ್ಟಗಳ ಸರಮಾಲೆಯೇ ಬರುತ್ತಿದೆ. ಭಾಗ್ಯಾಳ ಸಹಾಯಕ್ಕಾಗಿ ಬಂದ ಅತ್ತೆ ಕುಸುಮಾ ಕಾಲಿಗೆ ಬಿಸಿ ಬಿಸಿ ಕುದಿಯುವ ನೀರು ಬಿದ್ದಿದೆ. ಭಾಗ್ಯಾಳಿಗೆ ಏನು ಮಾಡಬೇಕು ಎಂದು ದೋಚದೆ ದಿಕ್ಕಾಪಾಲಾಗಿದ್ದಾಳೆ.
ಅಡವಿಟ್ಟು ಲೋನ್ ತೀರಿಸುವ ಎಂದು ಅಂದುಕೊಂಡಿದ್ದ ಭಾಗ್ಯಾಗೆ ಅಘಾತ ಉಂಟಾಯಿತು. ತಾಂಡವ್-ಶ್ರೇಷ್ಠಾ ಎಲ್ಲ ಚಿನ್ನವನ್ನು ತೆಗೆದುಕೊಂಡು ಹೋದರು. ಭಾಗ್ಯಾಗೆ ಏನು ಮಾಡಬೇಕು ಎಂಬುದು ತಿಳಿಯುವುದಿಲ್ಲ. ಆದರೂ ನಾನು ಏನಾದರು ಮಾಡಿ 40,000 ರೂಪಾಯಿ ಅರೆಂಜ್ ಮಾಡುತ್ತೇನೆ ಎಂದು ಭಾಗ್ಯಾ ಮನೆಯಿಂದ ಹೊರಡುತ್ತಾಳೆ. ಇವತ್ತು ದುಡ್ಡು ಕಟ್ಟಲೇ ಬೇಕು ಎಂಬ ಭಯ.. ಕಟ್ಟೇ ಕಟ್ಟುತ್ತೇನೆ ಎಂಬ ಆತ್ಮವಿಶ್ವಾಸ.. ಇದೆರಡೇ ನನ್ನ ಹತ್ರ ಇರೋದು ಎಂದು ಹೇಳಿ ದೇವಸ್ಥಾನಕ್ಕೆ ತೆರಳುತ್ತಾಳೆ.
ದೇವರಲ್ಲಿ ಬೇಡಿಕೊಳ್ಳುತ್ತಾ, ಈ ಕಷ್ಟವನ್ನು ನಿವಾರಿಸಲು ನೀನೇ ದಾರಿ ತೋರಿಸಬೇಕು, ನಾನು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಿದೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳುತ್ತಾಳೆ. ದೇವರು ಆಗ ಹೂವೊಂದನ್ನು ಉದುರಿಸಿ, ಹೆದರಬೇಡ, ನಿನ್ನ ಜೊತೆ ನಾನಿದ್ದೇನೆ ಎಂಬ ಸಂದೇಶ ಕೊಡುತ್ತಾರೆ. ಇದನ್ನು ನೋಡಿ ಭಾಗ್ಯಾಗೆ ಖುಷಿ ಆಗುತ್ತದೆ. ಅದರಂತೆ ಭಾಗ್ಯಾಗೆ ಒಂದೊಳ್ಳೆ ಆಫರ್ ಕೂಡ ಬರುತ್ತದೆ.
ದೇವಸ್ಥಾನದಿಂದ ಹೊರಗೆ ಬರುತ್ತಲೇ, ಹಿರಿಯರೊಬ್ಬರು ಅಲ್ಲಿ ಅಡುಗೆಯ ಕಾಂಟ್ರಾಕ್ಟರ್ ಒಬ್ಬನನ್ನು ಬೈಯುತ್ತಾ ಇರುತ್ತಾರೆ. ಅಡುಗೆ ಮಾಡಿಕೊಡುವೆ ಎಂದು ಹೇಳಿ, ಈಗ ಮೋಸ ಮಾಡಿದೆ, ಹೀಗೆ ನೀನು ಕೈಕೊಟ್ಟರೆ, ಕೊನೆಗಳಿಗೆಯಲ್ಲಿ ನಾನೇನು ಮಾಡಲಿ, 250 ಜನರಿಗೆ ಇಷ್ಟು ಕಡಿಮೆ ಸಮಯದಲ್ಲಿ ಊಟ ಎಲ್ಲಿಂದ ತರಲಿ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಇದನ್ನು ಕೇಳಿಸಿಕೊಂಡ ಭಾಗ್ಯ, ಅಲ್ಲಿಗೆ ತೆರಳಿ, ನಾನು ಅಡುಗೆ ಮಾಡುತ್ತೇನೆ, ಚೆನ್ನಾಗಿಯೇ ಮಾಡಿ ಕೊಡುತ್ತೇನೆ ಎಂದು ಹೇಳುತ್ತಾಳೆ. ಇದಕ್ಕೆ ಅಲ್ಲಿದ್ದ ಪುರೋಹಿತರು ಕೂಡ ಭಾಗ್ಯಾ ಪರವಾಗಿ ನಿಲ್ಲುತ್ತಾಳೆ.
ಭಾಗ್ಯ ಕೂಡಲೇ ಮನೆಗೆ ಫೋನ್ ಮಾಡಿ, ಅತ್ತೆ ಹಾಗೂ ತಂಗಿಯನ್ನು ಕರೆಸಿಕೊಳ್ಳುತ್ತಾಳೆ. ಅದರಂತೆ ಮೂವರು ಸೇರಿಕೊಂಡು 250 ಜನರಿಗೆ ಅಡುಗೆ ಶುರುಮಾಡುತ್ತಾರೆ. ಆದರೆ, ಹೀಗೆ ಅಡುಗೆ ಮಾಡುವಾಗ ಕುಸುಮಾ ದೊಡ್ಡ ಎಡವಟ್ಟಿ ಮಾಡಿಕೊಂಡಿದ್ದಾರೆ. ಭಾಗ್ಯಾ ದೊಡ್ಡ ಪಾತ್ರೆಯಲ್ಲಿ ನೀರು ಬಿಸಿ ಆಗಲು ಇಟ್ಟಿರುತ್ತಾಳೆ. ಅತ್ತೆ ಬಳಿ ನೀರು ಕುದಿದಿದೆಯ ನೋಡಿ ಎಂದು ಹೇಳುತ್ತಾಳೆ. ಕುಸುಮಾ ಹೋಗಿ ನೋಡಿದಾಗ ನೀರು ಕುದಿಯುತ್ತ ಇರುತ್ತದೆ. ನೀರು ಬಿಸಿಯಾಗಿದೆ ಕೆಳಗೆ ಇಳಿಸಿ ಬಿಡ್ಲಾ ಎಂದು ಕುಸುಮಾ ಕೇಳುತ್ತಾಳೆ.
ಅದಕ್ಕೆ ಭಾಗ್ಯಾ ಬೇಡ ಅತ್ತೆ.. ನಾನೇ ಬರ್ತೇನೆ ಎಂದು ಹೇಳುತ್ತಾಳೆ. ಆದರೆ, ಭಾಗ್ಯಾ ಬರುವ ಮುಂಚೆಯೆ ನಾನೇ ಇದನ್ನ ಇಳಿಸ್ತೀನಿ ಎಂದು ಕುಸುಮಾ ಆ ಪಾತ್ರೆಯನ್ನು ಎತ್ತಲು ಪ್ರಯತ್ನಿಸುತ್ತಾರೆ. ಆದರೆ, ಕೈಯಿಂದ ಪಾತ್ರೆ ಜಾರಿ ಬಿಸಿ ನೀರು ಎಲ್ಲ ಕುಸುಮಾ ಕಾಲಿಗೆ ಚೆಲ್ಲುತ್ತದೆ. ನೋವು ತಡೆದುಕೊಳ್ಳಲಾಗದೆ ಕುಸುಮಾ ಜೋರಾಗಿ ಕಿರುಚಾಡುತ್ತಾರೆ. ಭಾಗ್ಯಾ ಓಡಿ ಬಂದು.. ಏನು ಮಾಡಬೇಕೆಂದು ಅರಿಯದೆ ದೇವಸ್ಥಾನದಿಂದ ಅರಶಿನ ತಂದು ಹಚ್ಚುತ್ತಾಳೆ. ಆದರೆ, ಕಾಲು ದಪ್ಪಗಾಗಿದ್ದು.. ನೋವು ಕಡಿಮೆ ಆಗುವುದಿಲ್ಲ.
ಇದನ್ನು ಕಂಡು ಭಾಗ್ಯಾಗೆ ಮತ್ತಷ್ಟು ಟೆನ್ಶನ್ ಆಗುತ್ತದೆ. ಸದ್ಯ ಭಾಗ್ಯ ಒಬ್ಬಳೆ ಏನು ಮಾಡುತ್ತಾಳೆ.. ಈ ಟೆನ್ಶನ್ ಮಧ್ಯೆ 250 ಜನಕ್ಕೆ ಹೇಗೆ ಅಡುಗೆ ಮಾಡಿ ಕೊಡುತ್ತಾಳೆ..? ಎಂಬುದು ಕುತೂಹಲ ಕೆರಳಿಸಿದ್ದು ಮುಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.
Kavya Shastry: ಕಾಶಿಯಲ್ಲಿ ಭಿಕ್ಷೆ ಬೇಡಿ ಊಟ ಮಾಡಿದ ಕನ್ನಡದ ಖ್ಯಾತ ಬಿಗ್ ಬಾಸ್ ಸ್ಪರ್ಧಿ: ಏನಾಯಿತು?