ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಭಾಗ್ಯ ಮನೆಗೆ ದಿಢೀರ್ ಬಂದ ಕಿಶನ್-ಪೂಜಾ-ಕನ್ನಿಕಾ: ತಬ್ಬಿಬ್ಬಾದ ಆದೀಶ್ವರ್

Bhagya Lakshmi Today's Episode: ಆದೀ ಹೆಚ್ಚು ಖರ್ಚು ಆಗಬಾರದೆಂದು ಹೋಟೆಲ್ನಲ್ಲಿ ಊಟ ಮಾಡುವುದು ಬಿಟ್ಟು ತಾನೇ ತರಕಾರಿ ತಂದು ಅಡುಗೆ ಮಾಡಿದ್ದಾನೆ. ಇದರ ಮಧ್ಯೆ ಭಾಗ್ಯ ಮನೆಗೆ ದಿಢೀರ್ ಎಂದು ಕಿಶನ್-ಪೂಜಾ ಹಾಗೂ ಕನ್ನಿಕಾ ಬಂದಿದ್ದಾರೆ.

ಭಾಗ್ಯ ಮನೆಗೆ ದಿಢೀರ್ ಬಂದ ಕಿಶನ್-ಪೂಜಾ-ಕನ್ನಿಕಾ

Bhagya lakshmi serial

Profile Vinay Bhat Aug 26, 2025 11:44 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಲಾಗುತ್ತಿದೆ. ಸದ್ಯ ಆದೀಶ್ವರ್ ಕಾಮತ್, ಭಾಗ್ಯಾಗೆ ಚಾಲೆಂಜ್ ಮಾಡಿ ಒಂದು ವಾರ ನಾನು ಮಿಡಲ್ ಕ್ಲಾಸ್ ಜೀವನ ನಡೆಸುತ್ತೇನೆ ಎಂದು ಹೇಳಿದ್ದಾನೆ. ಅದರಂತೆ ಭಾಗ್ಯ ಮನೆಯ ಮೇಲಿನ ರೂಮ್​ನಲ್ಲಿ ಸಾಮಾನ್ಯ ಜೀವನ ನಡೆಸುತ್ತಿದ್ದಾನೆ. ಕಷ್ಟವಾದರೂ ಇಷ್ಟಪಟ್ಟು ಏಳು ದಿನಗಳ ಚಾಲೆಂಜ್ ಪೂರೈಸಲೇ ಬೇಕು ಎಂದು ಪಣತೊಟ್ಟಿದ್ದಾನೆ. ದಿನಕ್ಕೆ ಇಷ್ಟೇ ರೂಪಾಯಿ ಖರ್ಚು ಮಾಡಬೇಕು ಎಂಬ ರೂಲ್ ಇರುವ ಕಾರಣ ಆದೀ ಹೆಚ್ಚು ಖರ್ಚು ಆಗಬಾರದೆಂದು ಹೋಟೆಲ್​ನಲ್ಲಿ ಊಟ ಮಾಡುವುದು ಬಿಟ್ಟು ತಾನೇ ತರಕಾರಿ ತಂದು ಅಡುಗೆ ಮಾಡಿದ್ದಾನೆ. ಇದರ ಮಧ್ಯೆ ಭಾಗ್ಯ ಮನೆಗೆ ದಿಢೀರ್ ಎಂದು ಕಿಶನ್-ಪೂಜಾ ಹಾಗೂ ಕನ್ನಿಕಾ ಬಂದಿದ್ದಾರೆ.

ಪುಟ್ಟ ಮನೆಯಲ್ಲಿದ್ದ ಪೂಜಾಗೆ ಅಷ್ಟೊದೊಡ್ಡ ಅರಮನೆಗೆ ಸೊಸೆಯಾಗಿ ಬಂದು ಏಕಾಂಗಿ ತನ ಕಾಡುತ್ತಿದೆ. ಹಗಲಿನಲ್ಲಿ ಎಲ್ಲರೂ ಆಫೀಸ್ ಕೆಲಸಕ್ಕೆಂದು ಮನೆಬಿಟ್ಟು ಹೋದರೆ ಪೂಜಾ ಒಬ್ಬಳೇ ಇರುತ್ತಾಳೆ. ಕಿಶನ್ ಬರುವುದನ್ನೇ ಪೂಜಾ ಕಾಯುತ್ತ ಕೂರುವಂತಾಗಿದೆ. ಪೂಜಾಳಿಗೆ ಖುಷಿ ಪಡಿಸಲು ಕೂಡ ಕಿಶನ್ ಆದಷ್ಟು ಪ್ರಯತ್ನಿಸುತ್ತಿದ್ದಾನೆ. ಹನಿಮೂನ್ ಪ್ಲ್ಯಾನ್ ಕೂಡ ನಡೆಯುತ್ತಿದೆ. ಇದರ ಮಧ್ಯೆ ರಾತ್ರಿವೇಳೆ ಕಿಶನ್ ಮದುವೆ ಆಲ್ಬಂ ನೋಡೋಣ ಎಂದು ಪೂಜಾಗೆ ತೋರಿಸಿದ್ದಾನೆ. ಇದರಲ್ಲಿ ಭಾಗ್ಯಾಳ ಫೋಟೋ ನೋಡಿ ಪೂಜಾ ಭಾವುಕಳಾಗಿದ್ದಾಳೆ. ನನಗೆ ಅಕ್ಕನನ್ನು ನೋಡಬೇಕು ಎಂದು ಹೇಳಿದ್ದಾಳೆ.

ಹೆಂಡತಿಯ ಆಸೆಯನ್ನು ಪೂರೈಸಲು ಕಿಶನ್ ಆ ರಾತ್ರಿಯೇ ಭಾಗ್ಯ ಮನೆಗೆ ಹೋಗೋಣ ಎಂದು ಪೂಜಾಳ ಕರೆದುಕೊಂಡು ಹೊರಟಿದ್ದಾನೆ. ಆಗ ಕನ್ನಿಕಾ ಈ ರಾತ್ರಿ ನೀವು ಯಾವಕಡೆ ಹೋಗುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ಕಿಶನ್, ಪೂಜಾಗೆ ಅಕ್ಕ ಭಾಗ್ಯಾಳನ್ನು ನೋಡಬೇಕು ಅಂತ ಅನಿಸಿದೆ.. ಹೀಗಾಗಿ ಅಲ್ಲಿಗೆ ಹೋಗುತ್ತಿದ್ದೇವೆ ಎಂದಿದ್ದಾನೆ. ಕನ್ನಿಕಾಗೆ ಅನುಮಾನ ಬರುತ್ತದೆ.. ಸರಿ ನನಗೂ ಭಾಗ್ಯಾಳನ್ನು ನೋಡಬೇಕು.. ಮಾತನಾಡದೆ ತುಂಬಾ ದಿನ ಆಯಿತು.. ನಾನೂ ಬರುತ್ತೇನೆ ಒಟ್ಟಿಗೆ ಹೋಗೋಣ ಎಂದು ಹೊರಟಿದ್ದಾಳೆ.

ಅತ್ತ ಭಾಗ್ಯ ಮನೆಯಲ್ಲಿ ಊಟಕ್ಕೆ ತಯಾರು ಮಾಡುತ್ತಿರುತ್ತಾರೆ. ಆಗ ಮೇಲಿನ ರೂಮ್​ನಿಂದ ಆದೀಶ್ವರ್ ತಾನು ಅಡುಗೆ ಮಾಡಿರುವುದನ್ನು ಭಾಗ್ಯ ಅವರಿಗೂ ಕೊಡೋಣ ಎಂದು ತಂದಿದ್ದಾನೆ. ಹೇಗೊ ಬಂದಿದ್ದೀಯಾ ನಮ್ಮ ಜೊತೆಯೇ ಊಟ ಮಾಡಿ ಹೋಗು ಎಂದು ಕುಸುಮಾ ಆದೀ ಬಳಿ ಹೇಳಿದ್ದಾಳೆ. ಅದರಂತೆ ಮೊದಲು ಆದೀ ಮಾಡಿದ ಅಡುಗೆಯನ್ನು ಎಲ್ಲರಿಗೂ ಬಳಿಸುತ್ತಾರೆ. ತನ್ವಿ ಹಾಗೂ ಗುಂಡಣ್ಣ ಆದೀ ಕೈರುಚಿಗೆ ತಲೆಬಾಗಿ ವಾವ್ ಎಂದು ಹೇಳುತ್ತಾರೆ. ಅಷ್ಟರಲ್ಲಿ ಡೋರ್ ಬೆನ್ ಆಗುತ್ತದೆ. ಭಾಗ್ಯ ನಾನು ಹೋಗಿ ಯಾರೆಂದು ನೋಡುತ್ತೇನೆ ಎಂದು ಬಾಗಿಲು ತೆರೆಯುತ್ತಾಳೆ.

ಡೋರ್ ತೆಗೆದಾಗ ಕಿಶನ್-ಪೂಜಾ ಹಾಗೂ ಕನ್ನಿಕಾ ಇರುತ್ತಾರೆ. ಇವರನ್ನು ಕಂಡು ಭಾಗ್ಯಾಗೆ ಶಾಕ್ ಆಗುತ್ತದೆ. ಮನೆಯೊಳಗೆ ಇರುವವರಿಗೆ ಕೇಳಿಸುವಂತೆ ಪೂಜಾ-ಕಿಶನ್ ಬಂದಿದ್ದಾರೆ ಎಂದು ಜೋರಾಗಿ ಹೇಳುತ್ತಾಳೆ. ಇದನ್ನು ಕೇಳಿ ಆದೀಗೆ ಶಾಕ್ ಆಗುತ್ತದೆ. ಆದೀ ಹಾಗೂ ಕುಸುಮಾಗೆ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ಭಾಗ್ಯ ಅವರನ್ನು ಮನೆಯೊಳಗೆ ಕರೆಯದೆ ಬಾಗಿಲು ಬುಡದಲ್ಲೇ ಸ್ವಲ್ಪ ಹೊತ್ತು ಮಾತನಾಡಿಸುತ್ತಾಳೆ, ಆದೀ ಅಡಗಿಕೊಳ್ಳಲೆಂದು. ಬಳಿಕ ಕಿಶನ್, ಏನು ಭಾಗ್ಯ ಅವರೇ ನಾವು ಬಂದಿರುವುದು ನಿಮಗೆ ಇಷ್ಟ ಇಲ್ವಾ?, ನಮ್ಮನ್ನ ಒಳಗೆನೇ ಕರೆಯುವುದಿಲ್ಲ ಎಂದು ಕೇಳಿದ್ದಾನೆ.

ಅಯ್ಯೋ.. ಹಾಗೇನಿಲ್ಲ ಬನ್ನಿ ಒಳಗೆ ಎಂದು ಮೂರೂ ಜನ ಒಳಗೆ ಬರುತ್ತಾರೆ. ಅಷ್ಟರಲ್ಲಿ ಆದೀ ಡೈನಿಂಗ್ ಟೇಬಲ್ ಕೆಳಗೆ ಅಡಗಿ ಕೂರುತ್ತಾನೆ. ಊಟ ಮಾಡೋಣ ಎಂದು ಭಾಗ್ಯ ಹೇಳುತ್ತಾಳೆ. ಇವರು ಡೈನಿಂಗ್ ಟೇಬಲ್ ಬಳಿ ಬರುವುದನ್ನ ಕಂಡ ಆದೀ ಬಾತ್ ರೂಮ್ ಒಳಗೆ ಹೋಗಿ ಕೂರುತ್ತಾನೆ. ಆದರೆ, ಇಲ್ಲಿ ಭಾಗ್ಯ ಮನೆಯವರು ಮತ್ತೊಂದು ಎಡವಟ್ಟು ಮಾಡುತ್ತಾರೆ. ಗುಂಡಣ್ಣ ಕನ್ನಿಕಾಗೆ ಜ್ಯೂಸ್ ಕೊಡುವಾಗ ಆಯತಪ್ಪಿ ಜ್ಯೂಸ್ ಅನ್ನು ಕನ್ನಿಕಾಳ ಡ್ರೆಸ್ ಮೇಲೆ ಚೆಲ್ಲಿದ್ದಾನೆ. ಆಗ ಕನ್ನಿಕಾ ನಾನು ಬಾತ್ ರೂಮ್​ಗೆ ಹೋಗಿ ಕ್ಲೀನ್ ಮಾಡ್ಕೊಂಡು ಬರುತ್ತೇನೆ ಎಂದಿದ್ದಾಳೆ.

ಅದೇ ಬಾತ್ ರೂಮ್​ನಲ್ಲಿ ಆದೀ ಕೂಡ ಇದ್ದಾನೆ. ಆದರೆ, ಆದೀಶ್ವರ್ ಬಾತ್ ರೂಮ್​ನ ಬಾಗಿಲ ಎಡೆಯಲ್ಲಿ ನಿಂತು ಕನ್ನಿಕಾಗೆ ಕಾಣದಂತೆ ಅಡಗುತ್ತಾನೆ. ಬಳಿಕ ಅವರೆಲ್ಲ ಊಟ ಮಾಡುವಾಗ ಆದೀಶ್ವರ್ ಅಂಬೆಗಾಲಿಡುತ್ತ ಯಾರಿಗೂ ಗೊತ್ತಾಗದಂತೆ ತನ್ನ ರೂಮ್​ಗೆ ತೆರಳಿದ್ದಾನೆ. ಸದ್ಯ ದೊಡ್ಡ ಗಂಡಾಂತರದಿಂದ ಆದೀಶ್ವರ್ ಪಾರಾಗಿದ್ದಾನೆ. ಮುಂದಿನ ಸಂಚಿಕೆಯಲ್ಲಿ ಇನ್ನೇನು ಟ್ವಿಸ್ಟ್ ಇರುತ್ತೆ ಎಂಬುದು ರೋಚಕತೆ ಸರಷ್ಟಿಸಿದೆ.

Vaishnavi Gowda: ಗಂಡನ ಜೊತೆ ಕೊನೆಗೂ ಒಂದು ಡ್ಯಾನ್ಸ್ ಮಾಡಿ ರೀಲ್ಸ್ ಹಂಚಿಕೊಂಡ ವೈಷ್ಣವಿ ಗೌಡ