ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gautami Jadhav Movie: ಕೊನೆಗೂ ಗುಡ್ ನ್ಯೂಸ್ ಕೊಟ್ಟ ಗೌತಮಿ ಜಾಧವ್: ಬೆಳ್ಳಿ ತೆರೆಗೆ ಎಂಟ್ರಿ

ಗೌತಮಿಯನ್ನು ಕಾಣದೆ ನಿರಾಸೆಯಾಗಿದ್ದ ಅಭಿಮಾನಿಗಳಿಗೆ ಈಗ ಕೊನೆಗೂ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಬಹಳ ದಿನಗಳ ನಂತರ ಬೆಳ್ಳಿತೆರೆಗೆ ಗೌತಮಿ ಜಾಧವ್ ಮರಳಿದ್ದಾರೆ. ಮಂಗಳಾಪುರಂ ಎಂಬ ಸಿನಿಮಾದಲ್ಲಿ ಇವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಸುಕನ್ಯಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕೊನೆಗೂ ಗುಡ್ ನ್ಯೂಸ್ ಕೊಟ್ಟ ಗೌತಮಿ ಜಾಧವ್

Gauthami Jadav Movie

Profile Vinay Bhat Aug 26, 2025 7:18 AM

ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಬಹುತೇಕ ಹೆಚ್ಚಿನ ಸ್ಪರ್ಧಿಗಳು ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವರು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರೆ ಇನ್ನೂ ಕೆಲವರು ಸಿನಿಮಾ, ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಆದರೆ, ಗೌತಮಿ ಜಾಧವ್ (Gautami Jadhav) ಅವರದ್ದು ಮಾತ್ರ ಸುದ್ದಿಯಿಲ್ಲ. ತನ್ನ ಪತಿ ಅಭಿಷೇಕ್ ಜೊತೆ ಸುತ್ತಾಡುತ್ತ ಸಮಯ ಕಳೆಯುತ್ತಿದ್ದಾರೆ.

ಗೌತಮಿ ಅವರು ಬಿಗ್ ಬಾಸ್ ಮುಗಿದ ಬಳಿಕ ಹೆಚ್ಚಿನ ಯಾವುದೇ ಕಾರ್ಯಕ್ರಮದಲ್ಲಿ ಕೂಡ ಕಾಣಿಸಿಕೊಂಡಿಲ್ಲ. ಯಾವುದೇ ಸೀರಿಯಲ್ ಅಥವಾ ಸಿನಿಮಾ ಆಫರ್ ಬಗ್ಗೆಯೂ ಸುಳಿವು ನೀಡಿಲ್ಲ. ಇತ್ತೀಚೆಗಷ್ಟೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರ್ಗವಿ ಎಲ್​.ಎಲ್​.ಬಿ ಧಾರಾವಾಹಿಯಲ್ಲಿ ಗೌತಮಿ ಗೆಸ್ಟ್ ಪಾತ್ರದಲ್ಲಿ ಬಂದು ದರ್ಶನ ನೀಡಿದ್ದರಷ್ಟೆ. ಗೌತಮಿಯನ್ನು ಕಾಣದೆ ನಿರಾಸೆಯಾಗಿದ್ದ ಅಭಿಮಾನಿಗಳಿಗೆ ಈಗ ಕೊನೆಗೂ ಒಂದು ಗುಡ್ ನ್ಯೂಸ್ ಸಿಕ್ಕಿದೆ.

ಬಹಳ ದಿನಗಳ ನಂತರ ಬೆಳ್ಳಿತೆರೆಗೆ ಗೌತಮಿ ಜಾಧವ್ ಮರಳಿದ್ದಾರೆ. ಮಂಗಳಾಪುರಂ ಎಂಬ ಸಿನಿಮಾದಲ್ಲಿ ಇವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಸುಕನ್ಯಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, "ಆಸ್ತಿಕರ ನಾಡಿಗೆ ನಾಸ್ತಿಕ‌ನ ಮಡದಿ ಸುಕನ್ಯಾಳಾಗಿ ಬರುತ್ತಿದ್ದೇನೆ.. ನಿಮ್ಮೆಲ್ಲರ ಪ್ರೋತ್ಸಾಹವಿರಲಿ" ಎಂದು ಪಾತ್ರದ ಪರಿಚಯ ಮಾಡಿಕೊಂಡಿದ್ದಾರೆ. ಈ ಮೂಲಕ ಕಿರುತೆರೆಯಿಂದ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಡುತ್ತಿದ್ದಾರೆ.

ಮಂಗಳಾಪುರಂ ಸಿನಿಮಾದಲ್ಲಿ ನಟ ರಿಷಿ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ರಂಜಿತ್ ರಾಜ್ ಸುವರ್ಣ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ಕೊಡುತ್ತಿದ್ದಾರೆ. ಗೌತಮಿ ಜಾಧವ್ ಅವರ ಪತಿ ಅಭಿಷೇಕ್ ಜಿ ಕಾಸರಗೋಡು ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮರ್ಡರ್ ಮಿಸ್ಟರಿ ಕಹಾನಿ ಇರಲಿದೆ ಎಂದು ಹೇಳಲಾಗುತ್ತಿದೆ. ಮೂಢನಂಬಿಕೆ, ಪವಾಡ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಿದೆ. ಚಿತ್ರತಂಡ, ಕಾರ್ಕಳ, ತೀರ್ಥಹಳ್ಳಿ‌, ಮಡಿಕೇರಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡುತ್ತಿದೆ.

BB 19 Contestants: ಬಿಗ್ ಬಾಸ್ ಮನೆಗೆ ತೆರಳಿದ 16 ಜನ ಸ್ಪರ್ಧಿಗಳ ಪಟ್ಟಿ ಇಲ್ಲಿದೆ ನೋಡಿ