ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ನಿನ್ನೆ ಮೊನ್ನೆ ಬಂದಿರೋ ಸೆಡೆ..: ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾಗೆ ಮತ್ತೆ ಅವಮಾನ

ಬಿಗ್ ಬಾಸ್ ಮನೆಯ ಸ್ಪರ್ಧಿ ಕಾಕ್ರೋಚ್ ಸುಧಿ ಅವರು ರಕ್ಷಿತಾ ಶೆಟ್ಟಿ ಅವರನ್ನು ಸೆಡೆ ಎಂದು ಕರೆದಿದ್ದಾರೆ. ‘‘ಅವಳ್ಯಾರೋ ನಿನ್ನೆ ಮೊನ್ನೆ ಬಂದಿರೋ ಸೆಡೆ ಮಾತಾಡ್ತಾನೇ ಇದ್ದಾಳೆ.. ಐದು ಸಲ ಕರೆದರೆ ತಿರಗೋದಿಲ್ಲ ಅವಳು.. ಒಬ್ಬಳೇ ಕಿಲಾಡಿ ಥರ ಮಾತಾಡ್ತಾಳೆ. ಮರ್ಯಾದೆ ಕೊಟ್ಟರೆ ಮರ್ಯಾದೆ..’’ ಎಂದು ಕೂಗಾಡಿದ್ದಾರೆ.

Rakshita Shetty and Cocroach Sudhi

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾದ ಮೊದಲ ದಿನದಿಂದ ಕರಾವಳಿ ಕುವರಿ ರಕ್ಷಿತಾ ಶೆಟ್ಟಿ ಭರ್ಜರಿ ಸುದ್ದಿಯಲ್ಲಿದ್ದಾರೆ. ಮನೆಯೊಳಗೆ ಕಾಲಿಟ್ಟ ಮೊದಲ ದಿನವೇ ಇವರು ದೊಡ್ಮನೆಯಿಂದ ಎಲಿಮಿನೇಟ್ ಆಗಿ ವೀಕೆಂಡ್​ನಲ್ಲಿ ಪುನಃ ಮನೆ ಸೇರಿದರು. ಯಾವುದೇ ಡಬಲ್ ಗೇಮ್ ಆಡದೆ ವೀಕ್ಷಕರಿಗೆ ಹತ್ತಿರವಾಗುತ್ತಿರುವ ಇವರನ್ನು ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಕೂಡ ಇಷ್ಟಪಟ್ಟಿದ್ದಾರೆ. ತಮ್ಮ ನೇರ ಮಾತುಗಳಿಂದಲೇ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ. ಏನಿದ್ದರೂ ಅದನ್ನು ಧೈರ್ಯವಾಗಿ ಹೇಳುವ ರಕ್ಷಿತಾಗೆ ಬಿಗ್ ಬಾಸ್ ಮನೆಯಲ್ಲಿ ಪದೇ ಪದೇ ಅವಮಾನ ಆಗುತ್ತಿದೆ.

ಹಿಂದಿನ ವಾರ ರಕ್ಷಿತಾ ಮೇಲೆ ಅಶ್ವಿನಿ ಗೌಡ ಹಾಗೂ ಜಾನ್ವಿ ಮುಗಿಬಿದ್ದರು. ಅಶ್ವಿನಿ ಹಾಗೂ ಜಾನ್ವಿ ಅವರು ಬಿಗ್ ಬಾಸ್ ಮನೆಯಲ್ಲಿ ಗೆಜ್ಜೆ ಶಬ್ದ ಮಾಡಿ, ಅದನ್ನು ರಕ್ಷಿತಾ ಮೇಲೆ ಹಾಕಿದ್ದರು. ರಕ್ಷಿತಾ ನಾಗವಲ್ಲಿ ರೀತಿ ಆಡ್ತಾರೆ ಎಂದೆಲ್ಲ ಸುಳ್ಳು ಆರೋಪ ಮಾಡಿದ್ದರು. ಇದೇ ವಿಚಾರ ಇಟ್ಟುಕೊಂಡ ವಾರ ಪೂರ್ತಿ ಎಳೆದಾಡಿದ್ದರು. ರಕ್ಷಿತಾಗೆ ಪದೇ ಪದೇ ಕಿರುಕುಳ ಕೊಡುವ ಪ್ರಯತ್ನ ಮಾಡಿದ್ದರು. ಈ ವಿಚಾರವನ್ನು ಸುದೀಪ್ ವೀಕೆಂಡ್ ಬಂದು ಮಾತನಾಡಿ ಅಶ್ವಿನಿ-ಜಾನ್ವಿಯ ಮೈಚಳಿಬಿಡಿಸಿದರು.

ಅಷ್ಟೆ ಅಲ್ಲದೆ ಅಶ್ವಿನಿ ರಕ್ಷಿತಾ ಕುರಿತಾಗಿ ‘ಶಿ ಈಸ್ ಎ ಎಸ್’ ಎಂದು ಹೇಳಿದ್ದರು. ರಕ್ಷಿತಾ ಶೆಟ್ಟಿ ಉಡುಗೆ, ಆಕೆ ಇರುವ ರೀತಿ ಇದನ್ನೆಲ್ಲ ಉಲ್ಲೇಖಿಸಿ ಶಿ ಈಸ್ ಎ ಎಸ್ ಎಂದು ಅಶ್ವಿನಿ ಹೇಳಿದ್ದರು. ಈ ಪದ ಬಳಕೆಗಾಗಿ ಈಗ ಅಶ್ವಿನಿ ಮೇಲೆ ದೂರು ದಾಖಲಾಗಿದೆ. ಇದೀಗ ಮತ್ತೆ ರಕ್ಷಿತಾಗೆ ಅವಮಾನ ಆಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಬಿಗ್ ಬಾಸ್ ಮನೆಯ ಮತ್ತೋರ್ವ ಸ್ಪರ್ಧಿ ಕಾಕ್ರೋಚ್ ಸುಧಿ ಅವರು ರಕ್ಷಿತಾರನ್ನು ಸೆಡೆ ಎಂದು ಕರೆದಿದ್ದಾರೆ.

ಮನೆಯಲ್ಲಿ ಸ್ಪರ್ಧಿಗಳೆಲ್ಲ ಸೇರಿ ಮೀಟಿಂಗ್ ಕ್ಲೀನಿಂಗ್ ವಿಚಾರವಾಗಿ ಮಾತನಾಡುತ್ತಿದ್ದರು. ಯಾರಿಗೆ ಏನು ಕೆಲಸ ನೀಡಬೇಕು ಎಂಬುದು ಇದರ ಇದ್ದೇಶ. ಆದರೆ ಪ್ರತಿಬಾರಿಯಂತೆ ಈ ಬಾರಿಯೂ ಸಹ ಮೀಟಿಂಗ್​ ಗೊಂದಲ ಮಯವಾಯ್ತು, ಯಾರು ಯಾವ ಕೆಲಸ ವಹಿಸಿಕೊಳ್ಳಬೇಕು ಎಂಬ ಚರ್ಚೆ ಬಿಟ್ಟು ಪರಸ್ಪರ ದೂಷಣೆ ಶುರುವಾಯಿತು. ಈ ಸಂದರ್ಭ ರಕ್ಷಿತಾ ಶೆಟ್ಟಿ ಮತ್ತು ಸುಧಿ ನಡುವೆ ಒಂದಷ್ಟು ವಿಚಾರಗಳಿಗೆ ಮಾತಿನ ಚಕಮಕಿ ಆರಂಭವಾಯಿತು. ರಕ್ಷಿತಾ ಮೇಲೆ ಕೆಲ ಆರೋಪಗಳನ್ನು ಮಾಡುತ್ತಾ ಸುಧಿ ಹೊರನಡೆದರು. ‘‘ನಾನು ಕರೆದಾಗ ಮಾತನಾಡಲಿಲ್ಲ’’ ಎಂದು ಸಿಟ್ಟು ಮಾಡಿಕೊಂಡರು.



ಹೊರ ಹೋಗಿದ್ದ ಸುಧಿಗೆ ಧ್ರವಂತ್ ಸಮಾಧಾನ ಮಾಡಿ ವಾಪಸ್ ಕರೆದುಕೊಂಡು ಬಂದರು. ಬಂದಿದ್ದೆ ತಡ, ‘‘ಅವಳ್ಯಾರೋ ನಿನ್ನೆ ಮೊನ್ನೆ ಬಂದಿರೋ ಸೆಡೆ ಮಾತಾಡ್ತಾನೇ ಇದ್ದಾಳೆ.. ಐದು ಸಲ ಕರೆದರೆ ತಿರಗೋದಿಲ್ಲ ಅವಳು.. ಒಬ್ಬಳೇ ಕಿಲಾಡಿ ಥರ ಮಾತಾಡ್ತಾಳೆ. ಮರ್ಯಾದೆ ಕೊಟ್ಟರೆ ಮರ್ಯಾದೆ..’’ ಎಂದು ಕೂಗಾಡಿದ್ದಾರೆ. ಇದು ಅಲ್ಲಿದ್ದ ಹಲವರಿಗೆ ಬೇಸರ ತರಿಸಿತು, ಗಿಲ್ಲಿ, ಜಾನ್ವಿ ಅವರು ಸುಧಿ ಮಾತನ್ನು ವಿರೋಧಿಸಿದರು.

ಅದಾದ ಬಳಿಕವೂ ಸಹ ಕಾಕ್ರೂಚ್ ಸುಧಿ ತಮ್ಮ ಮಾತನ್ನು ಸಮರ್ಥಿಸಿದರು. ನೀನು ಹುಡುಗರನ್ನು ಆ ಮಾತು ಅನ್ನು ಆದರೆ ಹುಡುಗಿಗೆ ಅದರಲ್ಲೂ ಪುಟ್ಟ ಹುಡುಗಿಗೆ ಹಾಗೆ ಅನ್ನಬಾರದಿತ್ತು ಎಂದು ಗಿಲ್ಲಿ ಹೇಳಿದ್ದಕ್ಕೆ, ನಮ್ ಏರಿಯಾದಲ್ಲಿ ಸೆಡೆ ಅನ್ನೋ ಪದ ತುಂಬಾ ಕಾಮನ್ ವರ್ಡ್. ದೇವ್ರಾಣೆಗೂ ಸೆಡೆ ಅಂದ್ರೆ ನಮ್ ಕಡೆ ತುಂಬಾ ಚಿಕ್ಕೋಳು ನೀನು ಅಂತ ಎಂದು ಹೇಳಿದ್ದಾರೆ. ಸದ್ಯ ಈ ವಿಚಾರ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ. ಇದರಿಂದ ರಕ್ಷಿತಾ ಅಭಿಮಾನಿಗಳು ಮಾತ್ರ ಗರಂ ಆಗಿದ್ದಾರೆ.

BBK 12: ಬಿಬಿಕೆ 12ರ ಮೊದಲ ಕ್ಯಾಪ್ಟನ್ ಪಟ್ಟಕ್ಕೆ ರಘು-ರಿಷಾ ನಡುವೆ ಫೈಟ್: ಟಾಸ್ಕ್ ಏನು ಗೊತ್ತೇ?