ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಮನೆಯಲ್ಲಿ ಮುಂದುವರೆದ ಜಗಳ: ಧ್ರುವ್-ಸ್ಪಂದನಾ ನಡುವೆ ಫೈಟ್

ಬಿಗ್ ಬಾಸ್ ಮನೆಯಲ್ಲಿ ಧ್ರುವ್ ಒಂಟಿ ತಂಡದಲ್ಲಿದ್ದರೆ ಸ್ಪಂದನಾ ಸೋಮಣ್ಣ ಅವರು ಮಾಜು ಅವರೊಂದಿಗೆ ಜಂಟಿಯಾಗಿದ್ದಾರೆ. ಧ್ರುವ್ ಅವರು ಮಾಲು ಹಾಗೂ ಸ್ಪಂದನಾ ಬಳಿ ಆ ಚೇರ್ ಅನ್ನು ಅಲ್ಲಿ ಇಡಿ ಎಂದು ಹೇಳಿದ್ದಾರೆ. ಇಲ್ಲಿ ಅದು ಯಾವ ಚೇರ್ ಎಂಬ ವಿಷಯಕ್ಕೆ ಜಗಳ ಶುರುವಾಗಿದೆ. ಸ್ಪಂದನಾ ಅವರು ನನ್ಗೆ ಗೊತ್ತಾಗಿಲ್ಲ ಯಾವ ಚೇರ್ ಅಂತ ಹೇಳಿ ಎಂದು ಧ್ರುವ್ ಬಳಿ ಪುನಃ ಕೇಳಿದ್ದಾರೆ.

Dhruv and Spandana Fight

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಮೂರನೇ ವಾರಕ್ಕೆ ಕಾಲಿಟ್ಟಿದೆ. ಆದರೆ, ಮನೆಯಲ್ಲಿ ಜಗಳಗಳ ಕಾವು ಕಡಿಮೆ ಆಗಿಲ್ಲ. ಮೊದಲ ವಾರದಿಂದಲೇ ಮನೆಯಲ್ಲಿ ಕಿತ್ತಾಟ ಶುರುವಾಗಿತ್ತು. ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಅವರು ಬಂದು ಎಷ್ಟೇ ಬಿದ್ದಿವಾದ ಹೇಳಿದರೂ ಸ್ಪರ್ಧಿಗಳು ಅದನ್ನು ಅರ್ಥ ಮಾಡಿಕೊಳ್ಳದೆ ಮತ್ತೆ ಮತ್ತೆ ಜಗಳ ಮಾಡುತ್ತಿದ್ದಾರೆ. ಇದೀಗ ಇಷ್ಟುದಿನ ದೊಡ್ಮನೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಧ್ರುವ್ ಹಾಗೂ ಸ್ಪಂದನಾ ನಡುವೆ ದೊಡ್ಡ ಜಗಳ ನಡೆದಿದೆ.

ಬಿಗ್ ಬಾಸ್ ಮನೆಯಲ್ಲಿ ಧ್ರುವ್ ಒಂಟಿ ತಂಡದಲ್ಲಿದ್ದರೆ ಸ್ಪಂದನಾ ಸೋಮಣ್ಣ ಅವರು ಮಾಜು ಅವರೊಂದಿಗೆ ಜಂಟಿಯಾಗಿದ್ದಾರೆ. ಧ್ರುವ್ ಅವರು ಮಾಲು ಹಾಗೂ ಸ್ಪಂದನಾ ಬಳಿ ಆ ಚೇರ್ ಅನ್ನು ಅಲ್ಲಿ ಇಡಿ ಎಂದು ಹೇಳಿದ್ದಾರೆ. ಇಲ್ಲಿ ಅದು ಯಾವ ಚೇರ್ ಎಂಬ ವಿಷಯಕ್ಕೆ ಜಗಳ ಶುರುವಾಗಿದೆ. ಸ್ಪಂದನಾ ಅವರು ನನ್ಗೆ ಗೊತ್ತಾಗಿಲ್ಲ ಯಾವ ಚೇರ್ ಅಂತ ಹೇಳಿ ಎಂದು ಧ್ರುವ್ ಬಳಿ ಪುನಃ ಕೇಳಿದ್ದಾರೆ. ಅದಕ್ಕೆ ಅವರು ಮಾಲು ಅವರಿಗೆ ಗೊತ್ತು.. ಬೇಕಿದ್ರೆ ಅವರತ್ರನೇ ಕೇಳಿ ಎಂದಿದ್ದಾರೆ. ನೀವು ನನ್ಗೆ ಯಾಕೆ ಇನ್ನೊಂದು ಸಲ ಹೇಳಲ್ಲ ಎಂದು ಜಗಳ ನಡೆದಿದೆ. ನನ್ಗೆ ನೀವಿಬ್ರು ಒಂದೆ ಕೇಳ್ಕೊಳ್ಳಿ ಅವರತ್ರ ಎಂದು ರೇಗಾಡಿದ್ದಾರೆ.



ಇಲ್ಲಿಗೆ ನಿಲ್ಲದ ಜಗಳ, ನನ್ನ ಹತ್ರ ಕರೆಕ್ಟ್ ಆಗಿ ಮಾತಾಡಿ ಎಂದು ಹೇಳಿದ ಸ್ಪಂದನಾಗೆ, ಅಷ್ಟೊತ್ತು ಕೂತು ಮಾತನಾಡುತ್ತಿದ್ದ ಧ್ರುವ್ ಎದ್ದು ನಿಂತು ನಾ ಕರೆಕ್ಟ್ ಆಗಿ ಮಾತಾಡಲ್ಲ ಎಂದಿದ್ದಾರೆ. ಮೇಕಪ್ ಮಾಡ್ಕೊಂಡು ಸುಮ್ನೆ ಓಡಾಡೋದು ಅಲ್ಲ ಎಂದು ಹೇಳಿದ್ದಾರೆ. ಸ್ಪಂದನಾ ಅವರಿಗೆ ಇದು ಬೇಸರ ತರಿಸಿದೆ.. ಮರ್ಯಾದೆ ಕೊಡಿ ಎಂದು ಹೇಳಿದ್ದಾರೆ. ಆದರೆ, ಇದಕ್ಕೂ ಜಗ್ಗದ ಧ್ರುವ್ ಮತ್ತಷ್ಟು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ.

ಮಾಳು ನಿಪನಾಳ-ಸ್ಪಂದನಾ ಫೈನಲಿಸ್ಟ್

ಪ್ರೇಕ್ಷಕರ ವೋಟಿಂಗ್‌ ಪ್ರಕಾರ, ಮಾಳು ನಿಪನಾಳ-ಸ್ಪಂದನಾ ಸೋಮಣ್ಣ ಜಂಟಿ ಫೈನಲಿಸ್ಟ್‌ಗಳಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಅವರಿಗೆ ಈ ವಾರ ಇಮ್ಯೂನಿಟಿ ಸಿಕ್ಕಿದೆ. ಜನ ಕಳೆದ ವಾರ ವೋಟ್‌ ಮಾಡಿರೋದು ಸ್ಪರ್ಧಿಗಳನ್ನು ಹೊರಗೆ ಕಳಿಸೋಕೆ ಅಲ್ಲ. ಫಿನಾಲೆಗೆ ಯಾರು ಹೋಗಬೇಕು ಅನ್ನೋದಕ್ಕೆ ವೋಟಿಂಗ್‌ ನಡೆದಿತ್ತು. ಮಾಳು ಹಾಗೂ ಸ್ಪಂದನಾ ಈಗ ಫೈನಲಿಸ್ಟ್‌ ಆಗಿ ಆಯ್ಕೆ ಆಗಿದ್ದಾರೆ.

BBK 12: ಅಶ್ವಿನಿ ಗೌಡ ವಿರುದ್ಧ ರೊಚ್ಚಿಗೆದ್ದ ಸ್ಪರ್ಧಿಗಳು: ಸಿಕ್ಕಿತು ಡವ್ ರಾಣಿ ಪಟ್ಟ