Gauthami Jadav: ಬಿಗ್ ಬಾಸ್ ಬಳಿಕ ಮೊದಲ ಬಾರಿ ಫೋಟೋ ಶೂಟ್ನಲ್ಲಿ ಮಿಂಚಿದ ಗೌತಮಿ ಜಾಧವ್
ಗೌತಮಿ ಜಾಧವ್ ಫೋಟೋ ಶೂಟ್ ಮಾಡಿಕೊಂಡಿದ್ದು, ದೊಡ್ಡ ಅಪ್ಡೇಟ್ನ ಸೂಚನೆ ಕೊಟ್ಟಿದ್ದಾರೆ. ಕೆಂಪು ಬಣ್ಣದ ಡ್ರೆಸ್ನಲ್ಲಿ ಗೌತಮಿ ಜಾಧವ್ ರಾಣಿಯಂತೆ ಕಂಗೊಳಿಸಿದ್ದಾರೆ. ಈ ಫೋಟೋಕ್ಕೆ ಸಾಕಷ್ಟು ಕಮೆಂಟ್ಗಳು ಬರುತ್ತಿದ್ದು, ದೇವ ಲೋಕದ ಅಪ್ಸರೆ ಎಂದು ಕೆಲವರು ಹೇಳಿದ್ದಾರೆ.

Gauthami Jadav

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯವಾದ ಬಳಿಕ ಸ್ಪರ್ಧಿಗಳು ತಮ್ಮ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲ ಸ್ಪರ್ಧಿಗಳಿಗೆ ಸಿನಿಮಾ, ಸೀರಿಯಲ್ಗಳಿಂದ ಆಕರ್ಷಕ ಆಫರ್ ಬರುತ್ತಿದ್ದರೆ ಇನ್ನೂ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿನ್ನರ್ ಹನುಮಂತ, ಧನರಾಜ್, ರಜತ್, ಚೈತ್ರ ಸೇರಿದಂತೆ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ನಲ್ಲಿ ಭಾಗವಹಿಸುತ್ತಿದ್ದಾರೆ. ರನ್ನರ್-ಅಪ್ ತ್ರಿವಿಕ್ರಮ್ ಸಿಸಿಎಲ್ ಮುಗಿಸಿ ಇದೀಗ ಮುದ್ದು ಸೊಸೆ ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ. ಉಗ್ರಂ ಮಂಜು ಕೂಡ ಹೊಸ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಆದರೆ, ಗೌತಮಿ ಜಾಧವ್ ಅವರು ಬಿಗ್ ಬಾಸ್ ಶೋ ಮುಗಿದ ಬಳಿಕ ಹೆಚ್ಚಿನ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಯಾವುದೇ ಸೀರಿಯಲ್ ಅಥವಾ ಸಿನಿಮಾ ಆಫರ್ ಬಗ್ಗೆಯೂ ಸುಳಿವು ನೀಡಿಲ್ಲ. ಹೆಚ್ಚು ಕರಾವಳಿಯಲ್ಲಿ ಬೀಡುಬಿಟ್ಟಿದ್ದರು. ಅನೇಕ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಟೆಂಪಲ್ ರನ್ ನಡೆಸಿದರು. ಇತ್ತೀಚೆಗೆ ಕೃಷ್ಣನ ನಾಡು ಉಡುಪಿಯಲ್ಲೂ ಕಾಣಿಸಿಕೊಂಡಿದ್ದರು. ಬಳಿಕ ಗೌತಮಿ ಜಾಧವ್ ದಿಢೀರ್ ಆಗಿ ಧನರಾಜ್ ಆಚಾರ್ ಮನೆಗೆ ಭೇಟಿ ಕೊಟ್ಟರು ಸರ್ಪ್ರೈಸ್ ನೀಡಿದ್ದರು.
ಆದರೆ, ಗೌತಮಿ ಮುಂದಿನ ಪ್ಲ್ಯಾನ್ ಏನು?, ಸಿನಿಮಾ ಅಥವಾ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರ ಎಂಬ ಕುರಿತು ಯಾವುದೇ ಅಪ್ಡೇಟ್ ಇರಲಿಲ್ಲ. ಆದರೀಗ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದಂತಿದೆ. ಸದ್ಯದಲ್ಲೇ ಗೌತಮಿ ಜಾಧವ್ ಅವರು ತೆರೆಮೇಲೆ ಬರುವ ಹಿಂಟ್ ಕೊಟ್ಟಿದ್ದಾರೆ. ಇದೀಗ ಗೌತಮಿ ಅವರು ಮೊದಲ ಬಾರಿಗೆ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಬಳಿಕ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ದೊಡ್ಮನೆಯಿಂದ ಹೊರಬಂದ ಬಳಿಕ ಭವ್ಯಾ ಗೌಡ, ಮೋಕ್ಷಿತಾ ಪೈ, ಐಶ್ವರ್ಯಾ ಸಿಂಧೋಗಿ, ಚೈತ್ರಾ ಕುಂದಾಪುರ ಸೇರಿದಂತೆ ಅನೇಕ ಸ್ಪರ್ಧಿಗಳು ಫೋಟೋ ಶೂಟ್ ನಡೆಸಿ ತಮ್ಮ ಸಾಮಾಜಿಕ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಗೌತಮಿ ಖಾತೆಯಲ್ಲಿ ಈ ರೀತಿಯ ಫೋಟೋಗಳು ಯಾವುದೂ ಬಂದಿರಲಿಲ್ಲ. ಆದರೀಗ ಇವರು ಫೋಟೋ ಶೂಟ್ ಮಾಡಿಕೊಂಡಿದ್ದು, ದೊಡ್ಡ ಅಪ್ಡೇಟ್ನ ಸೂಚನೆ ಕೊಟ್ಟಿದ್ದಾರೆ.
ಕೆಂಪು ಬಣ್ಣದ ಡ್ರೆಸ್ನಲ್ಲಿ ಗೌತಮಿ ಜಾಧವ್ ರಾಣಿಯಂತೆ ಕಂಗೊಳಿಸಿದ್ದಾರೆ. ಈ ಫೋಟೋಕ್ಕೆ ಸಾಕಷ್ಟು ಕಮೆಂಟ್ಗಳು ಬರುತ್ತಿದ್ದು, ದೇವ ಲೋಕದ ಅಪ್ಸರೆ ಎಂದು ಕೆಲವರು ಹೇಳಿದ್ದಾರೆ. ಇತ್ತೀಚೆಗಷ್ಟೆ ಗೌತಮಿ ಅವರು ಈ ಫೋಟೋ ಶೂಟ್ನ ವಿಡಿಯೋ ಕೂಡ ಹಂಚಿಕೊಂಡಿದ್ದರು.
Puneeth Rajkumar: ಅಪ್ಪು ಸಮಾಧಿಗೆ ಭೇಟಿ ನೀಡಿ ಕೈ ಮುಗಿದ ಭವ್ಯಾ ಗೌಡ-ಅನುಷಾ ರೈ