Puneeth Rajkumar: ಅಪ್ಪು ಸಮಾಧಿಗೆ ಭೇಟಿ ನೀಡಿ ಕೈ ಮುಗಿದ ಭವ್ಯಾ ಗೌಡ-ಅನುಷಾ ರೈ
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳು ಕೂಡ ಅಪ್ಪು ಸಮಾಧಿಗೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಭವ್ಯಾ ಗೌಡ ಮತ್ತು ಅನುಷಾ ರೈ ಜೊತೆಯಾಗಿ ಬಂದು ಅಪ್ಪು ಸಮಾಧಿಗೆ ಕೈ ಮುಗಿದು ನಮನ ಸಲ್ಲಿಸಿದ್ದಾರೆ. ಬಿಬಿಕೆ 11ನ ರಂಜಿತ್ ಕೂಡ ತನ್ನ ಭಾವಿ ಪತ್ನಿ ಜೊತೆ ಬಂದಿದ್ದರು.

Bgavya Gowda Anusha Rai

ದಿವಂಗತ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ 50ನೇ ಹುಟ್ಟುಹಬ್ಬ ಆಚರಣೆ ಸಡಗರ ಸಂಭ್ರಮದಿಂದ ಕೂಡಿದೆ. ಬೆಳ್ಳಂಬೆಳಗ್ಗೆ ಪುನೀತ್ ಸಮಾಧಿ ಬಳಿ ಅಭಿಮಾನಿಗಳ ದಂಡೆ ಹರಿದು ಬಂತು. ರಾತ್ರಿಯಿಂದ ಕಂಠೀರವ ಸ್ಟೂಡಿಯೋ ಸುತ್ತಲೂ ಅಭಿಮಾನಿಗಳು ಪುನೀತ್ ಸಮಾಧಿ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ಫ್ಯಾನ್ ಪೇಜ್ಗಳು ಫೋಟೋ, ವಿಡಿಯೋಗಳಿಂದ ತುಂಬುತ್ತಿವೆ. ಅಪಾರ ಸಂಖ್ಯೆಯ ಅಭಿಮಾನಿಗಳ ಆರಾಧ್ಯದೈವ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದು ಅಪ್ಪು ಸಂಭ್ರಮ ಮನೆ ಮಾಡಿದೆ.
ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಯನ್ನು ವಿಶೇಷ ಹೂಗಳಿಂದ ಸಿಂಗರಿಸಲಾಗಿದೆ. ಕುಟುಂಬ ಸದಸ್ಯರು ಕೂಡ ಬಂದು ಪೂಜೆ ಸಲ್ಲಿಸಲಿದ್ದಾರೆ. ಅಂತೆಯೆ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳು ಕೂಡ ಅಪ್ಪು ಸಮಾಧಿಗೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಭವ್ಯಾ ಗೌಡ ಮತ್ತು ಅನುಷಾ ರೈ ಜೊತೆಯಾಗಿ ಬಂದು ಅಪ್ಪು ಸಮಾಧಿಗೆ ಕೈ ಮುಗಿದು ನಮನ ಸಲ್ಲಿಸಿದ್ದಾರೆ. ಬಿಬಿಕೆ 11ನ ರಂಜಿತ್ ಕೂಡ ತನ್ನ ಭಾವಿ ಪತ್ನಿ ಜೊತೆ ಬಂದಿದ್ದರು. (ವಿಡಿಯೋ ಕೃಪೆ: ಡಿಪಿ ಪಿಚ್ಚರ್ಸ್)
ಕನ್ನಡ ಚಿತ್ರರಂಗಕ್ಕೆ ಅಪ್ಪು ನೀಡಿದ ಕೊಡುಗೆಯನ್ನ ಮರೆಯುವಂತಿಲ್ಲ. ಬಾಲನಟನಾಗಿಯೇ ಅಭಿಮಾನಿಗಳ ಮನಗೆದ್ದಿದ್ದ ಪುನೀತ್ ಅವರು ಹೀರೋ ಆಗಿಯೂ ಮೊದಲ ಚಿತ್ರದಿಂದಲೇ ಯಶಸ್ಸು ಕಂಡರು. ಅಭಿನಯ, ಡ್ಯಾನ್ಸ್, ಫೈಟಿಂಗ್ನಲ್ಲಿ ಪುನೀತ್‌ಗೆ ಸರಿಸಾಟಿ ಯಾರೂ ಇರಲಿಲ್ಲ. ಅದೇ ರೀತಿ ಜನಪರ ಕಾರ್ಯಗಳ ಮೂಲಕವೂ ಅವರು ರಿಯಲ್ ಹೀರೋ ಎನಿಸಿಕೊಂಡಿದ್ದರು. ಪುನೀತ್ ಅವರ ಗುಣಗಳೇ ಕೋಟ್ಯಂತರ ಅಭಿಮಾನಿಗಳಿಗೆ ಮಾದರಿ ಆಗಿವೆ.
ಇನ್ನು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರ ಘೋಷಿಸಿದೆ. ಅದರಂತೆ ಸ್ಫೂರ್ತಿಯ ಚಿಲುಮೆ ಅಪ್ಪು ನೆನಪಲ್ಲಿ ರಾಜ್ಯದೆಲ್ಲೆಡೆ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಜೊತೆಗೆ ಕಂಠೀರವ ಸ್ಟುಡಿಯೋದಲ್ಲಂತೂ ಜಾತ್ರೆಯೇ ನಡೆಯಲಿದ್ದು ಅನ್ನದಾನ, ಉಚಿತ ಆರೊಗ್ಯ ತಪಾಸಣೆ, ರಕ್ತದಾನ ಶಿಬಿರ, ವ್ಯಾಪಾರ ವಹಿವಾಟು ಸೇರಿದಂತೆ ಅನೇಕ ಕಾರ್ಯಕ್ರಮ ನಡೆಯುತ್ತಿದೆ. ಪುನೀತ್ ರಾಜ್‌ಕುಮಾರ್ ಇದ್ದಿದ್ದರೇ ಹೇಗೆಲ್ಲಾ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಬೇಕು ಎಂದು ಫ್ಯಾನ್ಸ್ ಅಂದುಕೊಂಡಿದ್ದರೋ ಅದರಂತೆಯೇ ಅದ್ದೂರಿಯಾಗಿಯೇ ಆಚರಿಸಲಾಗುತ್ತಿದೆ.
Bhagya Lakshmi Serial: ಭಾಗ್ಯಾಳಿಗೆ ಗೊತ್ತಾಯಿತು ಗುಂಡಣ್ಣ ಶೂ ಪಾಲೀಶ್ ಮಾಡುವ ವಿಚಾರ: ರೊಚ್ಚಿಗೆದ್ದ ತಾಂಡವ್