ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ವಿಚಾರವಾಗಿ ಗಿಲ್ಲಿ-ರಿಷಾ ನಡುವೆ ಜಗಳ

ಬಿಗ್ ಬಾಸ್ ಮನೆಗೆ ಕಳೆದ ವಾರ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ರಿಷಾ ಗೌಡ ಅವರು ಬಂದ ದಿನ ಗಿಲ್ಲಿ ನಟನ ಜೊತೆ ತುಂಬಾ ಕ್ಲೋಸ್ ಆಗಿದ್ದರು. ಆ ವಾರ ಪೂರ್ತಿ ಗಿಲ್ಲಿ-ರಿಷಾ ಸಖತ್ ಕಾಮಿಡಿ ಮಾಡಿ ಜನರಿಗೆ ಇಷ್ಟವಾಗಿದ್ದರು. ಆದರೆ, ಈ ವಾರ ಇವರಿಬ್ಬರ ನಡುವೆ ಬಿರುಕು ಮೂಡಿದೆ. ಅದು ಕಾವ್ಯಾ ವಿಚಾರವಾಗಿ.

Risha Kavya and Gilli

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಈ ವಾರ ದೊಡ್ಮನೆ ಬಿಗ್ ಬಾಸ್ ಕಾಲೇಜ್ ಕ್ಯಾಂಪಸ್ ಆಗಿ ಮಾರ್ಪಟ್ಟಿದೆ. ಈ ಕಾಲೇಜ್​ನಲ್ಲಿ ಈ ವಾರದ ಕ್ಯಾಪ್ಟನ್ ರಘು ಪ್ರಿನ್ಸಿಪಾಲ್ ಆಗಿದ್ದರೆ ಉಳಿದ ಸ್ಪರ್ಧಿಗಳು ಸ್ಟೂಡೆಂಟ್ ಆಗಿದ್ದಾರೆ. ಮನೆಯಲ್ಲಿರುವ ಸದಸ್ಯರನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿದ್ದು, ಬ್ಲೂ ಟೀಮ್ ಮತ್ತು ರೆಡ್ ಟೀಮ್ ಎಂದಾಗಿದೆ. ಈ ಎರಡೂ ತಂಡಗಳ ನಡುವೆ ಈ ವಾರ ಟಾಸ್ಕ್ ನಡೆಯುತ್ತಿದೆ. ಇದರಲ್ಲಿ ಗೆದ್ದ ತಂಡ ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆಯುತ್ತದೆ. ಈ ಟಾಸ್ಕ್ ಮಧ್ಯೆ ಮನೆಯಲ್ಲಿ ಜಗಳಗಳು ಮುಂದುವರೆಯುತ್ತಲೇ ಇದೆ.

ಬಿಗ್ ಬಾಸ್ ಮನೆಗೆ ಕಳೆದ ವಾರ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ರಿಷಾ ಗೌಡ ಅವರು ಬಂದ ದಿನ ಗಿಲ್ಲಿ ನಟನ ಜೊತೆ ತುಂಬಾ ಕ್ಲೋಸ್ ಆಗಿದ್ದರು. ಆ ವಾರ ಪೂರ್ತಿ ಗಿಲ್ಲಿ-ರಿಷಾ ಸಖತ್ ಕಾಮಿಡಿ ಮಾಡಿ ಜನರಿಗೆ ಇಷ್ಟವಾಗಿದ್ದರು. ಆದರೆ, ಈ ವಾರ ಇವರಿಬ್ಬರ ನಡುವೆ ಬಿರುಕು ಮೂಡಿದೆ. ಅದು ಕಾವ್ಯಾ ವಿಚಾರವಾಗಿ.



ಬೆಡ್​ ರೂಮ್​ನಲ್ಲಿ ಮಾತನಾಡುತ್ತಿರುವಾಗ ಗಿಲ್ಲಿ ಅವರು, ಕಾವು ನೋಡು ಒಂದು ಸಲ ಜಗಳ ಆಡಿದ್ರೆ ಮತ್ತೆ ಮಾತೇ ಆಡಲ್ಲ ಲೈಫ್​ನಲ್ಲಿ.. ಕಾವುಗೆ ಬೇಡ ಅಂದ್ರೆ ಬೇಡ.. ಬೇಕು ಅಂದ್ರೆ ಬೇಕು ಅಷ್ಟೆ ಎಂದು ಹೇಳಿದ್ದಾರೆ. ಆಗ ರಿಷಾ ಅವರು, ನೀನು ಬಕೆಟ್ ಹಿಡಿತಿದ್ಯ ಕಾವ್ಯಂಗೆ ಎಂದು ಹೇಳಿದ್ದಾರೆ. ಹಂಗಾದ್ರೆ ನೀನು ಈ ಮನೆಯಲ್ಲಿ ಎಲ್ಲಿರೂ ಬಕೆಟ್ ಹಿಡಿತಿದ್ಯಾ ಎಂದು ಕೇಳಿದ್ದಾರೆ. ಇದರಿಂದ ಕೋಪಗೊಂಡ ರಿಷಾ, ನಿನ್ನಿಂದ ನಾನು ಅನಿಸಿಕೊಳ್ಲಲ್ಲ ಗಿಲ್ಲಿ ಬಂದಾಗಿಂದ 50 ಸಲ ಬರೀ ಕಾವ್ಯಾ.. ಕಾವ್ಯಾ.. ಕಾವ್ಯಾ ನನ್ನ ಹತ್ರ ನೀನು ಕಾಲು ಎಳಿಬೇಡ ಅವಳಲ್ಲ ಫ್ರೀ ಪ್ರಾಡಕ್ಟ್, ನೀನು ಫ್ರೀ ಪ್ರಾಡಕ್ಟ್ ಎಂದು ಹೇಳಿದ್ದಾರೆ.

ಅತ್ತ ಸುಮ್ಮನಿರದ ಗಿಲ್ಲಿ, ನಾನೇನು ರಿಷಾ.. ರಿಷಾ ಅಂತ ಹೇಳಬೇಕಾ?, ನೀನು ಬಂದಾಗಲೇ ಕಾಮಿಡಿ ಪೀಸ್ ಆಗ್ಬಿಟ್ಟೆ.. ನೀನು ಬಕೆಟ್.. ನೀನು ಡ್ರಮ್ ಎಂದು ಹೇಳಿದ್ದಾರೆ. ಇಬ್ಬರ ನಡುವೆ ದೊಡ್ಡ ಜಗಳವೇ ನಡೆದಿದೆ. ಚಂದ್ರಪ್ರಭ ಈ ಜಗಳ ನಿಲ್ಲಿಸಲು ಬಂದರೂ ಇಬ್ಬರೂ ಸರಿಯಾಗಿ ಕಿತ್ತಾಡಿಕೊಂಡಿದ್ದಾರೆ. ಜಗಳದ ಬಳಿಕ ಏನೆಲ್ಲ ಆಗಿದೆ ಎಂಬುದು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

BBK 12: ಬಿಗ್ ಬಾಸ್ ಮನೆಯಿಂದ ದಿಢೀರ್ ಹೊರಬಂದ ಮಲ್ಲಮ್ಮ: ಕಾರಣ ಇಲ್ಲಿದೆ ನೋಡಿ