BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ
ದೊಡ್ಮನೆಯೊಳಗೆ ತ್ರಿವಿಕ್ರಮ್, ಹನುಮಂತ, ರಜತ್ ಹಾಗೂ ಮೋಕ್ಷಿತಾ ಮಾತ್ರ ಇದ್ದಾರೆ. ಇವರಲ್ಲಿ ಹೊರಬರುವ ಮುಂದಿನ ಸ್ಪರ್ಧಿ ಯಾರೆಂದು ರೋಚಕತೆ ಸೃಷ್ಟಿಸಿದೆ. ಇದರ ಮಧ್ಯೆ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಯಾರೆಂಬ ಮಾಹಿತಿ ಸೋರಿಕೆ ಆಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಶನಿವಾರದ ಎಪಿಸೋಡ್ನಲ್ಲಿ ಓರ್ವ ಸ್ಪರ್ಧಿ ಮನೆಯಿಂದ ಆಚೆ ಬಂದಿದ್ದರು. ಫಿನಾಲೆ ಕಂಟೆಸ್ಟೆಂಟ್ ಆಗಿದ್ದ ಭವ್ಯಾ ಗೌಡ ಮೊದಲಿಗೆ ಹೊರ ಬಂದಿದ್ದರು. ಹೀಗಾಗಿ ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್, ರಜತ್ ಕಿಶನ್ ಹಾಗೂ ಹನುಮಂತ ಸೇಫ್ ಆಗಿದ್ದರು. ಇದೀಗ ಇಂದು ಉಗ್ರಂ ಮಂಜು ಕಪ್ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. 4ನೇ ರನ್ನರ್ ಅಪ್ ಮಂಜು ಆಚೆ ಬಂದಿದ್ದಾರೆ.
ಸದ್ಯ ದೊಡ್ಮನೆಯೊಳಗೆ ತ್ರಿವಿಕ್ರಮ್, ಹನುಮಂತ, ರಜತ್ ಹಾಗೂ ಮೋಕ್ಷಿತಾ ಮಾತ್ರ ಇದ್ದಾರೆ. ಇವರಲ್ಲಿ ಹೊರಬರುವ ಮುಂದಿನ ಸ್ಪರ್ಧಿ ಯಾರೆಂದು ರೋಚಕತೆ ಸೃಷ್ಟಿಸಿದೆ. ಇದರ ಮಧ್ಯೆ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಯಾರೆಂಬ ಮಾಹಿತಿ ಸೋರಿಕೆ ಆಗಿದೆ. ಅಧಿಕೃತ ಘೋಷಣೆಗೂ ಮುನ್ನವೇ ಬಿಬಿಕೆ 11ನಲ್ಲಿ ಟ್ರೋಫಿ ಮತ್ತು 50 ಲಕ್ಷ ಹಣವನ್ನು ಗೆದ್ದ ಸ್ಪರ್ಧಿ ಯಾರೆಂಬುದು ರಿವೀಲ್ ಆಗಿದೆ.
ಹನುಮಂತ ಅವರು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಎಂದು ವಿಕಿಪೀಡಿಯಾದಲ್ಲಿ ಮಾಹಿತಿ ಅಪ್ಡೇಟ್ ಮಾಡಲಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಪ್ರತ್ಯೇಕ ವಿಕಿಪೀಡಿಯಾ ಪೇಜ್ ಆರಂಭದಲ್ಲೇ ಕ್ರಿಯೇಟ್ ಆಗಿತ್ತು. ಮೊದಲ ದಿನದಿಂದ ಹಿಡಿದು, ಇಲ್ಲಿಯವರೆಗೆ ಅಲ್ಲಿ ಯಾರು ಎಲಿಮಿನೇಟ್ ಆದರು, ಯಾರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು ಎಂಬ ಬಗ್ಗೆ ಮಾಹಿತಿಯನ್ನು ಅಪ್ಡೇಟ್ ಮಾಡುತ್ತಾ ಬರಲಾಗಿದೆ. ಇದೀಗ ಅಧಿಕೃತವಾಗಿ ವಿನ್ನರ್ ಯಾರು ಎಂದು ಘೋಷಿಸುವ ಕೆಲವೇ ಗಂಟೆಗಳ ಮೊದಲು ವಿಕಿಪೀಡಿಯಾದಲ್ಲಿ ವಿನ್ನರ್ ಹೆಸರನ್ನು ಹನುಮಂತ ಎಂದು ಬರೆಯಲಾಗಿದೆ.
ಇನ್ನು ಮೋಕ್ಷಿತಾ ಅವರು ರನ್ನರ್ ಅಪ್ ಎಂದು ಇದರಲ್ಲಿ ಮಾಹಿತಿ ಇದೆ. ಮಂಜು ಅವರು ನಾಲ್ಕನೇ ರನ್ನರ್ ಅಪ್ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ. ಆದರೆ, ಇದು ಎಷ್ಟಯ ಮಟ್ಟಿಗೆ ನಿಜ ಎಂಬುದು ಇನ್ನೇನು ಕೆಲವೇ ಕ್ಷಣಗಳಲ್ಲಿ ತಿಳಿದುಬರಲಿದೆ.
ಸೀಸನ್ 11ರ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ ತಮ್ಮ ನಡತೆ, ಮಾತಿನ ಶೈಲಿಗಳಿಂದಲೇ ಕೇವಲ ಸ್ಪರ್ಧಿಗಳನ್ನು ಮಾತ್ರವಲ್ಲದೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದಾರೆ. ಇವರ ಗ್ರಾಮೀಣ ಸೊಗಡಿನ ಭಾಷೆ, ಹಾಡುಗಳಿಗೆ ಎಲ್ಲರೂ ಫಿದಾ ಆಗಿದ್ದಾರೆ. ಉತ್ತರ ಕರ್ನಾಟಕದವರಾದ ಇವರು ಫಿಕ್ಟರ್ ಇಲ್ಲದೇ ಆಡುವ ಕೆಲವು ಮಾತುಗಳು ಕೂಡ ನಗು ಉಕ್ಕಿಸಿವೆ. ಹೀಗಾಗಿಯೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಗೆಲ್ಲಬಹುದು ಎನ್ನಲಾಗಿತ್ತು.