Bhagya Lakshmi Serial: ಸ್ಫೋಟಕ ತಿರುವು: ಆದೀಶ್ವರ್ ಕಾಮತ್ ಬಂದಿದ್ದು ಪೂಜಾ-ಕಿಶನ್ ಮದುವೆ ನಿಲ್ಲಿಸಲು
ಕನ್ನಿಕಾಳ ಮಾತಿನಿಂದ ಭಯಗೊಂಡ ಆದೀ ದಿಢೀರ್ ಎಂದು ಮನೆಗೆ ಬರುತ್ತಾನೆ. ಬಳಿಕ ಅಪ್ಪ ನಿಮ್ಮ ಜೊತೆ ಮಾತನಾಡ ಬೇಕು ಎಂದು ರೂಮ್ಗೆ ಕರೆದಿದ್ದಾನೆ. ಏನೋ ಇಂಪಾರ್ಟೆಂಟ್ ವಿಷಯ ಮಾತನಾಡಬೇಕು ಅಂತ ಕರ್ಕೊಂಡು ಬಂದಿಯಲ್ಲ.. ಏನು? ಎಂದು ಕೇಳಿದ್ದಾರೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ದಿನಕ್ಕೊಂದು ತಿರುವು ಪಡೆದುಕೊಂಡು ವೀಕ್ಷಕರನ್ನು ಹಿಡಿದು ಕೂರಿಸಿದೆ. ಪೂಜಾ ಮದುವೆ ಆಗುವ ಹುಡುಗ ಕಿಶನ್ ಭಾಗ್ಯಾಳ ಬದ್ಧವೈರಿ ಕನ್ನಿಕಾಳ ಸ್ವಂತ ಅಣ್ಣ ಎಂದು ತಿಳಿದು ಭಾಗ್ಯ ಮನೆಯವರಿಗೆ ಶಾಕ್ ಆಗಿದೆ. ಆದರೆ, ಕಿಶನ್ ತಂದೆ ಭಾಗ್ಯ ಮನೆಗೆ ಬಂದು ಮದುವೆ ಮಾತುಕತೆ ನಡೆಸಿದ್ದಾರೆ. ಇದರ ಮಧ್ಯೆ ಧಾರಾವಾಹಿಯಲ್ಲಿ ಮತ್ತೊಂದು ದೊಡ್ಡ ಟ್ವಿಸ್ಟ್ ನೀಡಲಾಗಿದ್ದು, ಕನ್ನಿಕಾಳ ದೊಡ್ಡ ಅಣ್ಣ ಆದೀಶ್ವರ್ ಕಾಮತ್ ಎಂಟ್ರಿ ಆಗಿದೆ. ಅಚ್ಚರಿ ಎಂದರೆ ಆದೀಶ್ವರ್ ವಿದೇಶದಿಂದ ಬಂದಿದ್ದು ಪೂಜಾ-ಕಿಶನ್ ಮದುವೆ ನಿಲ್ಲಿಸಲು.
ಕನ್ನಿಕಾ ಮನೆಗೆ ಮದುವೆಯ ಮಾತುಕತೆ ಮಾಡಲು ಭಾಗ್ಯ ಮತ್ತು ಅವರ ಕುಟುಂಬಸ್ಥರು ಹೋದಾಗ, ಕನ್ನಿಕಾ ಅವರಿಗೆ ಅವಮಾನ ಮಾಡುತ್ತಾಳೆ. ಕನ್ನಿಕಾ ಹಾಗೂ ಭಾಗ್ಯ ಕುಟುಂಬದ ಮಧ್ಯೆ ಮಾತಿನ ಪೆಟ್ಟು ನಡೆಯುತ್ತದೆ. ನಿನ್ನಂತ ಮನೆಹಾಳಿ ಇರುವ ಮನೆಗೆ ನಾನು ಬರಲ್ಲ ಎಂದು ಪೂಜಾ ಹೇಳಿ ಎಲ್ಲರೂ ಅಲ್ಲಿಂದ ಹೊರಟು ಹೋಗುತ್ತಾರೆ. ಆದರೆ, ಇದಾದ ನಂತರ ಕನ್ನಿಕಾ ತಂದೆ ರಾಮ್‌ದಾಸ್ ಕಾಮತ್ ಈ ಗಲಾಟೆಯಲ್ಲಿ ಮಧ್ಯ ಪ್ರವೇಶಿಸಿ ಕಿಶನ್ ಜೊತೆ ಭಾಗ್ಯ ಮನೆಗೆ ಬಂದಿದ್ದಾರೆ. ಇಲ್ಲಿ ಭಾಗ್ಯ ಮನೆಯವರ ಬಳಿ ಕ್ಷಮೆ ಕೇಳಿ, ಇವತ್ತು ಆಗಿರುವ ವಿಷಯವನ್ನೆಲ್ಲ ಮರೆತು ಬಿಡಿ ಆ ಮನೆಯಲ್ಲಿ ನಿನ್ನ ತಂಗಿ ಪೂಜಾ ನೆಮ್ಮದಿಯಿಂದ ಸುಖವಾಗಿ ಆರಾಮಾಗಿ ಇರುತ್ತಾಳೆ ಎಂದು ಭಾಗ್ಯಾಗೆ ಮಾತು ಕೊಡುತ್ತಾರೆ.
ಅತ್ತ ರಾಮ್‌ದಾಸ್ ಭಾಗ್ಯ ಮನೆಗೆ ಹೋಗಿರುವ ವಿಚಾರ ಕನ್ನಿಕಾಗೆ ಗೊತ್ತಾಗಿದೆ. ಈ ಮದುವೆ ನಿಲ್ಲಿಸಲು ಮಾಸ್ಟರ್ ಪ್ಲ್ಯಾನ್ ಮಾಡಿರುವ ಕನ್ನಿಕಾ, ಅಣ್ಣ ಆದೀಶ್ವರ್ ಕಾಮತ್‌ಗೆ ಫೋನ್ ಮಾಡಿ ವಿದೇಶದಿಂದ ಕರಿಸಿದ್ದಾಳೆ. ಇಲ್ಲಿ ಆದೀ ಬಳಿ ಕನ್ನಿಕಾ ಇಲ್ಲಸಲ್ಲದ ಸುಳ್ಳಿನ ಕಥೆ ಕಟ್ಟಿದ್ದಾಳೆ. ಭಾಗ್ಯ ಮನೆಯವರು ಮಾಡಿರುವ ಚೀಪ್ ಎಮೋಷನಲ್ ಟ್ರಿಕ್ಗೆ ಅಪ್ಪ ಬಿದ್ದುಬಿಟ್ಟಿದ್ದಾರೆ. ಎಲ್ಲಿ ನಮ್ಮ ಫ್ಯಾಮಿಲಿ ಒಡೆದೋಗುತ್ತೋ ಅನ್ನೋ ಭಯ ಆಗ್ತಿದೆ ನೀನು ಬಾ ಎಂದು ಕರೆಸಿಕೊಂಡಿದ್ದಾಳೆ.
ಕನ್ನಿಕಾಳ ಮಾತಿನಿಂದ ಭಯಗೊಂಡ ಆದೀ ದಿಢೀರ್ ಎಂದು ಮನೆಗೆ ಬರುತ್ತಾನೆ. ಬಳಿಕ ಅಪ್ಪ ನಿಮ್ಮ ಜೊತೆ ಮಾತನಾಡ ಬೇಕು ಎಂದು ರೂಮ್ಗೆ ಕರೆದಿದ್ದಾನೆ. ಏನೋ ಇಂಪಾರ್ಟೆಂಟ್ ವಿಷಯ ಮಾತನಾಡಬೇಕು ಅಂತ ಕರ್ಕೊಂಡು ಬಂದಿಯಲ್ಲ.. ಏನು? ಎಂದು ಕೇಳಿದ್ದಾರೆ. ಅದಕ್ಕೆ ಆದೀ, ನೀವು ಕಿಶನ್ ಮದುವೆ ವಿಚಾರವನ್ನು ಮಾತಡೋಕೆ ಶುರು ಮಾಡಿದ್ದೀರಿ ಅಂತ ನನ್ಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ. ಆಗ ರಾಮ್‌ದಾಸ್ ಕಾಮತ್, ಅಯ್ಯೋ ನೀನು ಗಾಳಿಗಿಂತ ಸ್ಪೀಡ್.. ಎಷ್ಟು ಬೇಗ ವಿಷಯ ತಿಳ್ಕೊಂಡಿದ್ದೀಯ.. ಎಂಗೇಜ್ಮೆಂಟ್ ಫಿಕ್ಸ್ ಆದ ನಂತ್ರ ಹೇಳೋಣ ಅಂದುಕೊಂಡಿದ್ದೆ ಎಂದಿದ್ದಾರೆ.
ನೀವು ಕಿಶನ್ ಮದುವೆನ ಯಾರದೋ ಜೊತೆ ಮಾಡೋಕೆ ಹೊರಟಿದ್ದೀರಿ ಅಲ್ವಾ.. ನಾನು ಅದನ್ನ ನಿಲ್ಲಿಸೋಕೆ ಬಂದಿದ್ದೀನಿ ಎಂದು ಆದೀ ಹೇಳಿದ್ದಾನೆ. ಇದನ್ನು ಕೇಳಿ ರಾಮ್‌ದಾಸ್ ಕಾಮತ್‌ಗೆ ಶಾಕ್ ಆಗುತ್ತದೆ. ಸದ್ಯ ಕನ್ನಿಕಾ ಮಾತಿಗೆ ಮರುಳಾಗಿರುವ ಆದೀ ತಂದೆಯ ಮಾತಿನಿಂದ ತನ್ನ ನಿರ್ಧಾರ ಬದಲಾಯಿಸ್ತಾನ ಎಂದು ನೋಡಬೇಕಿದೆ. ಎಲ್ಲಾದರು ಒಪ್ಪಿಲ್ಲ ಎಂದಾದರೆ ಅತ್ತ ಭಾಗ್ಯ ಮನೆಯಲ್ಲಿ ಮಾತುಕೊಟ್ಟು ಬಂದಿರುವ ರಾಮ್‌ದಾಸ್ ಮುಂದಿನ ನಡೆ ಏನು ಎಂಬುದು ಕುತೂಹಲ ಕೆರಳಿಸಿದೆ.
Seetha Rama: ಸೀತಾ ರಾಮ ವಿದಾಯದ ಸಂಚಿಕೆ: ಹೊರಬಿತ್ತು ಇಂದ್ರ- ವಾಣಿ ಸಾವಿನ ರಹಸ್ಯ, ಭಾರ್ಗವಿಗೆ ಟೆನ್ಶನ್