Seetha Rama: ಸೀತಾ ರಾಮ ವಿದಾಯದ ಸಂಚಿಕೆ: ಹೊರಬಿತ್ತು ಇಂದ್ರ- ವಾಣಿ ಸಾವಿನ ರಹಸ್ಯ, ಭಾರ್ಗವಿಗೆ ಟೆನ್ಶನ್
ಇಂದ್ರ- ವಾಣಿ ಸಾವಿನ ರಹಸ್ಯ ಡ್ರೈವರ್ ಮೂಲಕ ಮನೆಯವರಿಗೆ ಗೊತ್ತಾಗುತ್ತೆ. ಇಂದ್ರ- ವಾಣಿಯ ವಾರ್ಷಿಕ ಕಾರ್ಯದ ದಿನ ಡ್ರೈವರ್ ಮನೆಗೆ ಬಂದಿದ್ದಾನೆ. ಆತನನ್ನು ಕಂಡು ಮನೆಯವರೆಲ್ಲ ಖುಷಿ ಆಗುತ್ತಾರೆ. ರಾಮ್ ಅವರನ್ನು ತಬ್ಬಿಕೊಂಡು ಎಷ್ಟು ವರ್ಷ ಆಯ್ತು ನಿಮ್ಮನ್ನ ನೋಡಿ ಮನೆಗೆ ಬರೋದನ್ನೇ ಮರೆತು ಬಿಟ್ಟಿದ್ದೀರಿ ಎಂದು ಹೇಳುತ್ತಾನೆ. ಅತ್ತ ಭಾರ್ಗವಿಗೆ ಟೆನ್ಶನ್ ಶುರುವಾಗುತ್ತದೆ.

Seetha rama

ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ (Seetha Rama) ಧಾರಾವಾಹಿ ಈ ವಾರಂತ್ಯದಲ್ಲಿ ಕೊನೆಯಾಗಲಿದೆ. ಎಲ್ಲರಿಗೂ ಒಂದೊಂದೆ ಸತ್ಯ ಗೊತ್ತಾಗುತ್ತಿದ್ದು, ಧಾರಾವಾಹಿ ಕೊನೆಯ ಹಂತಕ್ಕೆ ಬಂದಿದೆ. ಈಗಾಗಲೇ ಸಿಗಿ ಸಾವಿನ ಸುದ್ದಿ ಸೀತಾಗೆ ತಿಳಿದು ಮನೆಯಲ್ಲಿರುವುದು ಸುಬ್ಬಿ ಎಂಬ ಸತ್ಯ ಗೊತ್ತಾಗಿದೆ. ಉಳಿದ ಎಪಿಸೋಡ್ನಲ್ಲಿ ಭಾರ್ಗವಿಯ ಕೃತ್ಯಗಳು ಹೊರಬೀಳಬೇಕಿದೆ. ಅದರಂತೆ ಇಂದ್ರ- ವಾಣಿ ಸಾವಿನ ರಹಸ್ಯ ಇಂದು ಎಲ್ಲರಿಗೂ ತಿಳಿಯಲಿದೆ. ಇವರ ಕೊಲೆಯನ್ನು ಭಾರ್ಗವಿಯೇ ಮಾಡಿದ್ದು ಎಂದು ಇಂದು ಮನೆಯವರಿಗೆ ಗೊತ್ತಾಗಲಿದೆ. ಇದರ ಜೊತೆಗೆ ಸಿಹಿಯ ಸಾವಿನ ರಹಸ್ಯ ಕೂಡ ಬಯಲಾಗಬಹುದು.
ಶ್ರೀರಾಮ್ ದೇಸಾಯಿ ಅಮ್ಮ-ಅಮ್ಮನನ್ನು ಕೊಂದ ಭಾರ್ಗವಿ ಕೊನೆಗೆ ಸಿಹಿಯನ್ನೂ ಕೂಡ ಕೊಂದಿದ್ದಳು. ಬುಧವಾರದ ಎಪಿಸೋಡ್ನಲ್ಲಿ ದೇಸಾಯಿ ಮನೆಯಲ್ಲಿ ಏನೇನು ಸಮಸ್ಯೆಗಳು ಆಗಿವೆಯೋ ಅದಕ್ಕೆಲ್ಲ ಭಾರ್ಗವಿಯೇ ಕಾರಣ ಎಂಬುದು ಗೊತ್ತಾಗಲಿದೆ. ಈ ಸತ್ಯವು ಮೊದಲಿಗೆ ಸೀತಾಗೆ ಗೊತ್ತಾಗುತ್ತದೆ. ಆಗ ಭಾರ್ಗವಿ ಸೀತಾಳನ್ನು ಕಿಡ್ನ್ಯಾಪ್ ಮಾಡುತ್ತಾಳೆ. ಈ ಮೂಲಕ ಭಾರ್ಗವಿ ಆಟಕ್ಕೆ ಬ್ರೇಕ್ ಬೀಳುವ ಸಮಯ ಬರುತ್ತದೆ.
ಇಂದ್ರ- ವಾಣಿ ಸಾವಿನ ರಹಸ್ಯ ಡ್ರೈವರ್ ಮೂಲಕ ಮನೆಯವರಿಗೆ ಗೊತ್ತಾಗುತ್ತೆ. ಇಂದ್ರ- ವಾಣಿಯ ವಾರ್ಷಿಕ ಕಾರ್ಯದ ದಿನ ಡ್ರೈವರ್ ಮನೆಗೆ ಬಂದಿದ್ದಾನೆ. ಆತನನ್ನು ಕಂಡು ಮನೆಯವರೆಲ್ಲ ಖುಷಿ ಆಗುತ್ತಾರೆ. ರಾಮ್ ಅವರನ್ನು ತಬ್ಬಿಕೊಂಡು ಎಷ್ಟು ವರ್ಷ ಆಯ್ತು ನಿಮ್ಮನ್ನ ನೋಡಿ ಮನೆಗೆ ಬರೋದನ್ನೇ ಮರೆತು ಬಿಟ್ಟಿದ್ದೀರಿ ಎಂದು ಹೇಳುತ್ತಾನೆ. ಅತ್ತ ಭಾರ್ಗವಿಗೆ ಟೆನ್ಶನ್ ಶುರುವಾಗುತ್ತದೆ. ಡ್ರೈವರ್ ಚಿಕ್ಕ ಯಜಮಾನರು ಎಲ್ಲಿದ್ದಾರೆ ಎಂದು ಕೇಳುತ್ತಾನೆ. ಆತ ಮುದ್ದಿನ ತಮ್ಮ ಅಲ್ಲ.. ಪಾಪಿ ಅಣ್ಣನನ್ನೇ ಕೊಂದ ಕೊಲೆಗಡುಕ, ಇಂದ್ರನ ವಾಣಿನ ಕೊಂದುಬಿಟ್ಟ ಎಂದು ತಾತಾ ಹೇಳುತ್ತಾರೆ.
ಇದನ್ನ ಕೇಳಿ ಡ್ರೈವರ್ಗೆ ಶಾಕ್ ಆಗುತ್ತದೆ. ಏನು ಯಜಮಾನ್ರನ್ನ ಇವರು ಕೊಲೆ ಮಾಡಿದ್ದಾರಾ?, ಇಲ್ಲ ಇವರು ಆ ಕೊಲೆ ಮಾಡಿಲ್ಲ ಎಂದು ಹೇಳಿದ್ದಾನೆ. ಇದನ್ನ ಕೇಳಿ ಎಲ್ಲರಿಗೂ ಶಾಕ್ ಆಗುತ್ತದೆ. ಇಲ್ಲೇ ಭಾರ್ಗವಿಯ ಅರ್ಧ ಸತ್ಯ ಗೊತ್ತಾಗಲಿದೆ. ಒಟ್ಟಾರೆಯಾಗಿ ಅಂತಿಮ ಹಂತದಲ್ಲಿ ಸೀತಾ ರಾಮ ಧಾರಾವಾಹಿಯಲ್ಲಿ ಒಂದೊಂದೆ ಸತ್ಯ ಬಯಲಾಗುತ್ತಿರುವ ಎಪಿಸೋಡ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಇನ್ನು ಈಗಾಗಲೇ ಸೀತಾ ರಾಮ ಧಾರಾವಾಹಿಯ ಕೊನೆಯ ದಿನದ ಶೂಟ್ ಪೂರ್ಣಗೊಂಡಿದೆ. ಮರಾಠಿ ಧಾರಾವಾಹಿ ‘ಮುಜಿ ತುಜಿ ರೇಶಿಮಗಾಡ’ ಧಾರಾವಾಹಿಯ ರಿಮೇಕ್ ಆಗಿ ಸೀತಾ ರಾಮ ಧಾರಾವಾಹಿ ಮೂಡಿ ಬಂತು. 2023ರ ಜುಲೈ 17ರಂದು ಈ ಧಾರಾವಾಹಿ ಪ್ರಸಾರ ಆರಂಭಿಸಿತು. ಸುಮಾರು ಎರಡು ವರ್ಷಗಳ ಕಾಲ ಪ್ರಸಾರ ಕಂಡ ಈ ಧಾರಾವಾಹಿ ಈಗ ಕೊನೆ ಹಂತಕ್ಕೆ ಬಂದಿದೆ.
Bhagya Lakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ದೊಡ್ಡ ತಿರುವು: ಎಂಟ್ರಿಕೊಟ್ಟ ಬಿಗ್ ಬಾಸ್ ಸ್ಪರ್ಧಿ