ಝೀ ಕನ್ನಡ ವಾಹಿನಿಯಲ್ಲಿ ಜೂನ್ 16ರಿಂದ ದೊಡ್ಡ ಹೈಪ್ ಕ್ರಿಯೆಟ್ ಮಾಡಿರುವ ಕರ್ಣ ಧಾರಾವಾಹಿಯ (Karna Serial) ಪ್ರಸಾರ ಕಾಣಲಿದೆ. ರಾತ್ರಿ 8 ಗಂಟೆಗೆ ಕರ್ಣನ ದರ್ಶನವಾಗಲಿದೆ. ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿ ಕೇವಲ ಒಂದೇ ಒಂದು ಪ್ರೊಮೋ ಮೂಲಕ ವೀಕ್ಷಕರನ್ನು ಕಾದು ಕುಳಿದುಕೊಳ್ಳುವಂತೆ ಮಾಡಿದೆ. ಡಾಕ್ಟರ್ ಕರ್ಣ ಆಗಿ ಕಿರಣ್ ರಾಜ್ ಟಿವಿ ಪರೆದೆ ಮೇಲೆ ಮಿಂಚೋಕೆ ಮತ್ತೇ ಬರುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಕರ್ಣನಿಗೆ ಜೋಡಿಯಾಗಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ ಇದ್ದಾರೆ.
ಕರ್ಣ ಧಾರಾವಾಹಿಯಲ್ಲಿ ಭವ್ಯಾ ನಿಧಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಅವರು ಮೆಡಿಕಲ್ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ತುಂಬಾ ಭಾವನಾತ್ಮ ಹುಡುಗಿಯಂತೆ. ಒಂದು ಪ್ರೊಫೆಸರ್‌ನ ಎಷ್ಟು ಚಂದ ಲವ್ ಮಾಡಬಹುದು ಅನ್ನೋದನ್ನು ನಿಧಿ ಇಲ್ಲಿ ಹೇಳಿಕೊಡುತ್ತಾ ಹೋಗ್ತಾಳಂತೆ. ಅದರ ಜೊತೆಗೆ ಅವಳು ನಂಬರ್ ಒನ್ ಸ್ಟೂಡೆಂಟ್. ನಿಧಿ ಓದೋದರಲ್ಲಿ ಆಗಿರಬಹುದು, ಹಿರಿಯರಿಗೆ ಗೌರವ ಕೊಡೋದಾಗಿರಬಹುದು. ಎಲ್ಲದರಲ್ಲೂ ಅವಳು ಸಿಕ್ಕಾಪಟ್ಟೆ ಮುಂದೆ. ನಿಧಿ ಬಬ್ಲಿ ಬಬ್ಲಿ ಆಗಿರ್ತಾಳೆ ಎಂದು ಸ್ವತಃ ಭವ್ಯಾ ಅವರೇ ತಮ್ಮ ಪಾತ್ರದ ಕುರಿತು ಹೇಳಿದ್ದಾರೆ.
ಈ ಪಾತ್ರಕ್ಕೆ ಹೆಚ್ಚಿನ ಎಕ್ಸ್‌ಪ್ರೆಶನ್ ಕೊಡಬೇಕು, ಒಮ್ಮೊಮ್ಮೆ ಶೂಟಿಂಗ್ ಮುಗಿದ್ಮೇಲೂ ಹ್ಯಾಂಗ್‌ಓವರ್ ಇರತ್ತೆ. ಸ್ವಲ್ಪ ಡಿಸೆಂಟ್ ಆಗಿ ಮಾತಾಡೋಕೆ ಶುರು ಮಾಡಿದೀನಿ. ಒಂದು ಐಸ್‌ಕ್ರೀಮ್ ಸಿಕ್ಕಿದ್ರೂ ನಿಧಿ, ಖುಷಿಯಿಂದ ಕುಣಿಯುತ್ತಾಳೆ. ಆದರೆ ಭವ್ಯಾ ಆಗಿ ನಾನು ಆ ಥರ ಇಲ್ಲ. ನಾನು ಈಗಷ್ಟೇ ಇಂಡಸ್ಟ್ರೀಗೆ ಕಾಲಿಟ್ಟು ಕೆಲ ವರ್ಷಗಳಾಗಿವೆ. ಹಾಗಾಗಿ ನಾನು ಸಿಕ್ಕಾಪಟ್ಟೆ ವರ್ಕ್ ಮಾಡಬೇಕು, ನಾನು ತುಂಬಾ ಕಲಿಯುವುದು ಇದೆ. ಡಾಕ್ಟರ್ ಪಾತ್ರ ಮಾಡೋದು ಅಷ್ಟು ಸಲಭವಂತೂ ಅಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
Kannada Serial TRP: ಲಾಂಚ್ ಆದ ಮೊದಲ ವಾರದಲ್ಲೇ ನಂದ ಗೋಕುಲ ಧಾರಾವಾಹಿಗೆ ಬಂಪರ್ ಟಿಆರ್ಪಿ
ಇದೇವೇಳೆ ಭಾವ್ಯಾ ಅವರಿಗೆ ಈ ಧಾರಾವಾಹಿಯಲ್ಲಿ ಎಷ್ಟು ಸಂಭಾವನೆ ನೀಡಲಾಗುತ್ತಿದೆ ಎಂಬ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಭವ್ಯ ಜಾಣ್ಮೆಯ ಉತ್ತರವನ್ನೇ ಕೊಟ್ಟಿದ್ದಾರೆ. ಇದೊಂದು ಒಳ್ಳೆಯ ಪ್ರೊಡಕ್ಷನ್ ಹೌಸ್ ಹೌದು.. ಆದರೆ ಸಂಭಾವನೆಯ ವಿಚಾರವನ್ನೆಲ್ಲ ಹೇಳಬಾರದು ಅನ್ನೋ ಅಗ್ರಿಮೆಂಟ್ ಇದೆ ಎಂದು ಭವ್ಯಾ ಹೇಳಿದ್ದಾರೆ. ಶ್ರುತಿ ನಾಯ್ಡು ನಿರ್ಮಾಣದಲ್ಲಿ ಕರ್ಣ ಸೀರಿಯಲ್ ಬರುತ್ತಿದೆ. ಹೀಗಾಗಿ ದೊಡ್ಡ ಪೇಮೆಂಟ್ ಇರಬಹುದು ಎಂಬ ಟಾಕ್ ಹೊರಗಡೆ ಇದೆ.
ಇನ್ನು ಧಾರಾವಾಹಿಯಲ್ಲಿ ಭವ್ಯಾ ಅವರ ತಂಗಿ ಪಾತ್ರದಲ್ಲಿ ನಮೃತಾ ಗೌಡ ಕೂಡ ನಟಿಸಿದ್ದಾರೆ. ಇವರು ಕೂಡ ಕರ್ಣ ಧಾರಾವಾಹಿಯ ಹೀರೋಯಿನ್ ಅಂತೆ. ಗೈನಕಾಲಜಿಸ್ಟ್ ಆಗಿ ಕಿರಣ್ ರಾಜ್ ನಟಿಸುತ್ತಿದ್ದಾರೆ. ಕರ್ಣನ ಫ್ಯಾಮಿಲಿಯಲ್ಲಿ ಹಿರಿಯ ನಟಿ ಆಶಾ ರಾಣಿ, ನಟ - ನಿರ್ದೇಶಕ ನಾಗಾಭರಣ, ಒಲವಿನ ನಿಲ್ದಾಣ ಸೀರಿಯಲ್ ಖ್ಯಾತಿಯ ವರಲಕ್ಷ್ಮೀ ಶ್ರೀನಿವಾಸ್ ಮತ್ತು ನಟಿ ಶ್ಯಾಮ್ ಸಿಮ್ರನ್ ಇದ್ದಾರೆ.