ಕಾನೂನು ಸಮರ ಹಾಗೂ ಕುಟುಂಬದ ಭಾವನಾತ್ಮಕ ಎಳೆಗಳನ್ನಿಟ್ಟುಕೊಂಡು ತೆಲುಗಿನ 'ಗೀತಾ ಎಲ್‌ಎಲ್‌ಬಿ' ರಿಮೇಕ್ ಆಗಿ ಮೂಡಿಬಂದಿದ್ದ 'ಭಾರ್ಗವಿ ಎಲ್‌ಎಲ್‌ಬಿ' (Bhargavi LLB) ಧಾರಾವಾಹಿ ಅಂತ್ಯ ಕಂಡಿದೆ. ಸ್ವಪ್ನ ಕೃಷ್ಣ ಅವರ ಕಲ್ಪನೆಯಲ್ಲಿ ರೂಪಗೊಂಡಿದ್ದ ಈ ಸೀರಿಯಲ್‌ನಲ್ಲಿ ರಾಧಾ ಭಗವತಿ, ಮನೋಜ್ ಕುಮಾರ್, ಕೀರ್ತಿ ಭಾನು, ಅರುಣಾ ಬಾಲರಾಜ್ ಹಾಗೂ ಚೈತ್ರಾ ರಾವ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದರು. ನ್ಯಾಯ ಮತ್ತು ಕುಟುಂಬದ (Family) ನಡುವಿನ ರೋಚಕ ಕಥಾಹಂದರ ಹೊಂದಿತ್ತು,
‘ಬಿಗ್ ಬಾಸ್ ಕನ್ನಡ 13’ ಕಾರ್ಯಕ್ರಮ ಇನ್ನೇನು ಆರಂಭವಾಗುತ್ತಿದ್ದು, ‘ಅಗ್ನಿಪರೀಕ್ಷೆ’ ಸ್ಲಾಟ್‌ಗಾಗಿ ‘ಭಾರ್ಗವಿ ಎಲ್‌ಎಲ್‌ಬಿ’ ದಾರಿ ಮಾಡಿಕೊಟ್ಟಿದೆ. ಮಾರ್ಚ್ 3, 2025 ರಿಂದ ‘ಭಾರ್ಗವಿ ಎಲ್‌ಎಲ್‌ಬಿ’ ಪ್ರಸಾರ ಆರಂಭಿಸಿತು. ಒಟ್ಟು 444 ಸಂಚಿಕೆಗಳನ್ನ ಯಶಸ್ವಿಯಾಗಿ ಪೂರೈಸಿದ ‘ಭಾರ್ಗವಿ ಎಲ್‌ಎಲ್‌ಬಿ’ ಆಗಸ್ಟ್ 14, 2026 ರಂದು ಮುಕ್ತಾಯಗೊಂಡಿದೆ.
ಇದನ್ನೂ ಓದಿ: Bigg Boss Kannada 13: ಇಲ್ಲ ನಾನು ಆಚೆ ಹೋಗಲ್ಲ; ಬಿಗ್ ಬಾಸ್ ವೇದಿಕೆಯಲ್ಲೇ ಯುವಕ ಅಸಭ್ಯ ವರ್ತನೆ
ಸ್ವಂತ ಅಕ್ಕನ ಸಂಸಾರ ಅನ್ನೋದನ್ನೂ ನೋಡದೆ ಮಾಯಾಗೆ ಭಾರ್ಗವಿ ನ್ಯಾಯ ಕೊಡಿಸುತ್ತಾಳೆ. ಚರಣ್ ಪಾಟೀಲ್ - ಮಾಯಾನ ಭಾರ್ಗವಿ ಒಂದು ಮಾಡ್ತಾಳೆ. ಅಕ್ಕ ಬೃಂದಾಳ ಕಣ್ತೆರೆಸುವ ಮೂಲಕ ‘ಭಾರ್ಗವಿ ಎಲ್‌ಎಲ್‌ಬಿ’ ಸೀರಿಯಲ್ ಮುಕ್ತಾಯವಾಗಿದೆ. ನ್ಯಾಯ ಅಂತ ಬಂದಾಗ ಕುಟುಂಬದವರನ್ನೂ ಲೆಕ್ಕಿಸಿಲ್ಲ. ನಿನ್ನ ಕಥೆ ಇಲ್ಲಿಗೆ ಮುಗಿದಿಲ್ಲ.
ಭಾರ್ಗವಿ ಎಲ್‌ಎಲ್‌ಬಿ ಆಗಿ ನಿನ್ನ ಕರ್ತವ್ಯ ಮುಂದುವರೆಸಲೇಬೇಕು ಜೆಪಿ ಪಾಟೀಲ್ ಹೇಳುತ್ತಾರೆ. ‘ ಭಾರ್ಗವಿ ಎಲ್‌ಎಲ್‌ಬಿ 2 ’ ಬರತ್ತೆ ಅಂತ ಕಮೆಂಟ್ ಮಾಡುತ್ತಿದ್ದಾರೆ ವೀಕ್ಷಕರು.
ಇದನ್ನೂ ಓದಿ: Amitabh Bachchan: ಇದೊಂದು ಕಾರಣಕ್ಕೆ ಟೀಕೆಗೆ ಗುರಿಯಾಗುತ್ತಿದ್ದ ಅಮಿತಾಭ್! KBC ವೇದಿಕೆಯಲ್ಲಿ ಮುಕ್ತ ಮಾತು
‘ಭಾರ್ಗವಿ ಎಲ್‌ಎಲ್‌ಬಿ’ ಧಾರಾವಾಹಿಯಲ್ಲಿ ರಾಧಾ ಭಗವತಿ, ಮನೋಜ್ ಕುಮಾರ್, ಕೀರ್ತಿ ಭಾನು, ಚೈತ್ರಾ ರಾವ್ ಮುಂತಾದವರು ಅಭಿನಯಿಸಿದ್ದರು.