Bigg Boss Kannada 13: ಇಲ್ಲ ನಾನು ಆಚೆ ಹೋಗಲ್ಲ; ಬಿಗ್ ಬಾಸ್ ವೇದಿಕೆಯಲ್ಲೇ ಯುವಕ ಅಸಭ್ಯ ವರ್ತನೆ
Bigg Boss Kannada 13: ದೀಕ್ಷಾ ಆರ್ ಶೆಟ್ಟಿ, ಮಾಡ್ರನ್ ಕವಿ ಮಂಜ, ಇಶಾ ನವೀನ್, ಯೋಗಿತಾ-ಯೋಗಶ್ರೀ, ಚರಣ್ ಶೆಟ್ಟಿ, ರತ್ನಾ ಚಂದ್ರಪ್ಪ, ಕಬಾಬ್ ಮಂಜು ಹಾಗೂ ಪೂರ್ಣಿಮಾ ಜಿಕೆ ಎಂಬ 8 ಸ್ಪರ್ಧಿಗಳು ಭಾಗಿಯಾಗಿದ್ದರು. ಇದರಲ್ಲಿ ಅರ್ಹತೆ ಟೆಸ್ಟ್‌ಪಾಸ್ ಆಗಿ ಮಾಡ್ರನ್ ಕವಿ ಮಂಜ, ಚರಣ್ ಶೆಟ್ಟಿ, ರತ್ನ ಚಂದ್ರಪ್ಪ, ಜಿ.ಕೆ ಪೂರ್ಣಿಮಾ ಎರಡನೇ ಸುತ್ತಿಗೆ ಆಯ್ಕೆ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ಬಾಸ್ 13ನೇ (Bigg Boss Kannada 13) ಕನ್ನಡ ಸೀಸನ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸೀಸನ್ ಆರಂಭ ಆಗಲಿದೆ. ಈ ಬಾರಿ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗಿದ್ದು, ಅದರ ಸ್ಪರ್ಧೆ ಇದಾಗಲೇ ನಡೆದಿದೆ. ಮೊದಲ ಸುತ್ತಿನಲ್ಲಿ, 60ಜನ ಆಯ್ಕೆ ಆಗಿ ಬಂದಿರುವವರಲ್ಲಿ 8 ಜನರಿಗೆ ಅರ್ಹತೆ ಟೆಸ್ಟ್ ಮಾಡಲಾಗಿತ್ತು.
ದೀಕ್ಷಾ ಆರ್ ಶೆಟ್ಟಿ, ಮಾಡ್ರನ್ ಕವಿ ಮಂಜ, ಇಶಾ ನವೀನ್, ಯೋಗಿತಾ-ಯೋಗಶ್ರೀ, ಚರಣ್ ಶೆಟ್ಟಿ, ರತ್ನಾ ಚಂದ್ರಪ್ಪ, ಕಬಾಬ್ ಮಂಜು ಹಾಗೂ ಪೂರ್ಣಿಮಾ ಜಿಕೆ ಎಂಬ 8 ಸ್ಪರ್ಧಿಗಳು ಭಾಗಿಯಾಗಿದ್ದರು. ಇದರಲ್ಲಿ ಅರ್ಹತೆ ಟೆಸ್ಟ್‌ಪಾಸ್ ಆಗಿ ಮಾಡ್ರನ್ ಕವಿ ಮಂಜ, ಚರಣ್ ಶೆಟ್ಟಿ, ರತ್ನ ಚಂದ್ರಪ್ಪ, ಜಿ.ಕೆ ಪೂರ್ಣಿಮಾ ಎರಡನೇ ಸುತ್ತಿಗೆ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: Alia Bhatt: ಮಗಳ ಜೊತೆ ಆಲಿಯಾ- ರಣಬೀರ್ ಜಾಲಿ ಜಾಲಿ!
ಹೊರಗೆ ಹೋಗುವುದಿಲ್ಲ ಎಂದು ವಾದ
ಇದೀಗ ಹೊಸ ಪ್ರೋಮೋ ಔಟ್ ಆಗಿದೆ, ತೀರ್ಪುಗಾರರ ಬಗ್ಗೆ ಯಾವುದೇ ಭಯವಿಲ್ಲದೇ ಮಾತನಾಡಿದ್ದಾನೆ. ಬರಬರುತ್ತಲೇ ನನ್ನ ಡ್ಯಾನ್ಸ್ ಯಾರೂ ಹುರಿದುಂಬಿಸಿಲ್ಲ ಎಂದಿದ್ದಾನೆ. ಅಷ್ಟೇ ಅಲ್ಲ ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡುವೆ ಎಂದಿದ್ದಾರೆ, ಇಷ್ಟೆಲ್ಲ ಆದ ಬಳಿಕ ತ್ರಿವಿಕ್ರಮ್ ಇದ್ದವರು, ವೃತ್ತಕ್ಕೆ ಎಷ್ಟು ಬಾಹುಗಳಿರುತ್ತವೆ? ಎಂದಿದ್ದಾರೆ. ಅದಕ್ಕೆ ಸ್ಪರ್ಧಿ ಯಾವುದೂ ಇಲ್ಲ ಎಂದಿದ್ದಾರೆ. ಆಗ ವಿನಯ್ ಇದ್ದವರು ಒಂದು ಹೊರಗೆ ಇನ್ನೊಂದು ಒಳಗೆ, ನೀವಿನ್ನು ಹೊರಗೆ ಹೋಗಬಹುದು ಎಂದಿದ್ದಾರೆ. ಅದಕ್ಕೆ ಸ್ಪರ್ಧಿ ಹೊರಗೆ ಹೋಗುವುದಿಲ್ಲ ಎಂದು ವಾದ ಮಾಡಿದ್ದಾರೆ.
ತನಗೆ ರ್ಯಾಪರ್ ತುಂಬಾ ಮಾಡೆಲ್ ಎಂದಿದ್ದಕ್ಕೆ ವಿನಯ್ ಇದ್ದವರು ೫ ಜ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಹೇಳಿ ಎಂದಿದ್ದಾರೆ. ಅದಕ್ಕೆ ಹೇಳಿ, ನಂತರ ಇವರೆಲ್ಲ ನನಗೆ ಮಾಡೆಲ್ ಅಲ್ಲ ಎಂದಿದ್ದಾನೆ. ಆ ಬಳಿಕ ತೀರ್ಪುಗಾರರ ಜೊತೆ ತುಂಬಾ ಅಸಡ್ಡೆಯಾಗಿ ಮಾತನಾಡಿದ್ದಾನೆ. ಕೆಲವು ನೆಟ್ಟಿಗರು ಇಂಥಹವರೇ ಬಿಗ್ ಬಾಸ್ ಮನೆಗೆ ಬೇಕು ಎಂದು ಕಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ನೋಡಲು ಅವಕಾಶ!
ಇದು ಅಗ್ನಿಪರೀಕ್ಷೆ ಸುತ್ತಾದರೆ, ಇನ್ನು ಬಿಗ್ಬಾಸ್ ಸೆಟ್ ನೋಡಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ವಾಹಿನಿ ಪ್ರೊಮೋ ಒಂದನ್ನು ಶೇರ್ ಮಾಡಿಕೊಂಡಿದೆ. ಬಿಗ್ಬಾಸ್ನ ಸೆಟ್ ಹೇಗೆ ಇರುತ್ತದೆ ಎನ್ನುವುದನ್ನು ನೋಡುವುದಕ್ಕಾಗಿ ಲಕ್ಷಾಂತರ ಮಂದಿ ಬಯಸುತ್ತಾರೆ.
ಇದನ್ನೂ ಓದಿ: Alia Bhatt: ಮಗಳ ಜೊತೆ ಆಲಿಯಾ- ರಣಬೀರ್ ಜಾಲಿ ಜಾಲಿ!
ಆದರೆ ಕೆಲವು ಷರತ್ತುಗಳು ಇರುವ ಹಿನ್ನೆಲೆಯಲ್ಲಿ, ಎಲ್ಲರಿಗೂ ಅದನ್ನು ನೋಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇದಕ್ಕೂ ಒಂದು ಸ್ಪರ್ಧೆ ಏರ್ಪಡಿಸಲಾಗಿದೆ. ಅರ್ಹರಿಗೆ ಬಿಗ್ಬಾಸ್ ಸೆಟ್ ನೋಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.