ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Niranjan Yashaswini: ಎಂಟು ವರ್ಷಗಳ ಬಳಿಕ ಗುಡ್ ನ್ಯೂಸ್ ಕೊಡಲು ಮುಂದಾದ ನಿರಂಜನ್ ದಂಪತಿ

3-4 ವರ್ಷಗಳ ಕಾಲ ಯಶಸ್ವಿನಿ ಹಾಗೂ ನಿರಂಜನ್ ದೇಶಪಾಂಡೆ ಪರಸ್ಪರ ಪ್ರೀತಿಸಿದರು. ಆನಂತರ ಮದುವೆಯಾಗಲು ನಿರ್ಧರಿಸಿದರು. ನಿರಂಜನ್ ದೇಶಪಾಂಡೆ - ಯಶಸ್ವಿನಿ ಮದುವೆಗೆ ಕುಟುಂಬದ ಸಮ್ಮತಿ ಸಿಗಲಿಲ್ಲ. ಯಶಸ್ವಿನಿ ಮನೆಯಲ್ಲಿ ಒಪ್ಪಲಿಲ್ಲ. ಹೀಗಾಗಿ, ಯಶಸ್ವಿನಿ ಅವರನ್ನ ಅಬ್‌ಸ್ಕಾಂಡ್ ಮಾಡಿದ್ರಂತೆ.

Niranjan Deshpande, Yashaswini Niranjan

ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ನಿರಂಜನ್ ದೇಶಪಾಂಡೆ (Niranjan Deshpande) ಖ್ಯಾತಿ ಪಡೆದಿದ್ದಾರೆ. ಇವರು ಮೇ 12, 2017 ರಂದು ಯಶಸ್ವಿನಿ ಅವರನ್ನು ಲವ್ ಕಮ್ ಅರೆಂಜ್ ಮ್ಯಾರೇಜ್ ಆದರು. ಇವರಿಬ್ಬರ ಲವ್​ ಸ್ಟೋರಿಯೇ ಒಂದು ರೋಚಕ. ನಟ ಕಮ್ ಆಂಕರ್‌ ನಿರಂಜನ್ ದೇಶಪಾಂಡೆ ಹಾಗೂ ಯಶಸ್ವಿನಿ ಮೊದಲು ಫೇಸ್‌ಬುಕ್‌ ಫ್ರೆಂಡ್ಸ್ ಆಗಿದ್ದರು. ಫೇಸ್‌ಬುಕ್‌ ಮೂಲಕ ಪರಿಚಯಗೊಂಡ ಬಳಿಕ ಇಬ್ಬರೂ ಮೀಟ್ ಮಾಡಲು ಆರಂಭಿಸಿದರು. ಆನಂತರ ಇಬ್ಬರ ಮಧ್ಯೆ ಸ್ನೇಹ ಚಿಗುರಿತು. ನಂತರ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿತು.

3-4 ವರ್ಷಗಳ ಕಾಲ ಯಶಸ್ವಿನಿ ಹಾಗೂ ನಿರಂಜನ್ ದೇಶಪಾಂಡೆ ಪರಸ್ಪರ ಪ್ರೀತಿಸಿದರು. ಆನಂತರ ಮದುವೆಯಾಗಲು ನಿರ್ಧರಿಸಿದರು. ನಿರಂಜನ್ ದೇಶಪಾಂಡೆ - ಯಶಸ್ವಿನಿ ಮದುವೆಗೆ ಕುಟುಂಬದ ಸಮ್ಮತಿ ಸಿಗಲಿಲ್ಲ. ಯಶಸ್ವಿನಿ ಮನೆಯಲ್ಲಿ ಒಪ್ಪಲಿಲ್ಲ. ಹೀಗಾಗಿ, ಯಶಸ್ವಿನಿ ಅವರನ್ನ ಅಬ್‌ಸ್ಕಾಂಡ್ ಮಾಡಿದ್ರಂತೆ.

ಸದ್ಯ ಇವರಿಗೆ ಮದುವೆಯಾಗಿ ಎಂಟು ವರ್ಷಗಳು ಕಳೆದರೂ ಮಗುವಿನ ಬಗ್ಗೆ ಯಾವಾಗ ಗುಡ್‌ ನ್ಯೂಸ್‌ ಬರುತ್ತದೆ ಎನ್ನುವ ಪ್ರಶ್ನೆ ಅಭಿಮಾನಿಗಳಿಂದ ಸದಾ ಕೇಳಿಬರುತ್ತಲೇ ಇದೆ. ಆದರೆ, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಯಶಸ್ವಿನಿ ಅವರು ಮಗು ಯೋಜನೆಯ ಬಗ್ಗೆ ಮಾತನಾಡಿದ್ದು, ಈ ವಿಡಿಯೋ ವೈರಲ್‌ ಆಗಿದೆ.

Bhagya Lakshmi Serial: ಎಂಡಿ ಆಗಿ ಭಾಗ್ಯ ಅಧಿಕಾರ ಸ್ವೀಕಾರ: ಮೊದಲ ದಿನವೇ ಫುಲ್ ಸ್ಟ್ರಿಟ್

ನಿರಂಜನ್‌ ದೇಶಪಾಂಡೆ ಅವರ ಪತ್ನಿ ಯಶಸ್ವಿನಿ ಅವರು ಇತ್ತೀಚೆಗೆ ಅಕ್ಷತಾ ಕಿಚನ್‌ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಇದೇ ವೇಳೆ, ಅಕ್ಷತಾ ಪಾಂಡವಪುರ ಅವರು ಯಶಸ್ವಿನಿಯವರಿಗೆ ಮಗು ಬಗ್ಗೆ ಪ್ಲ್ಯಾನ್ಸ್‌ ಇಲ್ವಾ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಯಶಸ್ವಿನಿ, ಇದೆ.. ಪ್ರತಿ ವರ್ಷವೂ, ಈ ವರ್ಷ.. ಈ ವರ್ಷ.. ಹಾಗೆ ಅಂದುಕೊಳ್ಳುತ್ತೇವೆ. ಗೊತ್ತಿಲ್ಲ ಈ ವರ್ಷ ಅಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.