BBK 12: ಈ ಬಾರಿಯ ಬಿಗ್ ಬಾಸ್ನಲ್ಲಿ ಜೋರಾಗಿರಲಿದೆ ಕನ್ನಡ ಮಯ: ಹಿಂಟ್ ಕೊಟ್ಟ ಕಲರ್ಸ್
ಇಷ್ಟು ದಿನ ಕಾಯುತ್ತಿದ್ದ ವೀಕ್ಷಕರಿಗೆ ಬಿಗ್ ಬಾಸ್ ಟೀಮ್ ಲೋಗೋ ಬೊಡುಗಡೆ ಮಾಡವ ಮೂಲಕ ಬಿಗ್ ಅಪ್ಡೇಟ್ ಅನ್ನು ಕೊಟ್ಟಿದೆ. ಲೋಗೋ ಬಿಡುಗಡೆ ಜೊತೆಗೆ ಈ ಬಾರಿಯ ಶೋನಲ್ಲಿ ಕನ್ನಡ ಮಯ ಜೋರಾಗಿರುವ ಸೂಚನೆ ಕೂಡ ನೀಡಿದೆ. ಈ ಬಾರಿಯ ಶೋನಲ್ಲಿ ಕನ್ನಡ ಮಯ ಜೋರಾಗಿರುವ ಸೂಚನೆ ಕೂಡ ನೀಡಿದೆ.

BBK 12 Logo

ಬಿಗ್ ಬಾಸ್ ಕನ್ನಡ (Bigg Boss Kannada 12) ಹೊಸ ಸೀಸನ್ಗಾಗಿ ಕಾತುರದಿಂದ ಕಾಯುತ್ತಿದ್ದ ಫ್ಯಾನ್ಸ್ಗೆ ಕೊನೆಗೂ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಮೊನ್ನೆಯಷ್ಟೆ ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಕನ್ನಡ ಸೀಸನ್ 12ರ ಹೊಸ ಲೋಗೋ ಬಿಡುಗಡೆ ಮಾಡುವ ಮೂಲಕ ಸದ್ಯದಲ್ಲೇ ಅತಿ ದೊಡ್ಡ ರಿಯಾಲಿಟಿ ಶೋ ಶುರುವಾಗುವ ಸೂಚನೆ ನೀಡಿದೆ. ಇಷ್ಟು ದಿನ ಕಾಯುತ್ತಿದ್ದ ವೀಕ್ಷಕರಿಗೆ ಈ ಮೂಲಕ ಬಿಗ್ ಅಪ್ಡೇಟ್ ಅನ್ನು ಕೊಟ್ಟಿದೆ ಬಿಗ್ ಬಾಸ್ ತಂಡ. ಈ ಲೋಗೋ ಬಿಡುಗಡೆ ಜೊತೆಗೆ ಈ ಬಾರಿಯ ಶೋನಲ್ಲಿ ಕನ್ನಡ ಮಯ ಜೋರಾಗಿರುವ ಸೂಚನೆ ಕೂಡ ನೀಡಿದೆ.
ಕಳೆದ ಎರಡು-ಮೂರು ಸೀಸನ್ಗಳಿಂದ ಕನ್ನಡ ಬಿಗ್ ಬಾಸ್ನಲ್ಲಿ ಕನ್ನಡ ಭಾಷೆಯ ಬಳಕೆ ತಗ್ಗಿತ್ತು. ಅದರಲ್ಲೂ ಕಳೆದ ಸೀಸನ್ನಲ್ಲಿ ಇದು ಕೊಂಚ ಅಧಿಕವಾಗಿತ್ತು. ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳು ಕನ್ನಡದಲ್ಲೇ ವ್ಯವಹರಿಸಬೇಕು ಎಂಬ ಆಜ್ಞೆಯನ್ನು ಆರಂಭದಲ್ಲೇ ನೀಡಲಾಗಿರುತ್ತದೆ. ಆದರೂ ಸ್ಪರ್ಧಿಗಳು ಕೆಲವೊಮ್ಮೆ ಅತಿಯಾದ ಇಂಗ್ಲಿಷ್ ಬಳಕೆಯನ್ನು ಮಾಡುತ್ತಾರೆ. ಹೀಗೆ ಮಾಡಿದಾಗ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡನ್ನು ಪ್ಲೇ ಮಾಡಲಾಗುತ್ತಿದೆ. ಆದರೆ, ಕಳೆದ ಸೀಸನ್ನಲ್ಲಿ ಇದುಕೂಡ ಇರಲಿಲ್ಲ.
ಒಂದು ಮೂಲಗಳ ಪ್ರಕಾರ ಕಿಚ್ಚ ಸುದೀಪ್ ಇನ್ಮುಂದೆ ನಾನು ಬಿಗ್ ಬಾಸ್ ನಿರೂಪಣೆ ಮಾಡಲ್ಲ ಎಂದು ಮೊದಲು ಹೇಳಿದ್ದು ಇದೇ ಕಾರಣಕ್ಕೆ. ಕನ್ನಡಕ್ಕೆ ಆದ್ಯತೆ ನೀಡುತ್ತಿಲ್ಲ ಎಂಬ ಕಾರಣಕ್ಕೆ ಸುದೀಪ್ ನಿರೂಪಣೆಗೆ ಗುಡ್ ಬೈ ಹೇಳಲು ಮುಂದಾಗಿದ್ದು ಎಂಬ ಮಾತಿದೆ. ಇದೀಗ ಅದೆಲ್ಲದರ ಎಫೆಕ್ಟ್ ಎಂಬಂತೆ ಈ ಬಾರಿಯ ಬಿಗ್ ಬಾಸ್ ಲೋಗೋದಲ್ಲಿ ಒಂದು ವೈಶಿಷ್ಟ್ಯ ಕಂಡುಬಂದಿದೆ.
ಹೌದು, ಈ ಸಲದ ಬಿಗ್ ಬಾಸ್ ಲೋಗೋವನ್ನು ಗಡಿಯಾರದ ಮಾದರಿಯಲ್ಲಿ ಡಿಸೈನ್ ಮಾಡಲಾಗಿದೆ. ಚಿನ್ನದ ಬಣ್ಣದ ಅಂಚು ಅದರೊಳಗೆ ವಜ್ರಗಳ ರೀತಿ ಕಾಣುವಂತೆ ಡಿಸೈನ್ ಮಾಡಲಾಗಿದೆ. ಬಿಗ್ ಬಾಸ್ನ ಲೋಗೋದ ಮಧ್ಯ ಭಾಗದಲ್ಲಿ ಗಡಿಯಾರವೊಂದು ಕಾಣುತ್ತದೆ. ಲೋಗೋದ ಕಣ್ಣಿನಲ್ಲೇ 12 ಎಂದು ಡಿಸೈನ್ ಮಾಡಲಾಗಿದೆ. ಸಾಮಾನ್ಯವಾಗಿ ಗಡಿಯಾದ ಮಾದರಿಯಲ್ಲಿ 3,6,9,12 ಅಂಕಿಗಳನ್ನು ಹೆಚ್ಚು ಬಳಸುತ್ತಾರೆ. ಅದೇ ರೀತಿ ಇಲ್ಲೂ ಬಳಸಿದ್ದಾರೆ. ಅದು ಕೂಡ ಕನ್ನಡದ ಅಂಕಿಗಳನ್ನು ಬಳಕೆ ಮಾಡಿರುವುದು ವಿಶೇಷ.
ಈ ಮೂಲಕ ಹಿಡನ್ ಡಿಟೈಲ್ಸ್ನಲ್ಲಿ ಗಮನಿಸಿದಾಗ ಕನ್ನಡ ಅಂಕಿ ಕಂಡು ಬರುತ್ತದೆ. ಹೀಗಾಗಿ ಈ ಬಾರಿ ಶೋನಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವಂತೆ ಕಂಡುಬರುತ್ತಿದೆ. ಇನ್ನು ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ವಾಚ್ ಅಥವಾ ಗಡಿಯಾರ ಇರುವುದಿಲ್ಲ. ಹೀಗಿರುವಾಗ ಈ ಬಾರಿ ಲೋಗೋದಲ್ಲೇ ವಾಚ್ ಬಂದಿರುವ ಕಾರಣ ಸಮಯಕ್ಕೆ ಸಂಬಂಧಿಸಿದ ಡಿಫರೆಂಟ್ ಕಾನ್ಸೆಪ್ಟ್ ಇರಬಹುದು ಎಂಬ ಚರ್ಚೆ ಕೂಡ ನಡೆಯುತ್ತಿದೆ.
Bhagya Lakshmi Serial: ಆಫೀಸ್ ಕೆಲಸ ತಾಂಡವ್ ಮೇಲೆ ಹಾಕಿ ಭಾಗ್ಯ ಮನೆಗೆ ತೆರಳಿದ ಆದೀಶ್ವರ್