Sanjana Burli: ಬಿಗ್ ಬಾಸ್ ಶಿಶಿರ್ ಹೊಸ ಧಾರಾವಾಹಿಗೆ ಪುಟ್ಟಕ್ಕನ ಮಕ್ಕಳು ಸಂಜನಾ ನಾಯಕಿ
ಸಂಜನಾ ಅವರು ಹೊಸ ಧಾರಾವಾಹಿಗೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ ಎಂದು ವರದಿ ಆಗಿದೆ. ಇದನ್ನು ಕೇಳಿ ಅವರ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಕಿರುತೆರೆ ವಲಯದಲ್ಲಿ ಹಬ್ಬಿರುವ ಗಾಸಿಪ್ ಪ್ರಕಾರ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರಲಿರುವ ಹೊಸ ಸೀರಿಯಲ್ ಶ್ರೀ ಗಂಧದ ಗುಡಿಗೆ ನಾಯಕಿ ಆಗಿ ಸಂಜನಾ ಬುರ್ಲಿ ಆಯ್ಕೆ ಆಗಿದ್ದಾರಂತೆ.

ShiShir and Sanjana Burli

ಕನ್ನಡ ಕಿರುತೆರೆಯ ಜನಪ್ರಿಯ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ ಆಗಿ ಮಿಂಚಿದ ನಟಿ ಸಂಜನಾ ಬುರ್ಲಿ (Sanjana Burli) ಈಗಾಗಲೇ ಸೀರಿಯಲ್ ನಿಂದ ಆಚೆ ಬಂದಿದ್ದಾರೆ. ಇವರು ಡಿಸಿ ಸ್ನೇಹಾ ಪಾತ್ರಕ್ಕೆ ಗುಡ್ ಬೈ ಹೇಳಿದ್ದು ಫ್ಯಾನ್ಸ್‌ಗೆ ಸಾಕಷ್ಟು ಬೇಸರ ಮೂಡಿಸಿತು. ಆದರೆ ಸೀರಿಯಲ್‌ನಲ್ಲಿ ಅವರ ಪಾತ್ರವನ್ನು ಸಾವಿನ ಮೂಲಕ ಅಂತ್ಯಮಾಡಲಾಯಿತು. ಇವರ ನಿರ್ಗಮನದ ಈ ಸೀರಿಯಲ್ ಮೇಲೆ ಎಷ್ಟು ಪರಿಣಾಮ ಬೀರಿತು ಎಂದರೆ ಅನೇಕ ಮಂದಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನ ನೋಡೋದು ಬಿಟ್ಟರು.
ಸಂಜನಾ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಧಾರಾವಾಹಿಯಿಂದ ಹೊರ ಬರೋದಾಗಿ ತಿಳಿಸಿದ್ದರು. ಆದರೆ ಸೀರಿಯಲ್ ನಿಂದ ಹೊರ ಬಂದ ಮೇಲೆ ನಟಿ ದೇಶ ವಿದೇಶ ಸುತ್ತೋದ್ರಲ್ಲೇ ಬ್ಯುಸಿಯಾಗಿದ್ದರು. ಆದರೆ, ಅಭಿಮಾನಿಗಳು ಇಂದು ಕೂಡ ಸಂಜನಾ ಮತ್ತೆ ಸ್ನೇಹಾ ಪಾತ್ರದಲ್ಲಿ ನಟಿಸಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಈಗ ಸಂಜನಾ ಬುರ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ.
ಸಂಜನಾ ಅವರು ಹೊಸ ಧಾರಾವಾಹಿಗೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ ಎಂದು ವರದಿ ಆಗಿದೆ. ಇದನ್ನು ಕೇಳಿ ಅವರ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರಲಿರುವ ನೂತನ ಸೀರಿಯಲ್‌ಗೆ ಸಂಜನಾ ಬುರ್ಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕಿರುತೆರೆ ವಲಯದಲ್ಲಿ ಹಬ್ಬಿರುವ ಗಾಸಿಪ್ ಪ್ರಕಾರ, ಕಲರ್ಸ್ನ ಹೊಸ ಸೀರಿಯಲ್ ಶ್ರೀ ಗಂಧದ ಗುಡಿಗೆ ನಾಯಕಿ ಆಗಿ ಸಂಜನಾ ಬುರ್ಲಿ ಆಯ್ಕೆ ಆಗಿದ್ದಾರಂತೆ.
ಶ್ರೀ ಗಂಧದ ಗುಡಿ ಧಾರಾವಾಹಿಯಲ್ಲಿ ಹೀರೋಯಿನ್ ಆಗಿ ನಟಿಸಲು ಸಂಜನಾ ಬುರ್ಲಿ ಸಮ್ಮತಿ ಸೂಚಿಸಿದ್ದಾರಂತೆ. ಈ ಸೀರಿಯಲ್‌ನಲ್ಲಿ ಶಿಶಿರ್ ಶಾಸ್ತ್ರಿ ಹೀರೋ ಆಗಿ ನಟಿಸುತ್ತಿದ್ದಾರೆ. ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದ ಬಳಿಕ ಶಿಶಿರ್ ಶಾಸ್ತ್ರಿಗೆ ಕೂಡ ಸಿಕ್ಕಿರುವ ದೊಡ್ಡ ಅವಕಾಶ ಇದಾಗಿದೆ. ಈಗಾಗಲೇ, ಶ್ರೀ ಗಂಧದ ಗುಡಿ ಧಾರಾವಾಹಿಯ ಪ್ರೋಮೋ ಔಟ್ ಆಗಿದೆ. ಸಂಜನಾ ಅವರು ಈ ಮೊದಲು ಲಗ್ನ ಪತ್ರಿಕೆ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಬಳಿಕ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅವರ ಜನಪ್ರಿಯತೆ ಹೆಚ್ಚಿಸಿತು. ಈಗ ಅವರಿಗೆ ಹೊಸ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿದೆ.
Bhagya Lakshmi Serial: ಆಫೀಸ್ ಕೆಲಸ ತಾಂಡವ್ ಮೇಲೆ ಹಾಕಿ ಭಾಗ್ಯ ಮನೆಗೆ ತೆರಳಿದ ಆದೀಶ್ವರ್