ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಇದರಲ್ಲಿ ಕೆಲವು ವರ್ಕೌಟ್ ಆದರೆ ಇನ್ನೂ ಕೆಲವು ಧಾರಾವಾಹಿಗೆ ಕೆಟ್ಟ ಕಮೆಂಟ್ಗಳು ಬರುತ್ತವೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್‌ಪಿ ಮೂಲಕ ತಿಳಿಯಲಿದೆ. ಒಂದೇ ಚಾನೆಲ್ನಲ್ಲಿ ಪ್ರಸಾರ ಆಗುವ ಧಾರಾವಾಹಿಗಳಾದರೂ ಅವುಗಳ ಮಧ್ಯೆ ಟಿಆರ್‌ಪಿ ಸ್ಪರ್ಧೆ ಇದ್ದೇ ಇರುತ್ತದೆ. ಒಳ್ಳೆಯ ಕ್ವಾಲಿಟಿ ಕಂಟೆಂಟ್ ಕೊಟ್ಟರೇ ವೀಕ್ಷಕರು ಖಂಡಿತ ಕೈ ಬಿಡೋದಿಲ್ಲ.
ಇದೀಗ 14ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಕೆಲ ಧಾರಾವಾಹಿಗಳ ಸಮಯ ಬದಲಾವಣೆಯಿಂದ ಟಿಆರ್‌ಪಿ ಕುಸಿದಿದೆ. ಹೊಸ ಧಾರಾವಾಹಿ ಆದ ಕಾರಣ ಆರಂಭದಲ್ಲಿ ಧಾರಾವಾಹಿಗಳಿಗೆ ಉತ್ತಮ ವೀಕ್ಷಕರಿರುತ್ತಾರೆ. ಆದರೆ, ಮುಂದಿನ ದಿನಗಳಲ್ಲಿ ಸೀರಿಯಲ್ ಹೇಗೆ ಸಾಗುತ್ತೆ ಎಂಬುದು ಮುಖ್ಯ. ಕಳೆದ ಕೆಲವು ತಿಂಗಳುಗಳಿಂದ 2-3 ವರ್ಷಗಳಷ್ಟು ಹಳೆಯ ಸೀರಿಯಲ್‌ಗಳ ಟಿಆರ್‌ಪಿ ಕುಸಿದಿದ್ದು ಇನ್ನೂ ಮೇಲೆದ್ದಿಲ್ಲ.
ಕಳೆದ ವಾರ ಕಲರ್ಸ್ ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೊನೆಗೊಂಡಿತು. ಏಪ್ರಿಲ್ 7 ರಿಂದ ಏಪ್ರಿಲ್ 11 ರವರೆಗೆ ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಕ್ಲೈಮ್ಯಾಕ್ಸ್ ಸಂಚಿಕೆಗಳು ಪ್ರಸಾರವಾದವು. ಇದೀಗ ಟಿಆರ್‌ಪಿ ಲಿಸ್ಟ್‌ನಲ್ಲಿ ಕಲರ್ಸ್ ಕನ್ನಡದ ಟಾಪ್ ಧಾರಾವಾಹಿಯಾಗಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಾಣಿಸಿಕೊಂಡಿದೆ. ನಂಬರ್ 1 ಪಟ್ಟ ಅಲಂಕರಿಸಿದರೂ, ಟಿಆರ್‌ಪಿ ನಂಬರ್‌ನಲ್ಲಿ ಮಹತ್ತರ ಮೈಲಿಗಲ್ಲನ್ನು ಮುಟ್ಟಿಲ್ಲ. ಬದಲಿಗೆ ಈ ಹಿಂದೆ ಪ್ರತಿವಾರ ಈ ಧಾರಾವಾಹಿಗೆ ಎಷ್ಟು ನಂಬರ್ ಸಿಗುತ್ತಿತ್ತೋ ಅಷ್ಟೇ ಸಿಕ್ಕಿದೆ. ಇತರೆ ಚಾನೆಲ್ಗಳ ಟಿಆರ್‌ಪಿ ಬಿಟ್ಟು ಕಲರ್ಸ್ ಕನ್ನಡದಲ್ಲಿ ಧಾರಾವಾಹಿ ಪೈಕಿ ಲಕ್ಷ್ಮೀ ಬಾರಮ್ಮ ಅತಿ ಹೆಚ್ಚು ಜನರು ವೀಕ್ಷಿಸಿದ್ದಾರೆ. ನಗರ ಪ್ರದೇಶ+ ಗ್ರಾಮೀಣ ಪ್ರದೇಶ ಸೇರಿಸಿದರೆ 5.3 ಟಿವಿಆರ್ ಸಿಕ್ಕರೆ, ನಗರ ಪ್ರದೇಶದಲ್ಲಿ ಕೇವಲ 4.1 ಟಿವಿಆರ್ ಗಿಟ್ಟಿಸಿಕೊಂಡಿದೆ.
Bhagya Lakshmi Serial: ಹಿತ ಶತ್ರುಗಳು ಇರೋವರೆಗು ನಾನು ಬೆಳೆಯುತ್ತಲೇ ಇರುತ್ತೇನೆ: ಕನ್ನಿಕಾಗೆ ಭಾಗ್ಯ ತಿರುಗೇಟು
ಲಕ್ಷ್ಮೀ ಬಾರಮ್ಮ ಧಾರಾವಾಹಿಯನ್ನು ಅಂತಿಮ ಹಂತದಲ್ಲಿ ಕಾವೇರಿ ಪಾತ್ರವನ್ನ ತುಂಬಾ ಈಸಿಯಾಗಿ ಮುಗಿಸಲಾಯಿತು. ಬೆಟ್ಟದಿಂದ ಬಿದ್ದು ಕಾವೇರಿ ಸಾವನ್ನಪ್ಪಿದಳು. ಕ್ಲೈಮ್ಯಾಕ್ಸ್‌ನಲ್ಲಿ ಹೆಚ್ಚು ತಿರುಳು ಇಲ್ಲದ ಕಾರಣ ಟಿಆರ್‌ಪಿ ಸಹ ಎಂದಿನಂತೆ ಬಂದಿದೆ. ಇನ್ನು ಕಲರ್ಸ್ ಕನ್ನಡದ ಎರಡನೇ ಧಾರಾವಾಹಿಯಾಗಿ ಭಾಗ್ಯ ಲಕ್ಷ್ಮೀ ಇದೆ. ಈ ಧಾರಾವಾಹಿ 4.5 ಟಿಆರ್‌ಪಿ ಪಡೆದಿದೆ. ಮೂರನೇ ಸ್ಥಾನದಲ್ಲಿ ನಿನಗಾಗಿ (4.1), ನಾಲ್ಕನೇ ಸ್ಥಾನದಲ್ಲಿ ಭಾರ್ಗವಿ ಎಲ್‌ಎಲ್‌ಬಿ (3.1), ಐದನೇ ಸ್ಥಾನದಲ್ಲಿ ಯಜಮಾನ (2.8) ಸೀರಿಯಲ್ ಕಾಣಿಸಿಕೊಂಡಿದೆ.