Bhagya Lakshmi Serial: ಹಿತ ಶತ್ರುಗಳು ಇರೋವರೆಗು ನಾನು ಬೆಳೆಯುತ್ತಲೇ ಇರುತ್ತೇನೆ: ಕನ್ನಿಕಾಗೆ ಭಾಗ್ಯ ತಿರುಗೇಟು
ಭಾಗ್ಯ ಫುಡ್ ಲೈಸನ್ಸ್ಗೆ ಅರ್ಜಿ ಸಲ್ಲಿಸಿ ಮನೆಗೆ ಹಿಂತಿರುಗಿದ್ದಾಳೆ. ಮನೆಯವರೆಲ್ಲ ನಾಳೆ ಲೈಸನ್ಸ್ ಸಿಕ್ಕೇ ಸಿಗುತ್ತೆ ಎಂಬ ಭರವಸೆಯಲ್ಲಿದ್ದಾರೆ. ಈ ಸಂದರ್ಭ ಭಾಗ್ಯ ಮನೆಗೆ ಕನ್ನಿಕಾಳ ಎಂಟ್ರಿ ಆಗಿದೆ. ಬಂದು ಸೋಫಾ ಮೇಲೆ ಕುಳಿತು, ಭಾಗ್ಯ ಏನೋ ಲೈಸನ್ಸ್ ಇಲ್ಲ ಅಂತ ಪ್ರಾಬ್ಲಂ ಆಯಿತಂತೆ.. ಸರಿ ಆಯ್ತಾ? ಎಂದು ಹೀಯಾಳಿಸುತ್ತ ಕೇಳಿದ್ದಾಳೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಗೆ ಮತ್ತೆ ಸಂಕಷ್ಟ ಬಂದೊದಗಿದೆ. ಭರ್ಜರಿ ಯಶಸ್ವಿಯಾಗಿ ನಡೆಯುತ್ತಿದ್ದ ಫುಡ್ ಬ್ಯುಸಿನೆಸ್ ಕೈ ತುತ್ತು ಬಂದ್ ಆಗಿದೆ. ತಾಂಡವ್-ಶ್ರೇಷ್ಠಾ ಜೊತೆಗೆ ಭಾಗ್ಯಾಳ ಫುಡ್ ಬ್ಯುಸಿನೆಸ್ ಮುಗಿಸಲು ಕನ್ನಿಕಾ ಮಾಡಿದ ಮಾಸ್ಟರ್ ಪ್ಲ್ಯಾನ್ ಈ ಬಾರಿ ವರ್ಕ್ ಆಗಿದೆ. ಭಾಗ್ಯಾಳನ್ನು ಸೋಲಿಸಲು ಈ ಮೂವರು ಸೇರಿ ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿದ್ದಾರೆ. ಭಾಗ್ಯಾಳ ಹೊಟ್ಟೆ ತುಂಬಿಸುತ್ತಿರುವ ಕೈ ತುತ್ತು ಮೇಲೆ ಶ್ರೇಷ್ಠಾ-ತಾಂಡವ್-ಕನ್ನಿಕಾ ಕಣ್ಣು ಹಾಕಿದ್ದು, ಇದೀಗ ಭಾಗ್ಯ ದೊಡ್ಡ ತೊಂದರೆಗೆ ಸಿಲುಕಿಕೊಂಡಿದ್ದಾಳೆ.
ಭಾಗ್ಯಾಳನ್ನು ಹೇಗಾದರು ಮಾಡಿ ಸೋಲಿಸಬೇಕೆಂದು ತಾಂಡವ್-ಶ್ರೇಷ್ಠಾ ಇಬ್ಬರೂ ಪಣತೊಟ್ಟಿದ್ದರು. ಒಂದು ಪ್ಲ್ಯಾನ್ ಫ್ಲಾಫ್ ಆದ ಬೆನ್ನಲ್ಲೇ ಮತ್ತೊಂದು ದೊಡ್ಡ ಪ್ಲ್ಯಾನ್ ಮಾಡಿದ್ದಾರೆ. ಕನ್ನಿಕಾಳ ಆದೇಶದಂತೆ ಆಹಾರ ಇಲಾಖೆಯ ಅಧಿಕಾರಿಗಳು ಬಂದು ಭಾಗ್ಯಳ ಮನೆಗೆ ಬಂದು, ನಾವು ಫುಡ್ ಇನ್ಸ್‌ಪೆಕ್ಟರ್, ನೀವು ಲೈಸನ್ಸ್ ಇಲ್ಲದೇ ಊಟ ತಯಾರಿಸಿ ಕೊಡುತ್ತಿದ್ದೀರಿ, ಇದಕ್ಕೆಲ್ಲಾ ಅನುಮತಿ ಪಡೆದುಕೊಳ್ಳಬೇಕು, ಇಲ್ಲವಾದರೆ ಊಟದ ಸರ್ವಿಸ್ ನೀಡುವ ಹಾಗಿಲ್ಲ ಎಂದು ಹೇಳಿ, ಇನ್ನು ಮುಂದೆ ಹೀಗೆ ಮಾಡುವಂತಿಲ್ಲ ಎಂದು ಹೇಳಿ ಭಾಗ್ಯ ತಯಾರಿಸಿದ್ದ ಅಡುಗೆಯನ್ನು ಸೀಜ್ ಮಾಡಿ ಕ್ವಾಲಿಟಿ ಚೆಕ್ ಮಾಡಬೇಕು ಎಂದು ಅಲ್ಲಿಂದ ಫುಡ್ ತೆಗೆದುಕೊಂಡು ಹೋಗಿದ್ದಾರೆ.
ಅಲ್ಲಿ ಅವಳು ಹೋದಾಗ, ಮನೆಯಲ್ಲಿ ಸೀಜ್ ಮಾಡಿಕೊಂಡು ಅಧಿಕಾರಿಗಳು ತೆಗೆದುಕೊಂಡು ಬಂದಿದ್ದ ಊಟದ ಡಬ್ಬಿಯನ್ನು ಅಲ್ಲಿನ ಸಿಬ್ಬಂದಿ ಸವಿಯುತ್ತಿರುವುದು ಕಾಣಿಸುತ್ತದೆ. ಇದರ ಮಧ್ಯೆ ಭಾಗ್ಯ, ಲೈಸನ್ಸ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ಕೇಳುತ್ತಾಳೆ. ಅದಕ್ಕೆ ಆತ, ಅಲ್ಲಿದ್ದ ಸಿಬ್ಬಂದಿ ತೋರಿಸಿ, ಅವರಲ್ಲಿ ಕೇಳಿ ಎನ್ನುತ್ತಾನೆ. ನಂತರ ಭಾಗ್ಯ ಬಳಿ ದುಡ್ಡು ತೆಗೆದುಕೊಂಡು ಸಹಾಯ ಮಾಡುತ್ತಾನೆ. ಆದರೆ, ಅತ್ತ ಕನ್ನಿಕಾ ಪರವಾದ ಅಧಿಕಾರಿ, ಈ ಊಟವನ್ನು ಪರೀಕ್ಷೆಗೆ ಕಳುಹಿಸಬೇಡಿ, ನಾಳೆ ಕೊಡೋಣ.. ರಿಪೋರ್ಟ್ ಚೆನ್ನಾಗಿಲ್ಲ ಎಂದು ಬರುತ್ತೆ.. ಅದರಿಂದ ಲೈಸನ್ಸ್ ಸಿಗುವುದಿಲ್ಲ ಎಂದು ಹೇಳುತ್ತಾನೆ.
ಮತ್ತೊಂದೆಡೆ ಭಾಗ್ಯ ಫುಡ್ ಲೈಸನ್ಸ್ಗೆ ಅರ್ಜಿ ಸಲ್ಲಿಸಿ ಮನೆಗೆ ಹಿಂತಿರುಗಿದ್ದಾಳೆ. ಮನೆಯವರೆಲ್ಲ ನಾಳೆ ಲೈಸನ್ಸ್ ಸಿಕ್ಕೇ ಸಿಗುತ್ತೆ ಎಂಬ ಭರವಸೆಯಲ್ಲಿದ್ದಾರೆ. ಈ ಸಂದರ್ಭ ಭಾಗ್ಯ ಮನೆಗೆ ಕನ್ನಿಕಾಳ ಎಂಟ್ರಿ ಆಗಿದೆ. ಬಂದು ಸೋಫಾ ಮೇಲೆ ಕುಳಿತು, ಭಾಗ್ಯ ಏನೋ ಲೈಸನ್ಸ್ ಇಲ್ಲ ಅಂತ ಪ್ರಾಬ್ಲಂ ಆಯಿತಂತೆ.. ಸರಿ ಆಯ್ತಾ? ಎಂದು ಹೀಯಾಳಿಸುತ್ತ ಕೇಳಿದ್ದಾಳೆ. ಆಗ ಭಾಗ್ಯಾ ಜೋರಾಗಿ ನಗಾಡುತ್ತಾಳೆ. ಆಗ ಕನ್ನಿಕಾಗೆ ಮತ್ತಷ್ಟು ಕೋಪ ಬರುತ್ತದೆ. ಇನ್ಮುಂದೆ ನಾನು ಲೈಸನ್ಸ್ ತೆಗೊಂಡೆ ನನ್ನ ಕೆಲಸ ಸ್ಟಾರ್ಟ್ ಮಾಡ್ತೀನಿ.. ನಿನ್ನಂತ ಹಿತ ಶತ್ರುಗಳು ಇರೋವರೆಗೂ ನಾನು ಬೆಳೀತನೇ ಇರ್ತೀನಿ ಎಂದು ಭಾಗ್ಯ ಕನ್ನಿಕಾಗೆ ಓಪನ್ ಚಾಲೆಂಜ್ ಮಾಡಿದ್ದಾಳೆ.
ಸದ್ಯ ಭಾಗ್ಯಾಗೆ ಫುಡ್ ಲೈಸನ್ಸ್ ಸಿಗುತ್ತ?, ಭಾಗ್ಯ ಹಾಖಿದ ಸವಲಾನ್ನು ಕನ್ನಿಕ ಯಾವರೀತಿ ತೆಗೆದುಕೊಳ್ಳುತ್ತಾಳೆ?, ಕನ್ನಿಕಾ ಪರ ಇರುವ ಆಹಾರ ಇಲಾಖೆಯ ಅಧಿಕಾರಿ ಏನು ರಿಪೋರ್ಟ್ ಕೊಡುತ್ತಾನೆ ಎಂಬುದು ಕುತೂಹಲ ಕೆರಳಿಸಿದ್ದು, ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
Max Manju: ತ್ರಿವಿಕ್ರಮ್ ಮುದ್ದು ಸೊಸೆ ಧಾರಾವಾಹಿಯಲ್ಲಿ ಉಗ್ರಂ ಮಂಜು?: ಕುತೂಹಲ ಕೆರಳಿಸಿದ ಫೋಟೋ