ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Muddu Sose: ಮೊದಲ ವಾರದಲ್ಲೇ ಧೂಳೆಬ್ಬಿಸಿದ ತ್ರಿವಿಕ್ರಮ್ ಮುದ್ದುಸೊಸೆ ಧಾರಾವಾಹಿ: ಟಿಆರ್​ಪಿ ಎಷ್ಟು?

ಕಳೆದ ವಾರ ಕಲರ್ಸ್ ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೊನೆಗೊಂಡಿತು. ಈ ಸಮಯಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್-ಅಪ್ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಆರಂಭವಾಯಿತು. ಮೊದಲ ವಾರವೇ ಈ ಧಾರಾವಾಹಿ ಧೂಳೆಬ್ಬಿಸಿದೆ. ಕಲರ್ಸ್ ಕನ್ನಡದ ನಂಬರ್ ಒನ್ ಧಾರಾವಾಹಿಯಾಗಿ ಇದು ಹೊರಹೊಮ್ಮಿದೆ.

Muddu Sose serial

ಕನ್ನಡ ಕಿರುತೆರೆಯಲ್ಲಿ ಸೀರಿಯಲ್​ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಇದರಲ್ಲಿ ಕೆಲವು ವರ್ಕೌಟ್ ಆದರೆ ಇನ್ನೂ ಕೆಲವು ಧಾರಾವಾಹಿಗೆ ಕೆಟ್ಟ ಕಮೆಂಟ್​ಗಳು ಬರುತ್ತವೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್​​ಪಿ ಮೂಲಕ ತಿಳಿಯಲಿದೆ. ಒಂದೇ ಚಾನೆಲ್​ನಲ್ಲಿ ಪ್ರಸಾರ ಆಗುವ ಧಾರಾವಾಹಿಗಳಾದರೂ ಅವುಗಳ ಮಧ್ಯೆ ಟಿಆರ್​ಪಿ ಸ್ಪರ್ಧೆ ಇದ್ದೇ ಇರುತ್ತದೆ. ಒಳ್ಳೆಯ ಕ್ವಾಲಿಟಿ ಕಂಟೆಂಟ್​ ಕೊಟ್ಟರೇ ವೀಕ್ಷಕರು ಖಂಡಿತ ಕೈ ಬಿಡೋದಿಲ್ಲ.

ಇದೀಗ 15ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಕೆಲ ಧಾರಾವಾಹಿಗಳ ಸಮಯ ಬದಲಾವಣೆಯಿಂದ ಟಿಆರ್​ಪಿ ಕುಸಿದಿದೆ. ಹೊಸ ಧಾರಾವಾಹಿಗೆ ಭರ್ಜರಿ ಟಿಆರ್​ಪಿ ಸಿಕ್ಕಿದೆ. ಹೊಸ ಕಥೆ, ಹೊಸ ಧಾರಾವಾಹಿ ಆದ ಕಾರಣ ಆರಂಭದಲ್ಲಿ ಉತ್ತಮ ವೀಕ್ಷಕರಿರುತ್ತಾರೆ. ಆದರೆ, ಮುಂದಿನ ದಿನಗಳಲ್ಲಿ ಸೀರಿಯಲ್ ಹೇಗೆ ಸಾಗುತ್ತೆ ಎಂಬುದು ಮುಖ್ಯ. ಕಳೆದ ಕೆಲವು ತಿಂಗಳುಗಳಿಂದ 2-3 ವರ್ಷಗಳಷ್ಟು ಹಳೆಯ ಸೀರಿಯಲ್‌ಗಳ ಟಿಆರ್‌ಪಿ ಕುಸಿದಿದ್ದು ಇನ್ನೂ ಮೇಲೆದ್ದಿಲ್ಲ.

ಕಳೆದ ವಾರ ಕಲರ್ಸ್ ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೊನೆಗೊಂಡಿತು. ಈ ಸಮಯಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್-ಅಪ್ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಆರಂಭವಾಯಿತು. ಮೊದಲ ವಾರವೇ ಈ ಧಾರಾವಾಹಿ ಧೂಳೆಬ್ಬಿಸಿದೆ. ಕಲರ್ಸ್ ಕನ್ನಡದ ನಂಬರ್ ಒನ್ ಧಾರಾವಾಹಿಯಾಗಿ ಇದು ಹೊರಹೊಮ್ಮಿದೆ.

Actor Sridhar: ಪಾರು ಸೀರಿಯಲ್ ನಟ ಶ್ರೀಧರ್‌ಗೆ ಅನಾರೋಗ್ಯ: ಚಿಕಿತ್ಸೆಯ ಸಹಾಯಕ್ಕಾಗಿ ಅಂಗಲಾಚಿದ ನಟ!

ಲಾಂಚ್‌ ಆದ ವಾರದಲ್ಲಿಯೇ ಮುದ್ದು ಸೊಸೆ ಧಾರಾವಾಹಿ 5.0 ಟಿವಿಆರ್‌ (ಅರ್ಬನ್ + ರೂರಲ್) ಗಳಿಸಿದೆ. ಇನ್ನೂ ಅರ್ಬನ್‌ನಲ್ಲಿ ಮಾತ್ರ ಮುದ್ದು ಸೊಸೆ ಸೀರಿಯಲ್‌ಗೆ 4.0 ಟಿವಿಆರ್‌ ಸಿಕ್ಕಿದೆ. ಆ ಮೂಲಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್ಸ್ ಪೈಕಿ ಮುದ್ದು ಸೊಸೆ ಹೆಚ್ಚು ಟಿಆರ್‌ಪಿ ಪಡೆದು, ನಂಬರ್‌ 1 ಸ್ಥಾನಕ್ಕೇರಿದೆ. ಎರಡನೇ ಸ್ಥಾನದಲ್ಲಿ 4.4 ಟಿವಿಆರ್‌ ನೊಂದಿಗೆ ಭಾಗ್ಯಲಕ್ಷ್ಮೀ ಧಾರಾವಾಹಿ ಇದೆ. ನಿನಗಾಗಿ ಧಾರಾವಾಹಿ 3.7 ರೇಟಿಂಗ್​ನೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇನ್ನು ಕಿರುತೆರೆ ಲೋಕದ ನಂಬರ್ ಒನ್ ಧಾರಾವಾಹಿ ಯಾವುದು ಎಂಬುದನ್ನು ನೋಡುವುದಾದರೆ, ಮೊದಲ ಸ್ಥಾನದಲ್ಲಿ ಝೀ ಕನ್ನಡದ ಶ್ರಾವಣಿ ಸುಬ್ರಹ್ಮಣ್ಯ ದಾರಾವಾಹಿ ಇದೆ. ಈ ಧಾರಾವಾಹಿ 7.3 ಟಿವಿಆರ್‌ ಪಡೆದುಕೊಂಡಿದೆ. ಈ ಮೊದಲು ಕೆಲವು ಧಾರಾವಾಹಿಗಳು 10 ಟಿವಿಆರ್ ದಾಟಿದ ಉದಾಹರಣೆ ಇದೆ. ಆದರೆ, ಈಗ ಅನೇಕರು ಐಪಿಎಲ್ ವೀಕ್ಷಿಸುತ್ತಿರೋ ಹಿನ್ನೆಲೆಯಲ್ಲಿ ಧಾರಾವಾಹಿಗಳ ಟಿಆರ್​ಪಿ ಕುಸಿದು ಹೋಗಿದೆ. 7.1 ಟಿವಿಆರ್‌ ಗಿಟ್ಟಿಸುವ ಮೂಲಕ ನಾ ನಿನ್ನ ಬಿಡಲಾರೆ ಧಾರಾವಾಹಿ ಎರಡನೇ ಸ್ಥಾನ ಪಡೆದಿದ್ದರೆ, 7.0 ಟಿವಿಆರ್‌ ಪಡೆದು ಮೂರನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ ಇದೆ. 6.5 ಟಿವಿಆರ್‌ ದಾಖಲಿಸಿ ಅಣ್ಣಯ್ಯ ಸೀರಿಯಲ್‌ ನಾಲ್ಕನೇ ಸ್ಥಾನ ಮತ್ತು 5.8 ಟಿವಿಆರ್‌ ಗಳಿಸಿ ಅಮೃತಧಾರೆ ಐದನೇ ಸ್ಥಾನದಲ್ಲಿದೆ.