Actor Sridhar: ಪಾರು ಸೀರಿಯಲ್ ನಟ ಶ್ರೀಧರ್‌ಗೆ ಅನಾರೋಗ್ಯ: ಚಿಕಿತ್ಸೆಯ ಸಹಾಯಕ್ಕಾಗಿ ಅಂಗಲಾಚಿದ ನಟ!
ಇನ್‌ಫೆಕ್ಷನ್‌ನಿಂದಾಗಿ ನಟ ಶ್ರೀಧರ್ ತೀವ್ರ ಅಸ್ವಸ್ಥರಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಸದ್ಯ ನಟನನ್ನು ಅವರ ತಾಯಿ ನೋಡಿಕೊಳ್ಳುತ್ತಿದ್ದಾರೆ. ಪ್ರತಿ ದಿನ ಚಿಕಿತ್ಸೆಗೆ 10ರಿಂದ 15 ಸಾವಿರ ರೂ. ಖರ್ಚಾಗುತ್ತಿದೆ. ಹಾಗಾಗಿ ಹೆಚ್ಚಿನ ಹಣ ಸಹಾಯಕ್ಕಾಗಿ ನಟನ ಪರ ಕಮಲಿ ಖ್ಯಾತಿಯ ಅಂಕಿತಾ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

Actor Sridhar

ಕನ್ನಡಡ ಕಿರುತೆರೆಯ ಪಾರು, ವಧು ಸೀರಿಯಲ್ ನಟ ಶ್ರೀಧರ್ (Actor Sridhar) ಅವರು ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ವಧು ಸೀರಿಯಲ್‌ನಲ್ಲಿ ನಾಯಕಿ ಡಿವೋರ್ಸ್ ಲಾಯರ್ ವಧು ಚಿಕ್ಕಪ್ಪನ ಪಾತ್ರದಲ್ಲಿ ನಟ ಶ್ರೀಧರ್ ಅಭಿನಯಿಸುತ್ತಿದ್ದರು. ಆದರೆ, ದಿಢೀರ್ ಎಂದು ನಟ ಶ್ರೀಧರ್ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡಿರುವ ಫೋಟೋವೊಂದು ವೈರಲ್ ಆಗಿದೆ. ಸದ್ಯ ಬೆಂಗಳೂರಿನ ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ನಟ ಶ್ರೀಧರ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್‌ಫೆಕ್ಷನ್‌ನಿಂದಾಗಿ ನಟ ಶ್ರೀಧರ್ ತೀವ್ರ ಅಸ್ವಸ್ಥರಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಸದ್ಯ ನಟನನ್ನು ಅವರ ತಾಯಿ ನೋಡಿಕೊಳ್ಳುತ್ತಿದ್ದಾರೆ. ಪ್ರತಿ ದಿನ ಚಿಕಿತ್ಸೆಗೆ 10ರಿಂದ 15 ಸಾವಿರ ರೂ. ಖರ್ಚಾಗುತ್ತಿದೆ. ಹಾಗಾಗಿ ಹೆಚ್ಚಿನ ಹಣ ಸಹಾಯಕ್ಕಾಗಿ ನಟನ ಪರ ಕಮಲಿ ಖ್ಯಾತಿಯ ಅಂಕಿತಾ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಶ್ರೀಧರ್ ಅವರ ಪ್ರಸ್ತುತ ಪರಿಸ್ಥಿತಿಯ ಫೋಟೋ, ಬ್ಯಾಂಕ್ ಮಾಹಿತಿ ಸಮೇತ ಪೋಸ್ಟ್ ಮಾಡಿದ್ದಾರೆ. ಅವರಿಗೆ ನಟಿ ಸ್ವಪ್ನಾ ದೀಕ್ಷಿತ್ ಸಾಥ್ ನೀಡಿದ್ದಾರೆ.
‘‘ನಮಸ್ತೆ ನಾನು ಶ್ರೀಧರ.. ಇದ್ದಕ್ಕಿದ ಹಾಗೆ ಅನಾರೋಗ್ಯಕ್ಕೆ ತುತ್ತಾಗಿ ಬಹಳಷ್ಟು ಸಂಕಷ್ಟದಲ್ಲಿದ್ದೇನೆ. ಆಸ್ಪತ್ರೆಯ ಖರ್ಚನ್ನು ಭರಿಸಲಾಗದಷ್ಟು ತೊಂದರೆಯಾಗಿದೆ. ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೇನೆ. ಒಂದು ದಿನಕ್ಕೆ ಆಸ್ಪತ್ರೆಯ ಖರ್ಚು, ಮಾತ್ರೆಯ ಖರ್ಚು ಹತ್ತರಿಂದ ಹದಿನೈದು ಸಾವಿರ ಆಗುತ್ತಿದೆ. ಇದ್ದ ಉಳಿತಾಯದ ಹಣ, ಸಹಾಯದ ಹಣ.. ಎಲ್ಲವೂ ಮುಗಿದುಹೋಗಿದೆ. ದಯಮಾಡಿ ತಾವೆಲ್ಲರೂ ಶ್ರೀಧರನಿಗೆ ಕೈಲಾದ ಹಣದ ಸಹಾಯ ಮಾಡಬೇಕೆಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದೇನೆ. ಶ್ರೀಧರನನ್ನು ಕಾಪಾಡಿ.. ನನ್ನನ್ನು ಬದುಕಿಸಲು ಪ್ರಯತ್ನಿಸಿ.. ಕೈಲಾದಷ್ಟು ಹಣದ ಸಹಾಯ ಮಾಡಿ’’ ಎಂದು ಶ್ರೀಧರ್ ಹೇಳಿರುವುದನ್ನ ನಟಿ ಸಪ್ನಾ ದೀಕ್ಷಿತ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಕೆಲವೇ ತಿಂಗಳ ಹಿಂದೆಯಷ್ಟೇ ರಿಲೀಸ್ ಆದ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದಲ್ಲೂ ಶ್ರೀಧರ್ ನಟಿಸಿದ್ದರು. ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ಅವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಆದ್ರೆ ಈಗ ಅಚ್ಚರಿ ಎಂಬಂತೆ ಶ್ರೀಧರ್ ತಮ್ಮ ಚಿಕಿತ್ಸೆಗಾಗಿ ಜನರಲ್ಲಿ ಸಹಾಯ ಕೋರಿದ್ದಾರೆ.
Bhagya Lakshmi Serial: ತಾಂಡವ್ ಆಫೀಸ್ನಲ್ಲೇ ದೊಡ್ಡದಾಗಿ ಕ್ಯಾಂಟೀನ್ ಶುರುಮಾಡಿದ ಭಾಗ್ಯ