Kannada Serial TRP: ನಂ. 1 ಸೀರಿಯಲ್: ಟಿಆರ್ಪಿಯಲ್ಲಿ ಮೊದಲ ವಾರವೇ ದಾಖಲೆ ಬರೆದ ಕರ್ಣ
ತನ್ನ ಪ್ರೊಮೋ ಮೂಲಕ ದೊಡ್ಡ ಹೈಪ್ ಕ್ರಿಯೆಟ್ ಮಾಡಿದ್ದ ಕರ್ಣ ಧಾರಾವಾಹಿ ಲೀಗಲ್ ಸಮಸ್ಯೆಯನ್ನ ಬಗೆಹರಿಸಿಕೊಂಡು ಜುಲೈ 3ನೇ ತಾರೀಖಿನಿಂದ ಅಂದರೆ ಗುರುವಾರದಿಂದಲೇ ಅಚ್ಚರಿ ಎಂಬಂತೆ ಪ್ರಸಾರ ಆರಂಭಿಸಿತು. ಕರ್ಣ ಲೇಟ್ ಆದರೂ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟ.. ಜೊತೆಗೆ ಮೊದಲ ವಾರವೇ ಟಿಆರ್ಪಿಯಲ್ಲಿ ದಾಖಲೆಯನ್ನೂ ಬರೆದ.

Karna Serial

ಕನ್ನಡ ಕಿರುತೆರೆಯಲ್ಲಿ ಸೀರಿಯಲ್ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್‌ಪಿ ಮೂಲಕ ತಿಳಿಯಲಿದೆ. ಇದೀಗ 26ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಈ ವಾರದ ವಿಶೇಷ ಎಂದರೆ, ಝೀ ಕನ್ನಡದಲ್ಲಿ ಕಳೆದ ವಾರದ ಮಧ್ಯೆ ಶುರುವಾದ ಕರ್ಣ ಧಾರಾವಾಹಿ ಕಿರುತೆರೆ ಲೋಕದಲ್ಲಿ ಹೊಸ ದಾಖಲೆ ಬರೆದಿದೆ.
ತನ್ನ ಪ್ರೊಮೋ ಮೂಲಕ ದೊಡ್ಡ ಹೈಪ್ ಕ್ರಿಯೆಟ್ ಮಾಡಿದ್ದ ಕರ್ಣ ಧಾರಾವಾಹಿ ಜೂನ್ 16 ಸೋಮವಾರದಿಂದ ರಾತ್ರಿ 8 ಗಂಟೆಯಿಂದ ಪ್ರಸಾರ ಕಾಣಬೇಕಿತ್ತು. ಆದರೆ, ಅದೇ ದಿನ ಪ್ರಸಾರಕ್ಕೆ ಸ್ಟೇ ಆರ್ಡರ್ ಬಂತು. ಬಳಿಕ ತನ್ನೆಲ್ಲ ಲೀಗಲ್ ಸಮಸ್ಯೆಯನ್ನ ಬಗೆಹರಿಸಿಕೊಂಡು ಜುಲೈ 3ನೇ ತಾರೀಖಿನಿಂದ ಅಂದರೆ ಗುರುವಾರದಿಂದಲೇ ಅಚ್ಚರಿ ಎಂಬಂತೆ ಪ್ರಸಾರ ಆರಂಭಿಸಿತು. ಸಾಮಾನ್ಯವಾಗಿ ಹೊಸ ಧಾರಾವಾಹಿಗಳು ಸೋಮವಾರದಿಂದ ಶುರುವಾಗುತ್ತವೆ. ಆದರೆ, ಕರ್ಣ ಲೇಟ್ ಆದರೂ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟ.. ಜೊತೆಗೆ ಮೊದಲ ವಾರವೇ ಟಿಆರ್ಪಿಯಲ್ಲಿ ದಾಖಲೆಯನ್ನೂ ಬರೆದ.
ಹೌದು, ಕರ್ಣ ಧಾರಾವಾಹಿಯ ಲಾಂಚ್ ಎಪಿಸೋಡ್‌ಗೆ ಬರೋಬ್ಬರಿ 9.1 ಟಿವಿಆರ್ ಪಡೆದಿದೆ. ಆ ಮೂಲಕ ಮೊದಲ ಎಪಿಸೋಡ್‌ನಲ್ಲೇ ಕರ್ಣ ಸೀರಿಯಲ್ ದಾಖಲೆ ಬರೆದಿದೆ. ಅಷ್ಟೇ ಅಲ್ಲದೆ ಎರಡನೇ ಎಪಿಸೋಡ್‌ಗೆ (ಶುಕ್ರವಾರ) 8.7 ಟಿವಿಆರ್ ಲಭಿಸಿದೆ. ಒಟ್ಟಾರೆಯಾಗಿ ಕರ್ನಾಟಕದಲ್ಲಿ ಕರ್ಣ ಧಾರಾವಾಹಿ ನಂಬರ್ 1 ಪಟ್ಟಕ್ಕೇರಿದೆ. ಅರ್ಬನ್ + ರೂರಲ್ ಮಾರ್ಕೆಟ್‌ನಲ್ಲಿ ಲಾಂಚ್ ವೀಕ್ 10.2 ಟಿವಿಆರ್ ಬಂದಿದೆ. ರೂರಲ್‌ನಲ್ಲಿ 11.5 ಟಿವಿಆರ್, ಅರ್ಬನ್‌ನಲ್ಲಿ 8.9 ಟಿವಿಆರ್ ದಾಖಲಿಸಿದೆ. ಮೊದಲೆರಡು ಎಪಿಸೋಡ್‌ಗಳಲ್ಲೇ ಡಬಲ್ ಡಿಜಿಟ್ ಟಿವಿಆರ್ ಪಡೆದು ಹೊಸ ದಾಖಲೆ ಕರ್ಣ ಧಾರಾವಾಹಿ ಬರೆದಿದೆ.
Bhagya Lakshmi Serial: ಪೂಜಾ-ಕಿಶನ್ ಮದುವೆ ನಿಲ್ಲಿಸಲು ಮತ್ತೊಂದು ಮೆಗಾ ಪ್ಲ್ಯಾನ್ ಮಾಡಿದ ಮೀನಾಕ್ಷಿ
ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿಯಲ್ಲಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಕೂಡ ಕಾಣಿಸಿಕೊಂಡಿದ್ದಾರೆ. ಕರ್ಣ ತ್ರಿಕೋನ ಪ್ರೇಮಕಥೆಯ ಧಾರಾವಾಹಿ ಆಗಿದೆ. ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರ್ತಿರುವ ಕರ್ಣ ಧಾರಾವಾಹಿಯಲ್ಲಿ ಈಗಾಗಲೇ ದೊಡ್ಡ ತಾರೆಯರ ದಂಡೇ ಇದೆ. ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಿದ್ದ ವರಲಕ್ಷ್ಮೀ ಶ್ರೀನಿವಾಸ್ ಮತ್ತು ಶ್ಯಾಮ್ ಸಿಮ್ರನ್ ನಟಿಸುತ್ತಿದ್ದಾರೆ.