ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಪೂಜಾ-ಕಿಶನ್ ಮದುವೆ ನಿಲ್ಲಿಸಲು ಮತ್ತೊಂದು ಮೆಗಾ ಪ್ಲ್ಯಾನ್ ಮಾಡಿದ ಮೀನಾಕ್ಷಿ

ಮೀನಾಕ್ಷಿ ಮೆಗಾ ಪ್ಲ್ಯಾನ್ ಮಾಡಿದ್ದು, ಭಾಗ್ಯಾಳ ಜೊತೆ ಎಮೋಷನಲ್ ಆಟವಾಡಲು ಮುಂದಾಗಿದ್ದಾಳೆ. ಮದುವೆಗೆ ವಿವಿಐಪಿಗಳು ಬರ್ತಾರೆ.. ಅವರ ನಿರೀಕ್ಷೆ ತಲುಪಲಿಲ್ಲ ಎಂದರೆ ನಮಗೆ ಅವಮಾನ.. ಹೀಗಾಗಿ ಮದುವೆ ಜವಾಬ್ದಾರಿಯನ್ನ ನಾವೇ ವಹಿಸಿಕೊಳ್ತೇನೆ ಎಂದು ಭಾಗ್ಯ ಫ್ಯಾಮಿಲಿ ಮುಂದೆ ಮೀನಾಕ್ಷಿ ಹೇಳಿದ್ದಾಳೆ.

ಪೂಜಾ-ಕಿಶನ್ ಮದುವೆ ನಿಲ್ಲಿಸಲು ಮೀನಾಕ್ಷಿ ಮೆಗಾ ಪ್ಲ್ಯಾನ್

Bhagya Lakshmi serial

Profile Vinay Bhat Jul 10, 2025 11:57 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತಂಗಿ ಪೂಜಾ ಹಾಗೂ ಕಿಶನ್ ಮದುವೆ ನಿಲ್ಲಿಸಲು ಮೀನಾಕ್ಷಿ, ಆದೀಶ್ವರ್ ಕಾಮತ್ ಹಾಗೂ ಕನ್ನಿಕಾ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಮದುವೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಈ ಮೂವರೂ ಒಂದೊಂದು ಕಡೆಯಿಂದ ಭಾಗ್ಯ ಮನೆಯವರಿಗೆ ಭಾಣ ಬಿಡುತ್ತಿದ್ದಾರೆ. ಆದರೆ, ಇದಕ್ಕೆಲ್ಲ ಜಗ್ಗದ ಭಾಗ್ಯ ತನ್ನದೇ ಶೈಲಿಯಲ್ಲಿ ತಿರುಗೇಟು ಕೊಡುತ್ತಾ ಬಂದಿದ್ದಾಳೆ. ಆದರೆ, ಈ ಬಾರಿ ಮೀನಾಕ್ಷಿ ಮೆಗಾ ಪ್ಲ್ಯಾನ್ ಮಾಡಿದ್ದು, ಭಾಗ್ಯಾಳನ್ನು ಎಮೋಷನಲ್ ಆಗಿ ಟಚ್ ಮಾಡಿ ಈ ಮದುವೆ ನಿಲ್ಲಿಸಲು ಮುಂದಾಗಿದ್ದಾಳೆ.

ಆದೀಶ್ವರ್ ಮಾಡಿದ ಫೇಕ್ ವಿಲ್ ಪ್ಲ್ಯಾನ್ ಆತನಿಗೇ ತಿರುಗೇಟು ನೀಡಿತು. ಕಿಶನ್​ಗೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ ಎಂದು ತಿಳಿದು ಭಾಗ್ಯ ಮನೆಯವರು ಖಂಡಿತವಾಗಿಯೂ ಈ ಮದುವೆ ಬೇಡ ಎಂದು ಹೇಳುತ್ತಾರೆ ಎಂದು ಮೀನಾಕ್ಷಿ ಮತ್ತು ಆದೀಶ್ವರ್ ಅಂದುಕೊಳ್ಳುತ್ತಾರೆ. ಆದರೆ, ಇಲ್ಲಿ ಆಗಿದ್ದೇ ಬೇರೆ. ಆಸ್ತಿಯಲ್ಲಿ ಕಿಶನ್‌ಗೆ ಪಾಲು ಸಿಗುವುದಿಲ್ಲ ಅಂತ ಗೊತ್ತಾದ್ಮೇಲೂ.. ಮದುವೆ ಮಾತುಕತೆಯನ್ನ ಭಾಗ್ಯ ಮುಂದುವರೆಸುತ್ತಾಳೆ. ನಿಮ್ಮ ಆಸ್ತಿಯನ್ನ ನೋಡಿ ನಾವು ಮದುವೆಗೆ ಒಪ್ಪಿಕೊಳ್ಳಲಿಲ್ಲ. ಅಸಲಿಗೆ, ನಿಮ್ಮ ಮಗ ಅಂತ ಗೊತ್ತಾಗೋಕೆ ಮುನ್ನವೇ ನಾವು ಮದುವೆಗೆ ಒಪ್ಪಿಕೊಂಡಿದ್ವಿ. ಕಿಶನ್‌ ಗುಣ ಮಾತ್ರ ನಮಗೆ ಮೆಚ್ಚುಗೆಯಾಗಿದ್ದು ಎಂದು ಭಾಗ್ಯ ಹೇಳುತ್ತಾಳೆ. ಕುಸುಮಾ ಸಹ ಆಸ್ತಿ ವಿಚಾರಕ್ಕೆ ಮಹತ್ವ ಕೊಡುವುದಿಲ್ಲ.

ಅಷ್ಟೇ ಅಲ್ಲದೆ ಈ ವಿಚಾರದಿಂದ ಬೇಸರಗೊಂಡು ಕಿಶನ್ ಮನೆಬಿಟ್ಟು ಫ್ರೆಂಡ್ ಮನೆಯಲ್ಲಿ ವಾಸವಿದ್ದಾನೆ. ಬಳಿಕ ಆದೀಶ್ವರ್ ಹಾಗೂ ಭಾಗ್ಯ ಹೇಗೋ ಕಿಶನ್​ನ ಸಮಾಧಾನ ಪಡಿಸಿದ್ದಾರೆ. ಫೇಕ್ ವಿಲ್ ಪ್ಲ್ಯಾನ್ ಫೇಲ್ ಆದ ಕೂಡಲೇ ಎಚ್ಚೆತ್ತಗೊಂಡ ಮೀನಾಕ್ಷಿ, ಭಾಗ್ಯಾನೇ ಈ ಮದುವೆ ಬೇಡ ಎಂದು ಹೇಳಬೇಕು.. ಆರೀತಿಯ ಏಟು ಕೊಡುತ್ತೇನೆ ಎಂದು ಅವರ ಮನೆಗೆ ತೆರಳಿದ್ದಾಳೆ. ಜೊತೆಗೆ ಕನ್ನಿಕಾ ಕೂಡ ಇದ್ದಾಳೆ. ಕನ್ನಿಕಾ ಮೊದಲಿಗೆ ಭಾಗ್ಯ ಮನೆಯವರ ಮೇಲೆ ಹೊರೆ ಹಾಕಲು ಮುಂದಾಗಿದ್ದಾಳೆ. ಮದುವೆ ಕಾರ್ಡ್ ಲಕ್ಸುರಿ ಆಗಿ ಇರಬೇಕು ಎಂದು ಹೇಳಿದ್ದಾಳೆ.

ಇದರ ಜೊತೆಗೆ ಭಾಗ್ಯ ಮನೆಯವರು ಮದುವೆ ಕಾರ್ಡ್​ನಲ್ಲಿ ಉಲ್ಲೇಖಿಸಿದ ಹಾಲ್ ಅನ್ನು ಕನ್ನಿಕಾ ಬದಲಾಯಿಸಿದ್ದಾಳೆ. ನೀವು ಯಾವುದೊ ಸಣ್ಣ ಜುಜುಬಿ ಹಾಲ್​ನಲ್ಲಿ ಮದುವೆ ಮಾಡಲು ಹೊರಟಿದ್ದೀರಿ.. ಬಂದವರು ನಮ್ಮ ಬಗ್ಗೆ ಏನು ಅಂದುಕೊಳ್ಳಬೇಡ ಎಂದು ಲಕ್ಸುರಿ ರೆಸಾರ್ಟ್​ನಲ್ಲಿ ಮದುವೆ ಮಾಡಬೇಕು.. ಅದಕ್ಕಾಗಿ ಹೆಸರು ಬದಲಾಯಿಸಿದ್ದೇನೆ ಎಂದು ಹೇಳಿದ್ದಾಳೆ. ಈಗ ಕನ್ನಿಕಾ ಸೆಲೆಕ್ಟ್ ಮಾಡಿರುವ ಹಾಲ್​ನ ಬೆಲೆ ದಿನಕ್ಕೆ ಲಕ್ಷ ಇದೆ. ಇದು ಭಾಗ್ಯ ಕುಟುಂಬಕ್ಕೆ ಆಘಾತ ಉಂಟು ಮಾಡಿದೆ.



ಇದರ ಬೆನ್ನಲ್ಲೇ ಮೀನಾಕ್ಷಿ ಮೆಗಾ ಪ್ಲ್ಯಾನ್ ಮಾಡಿದ್ದು, ಭಾಗ್ಯಾಳ ಜೊತೆ ಎಮೋಷನಲ್ ಆಟವಾಡಲು ಮುಂದಾಗಿದ್ದಾಳೆ. ಮದುವೆಗೆ ವಿವಿಐಪಿಗಳು ಬರ್ತಾರೆ.. ಅವರ ನಿರೀಕ್ಷೆ ತಲುಪಲಿಲ್ಲ ಎಂದರೆ ನಮಗೆ ಅವಮಾನ.. ಹೀಗಾಗಿ ಮದುವೆ ಜವಾಬ್ದಾರಿಯನ್ನ ನಾವೇ ವಹಿಸಿಕೊಳ್ತೇನೆ ಎಂದು ಭಾಗ್ಯ ಫ್ಯಾಮಿಲಿ ಮುಂದೆ ಮೀನಾಕ್ಷಿ ಹೇಳಿದ್ದಾಳೆ. ಇದಕ್ಕೆ ಭಾಗ್ಯ ವಿರೋಧ ವ್ಯಕ್ತಪಡಿಸಿದ್ದಾಳೆ. ಬೇಡ ನಾವೇ ನೋಡಿಕೊಳ್ಳುತ್ತೇವೆ.. ಮದುವೆ ಜವಾಬ್ದಾರಿ ಹುಡುಗಿ ಕಡೆಯಿಂದಲೇ ಆಗಬೇಕಲ್ವಾ.. ನಾವೇ ಚೆನ್ನಾಗಿ ಮಾಡುತ್ತೇವೆ ಎಂದಿದ್ದಾಳೆ.



ಆದರೆ, ಭಾಗ್ಯ ಮಾತನ್ನು ಕೇಳದ ಮೀನಾಕ್ಷಿ.. ಪೂಜಾ ಮದುವೆ ಜವಾಬ್ದಾರಿಯಿಂದ ಮೀನಾಕ್ಷಿ ಹೊರಗಿಟ್ಟಿದ್ದಾಗಿದೆ. ಆ ಮೂಲಕ ಭಾಗ್ಯಗೆ ಇದು ತನ್ನ ತಂಗಿ ಮದುವೆ ಅಂತ ಅನಿಸಬಾರದು ಮತ್ತು ಎಲ್ಲಾ ಕೆಲಸಗಳಿಂದ ಭಾಗ್ಯಳನ್ನ ಆಚೆ ಇಟ್ಟು ಆಕೆಯನ್ನ ಎಮೋಷನಲ್‌ ಆಗಿ ಬ್ರೇಕ್ ಡೌನ್ ಮಾಡುವುದು ಮೀನಾಕ್ಷಿಯ ಪ್ಲಾನ್. ಎಮೋಷನಲ್ ಆಗಿ ಬ್ರೇಕ್ ಡೌನ್ ಆಗುವ ಭಾಗ್ಯ ಮದುವೆಯನ್ನೂ ನಿಲ್ಲಿಸುತ್ತಾಳೆ ಅಂತ ಮೀನಾಕ್ಷಿ ಭಾವಿಸಿದ್ದಾಳೆ. ಸದ್ಯ ಧಾರಾವಾಹಿ ಕುತೂಹಲ ಮೂಡಿಸಿದ್ದು, ಭಾಗ್ಯ ಏನು ಮಾಡುತ್ತಾಳೆ?, ಮದುವೆಗೆ ಇನ್ನೇನು ಒಂದು ದಿನ ಅಷ್ಟೇ ಬಾಕಿ ಉಳಿದಿದ್ದು, ಮುಂದಿನ ಎಪಿಸೋಡ್ ಹೇಗಿರಲಿದೆ ಎಂಬುದು ರೋಚಕತೆ ಸೃಷ್ಟಿಸಿದೆ.

Bigg Boss 19: ಟಿಆರ್​ಪಿ ಹೆಚ್ಚಿಸಲು ಮಹಾತಂತ್ರ: ಬಿಗ್ ಬಾಸ್​ಗೆ ಬರಲಿದ್ದಾರೆ ಚಹಲ್ ಮಾಜಿ ಪತ್ನಿ ಧನಶ್ರೀ ವರ್ಮಾ