ಕನ್ನಡ ಕಿರುತೆರೆಯಲ್ಲಿ ಸೀರಿಯಲ್ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್‌ಪಿ ಮೂಲಕ ತಿಳಿಯಲಿದೆ. ಇದೀಗ 30ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಈ ವಾರದ ವಿಶೇಷ ಎಂದರೆ, ಝೀ ಕನ್ನಡದಲ್ಲಿ ಇತ್ತೀಚೆಗಷ್ಟೆ ಪ್ರಾರಂಭವಾದ ಕರ್ಣ ಧಾರಾವಾಹಿ ಕಿರುತೆರೆ ಲೋಕದಲ್ಲಿ ಸತತ ಐದನೇ ವಾರವೂ ನಂಬರ್ ಒನ್ ಆಗಿ ಇತಿಹಾಸ ನಿರ್ಮಿಸಿದೆ.
ತನ್ನ ಪ್ರೊಮೋ ಮೂಲಕ ದೊಡ್ಡ ಹೈಪ್ ಕ್ರಿಯೆಟ್ ಮಾಡಿದ್ದ ಕರ್ಣ ಧಾರಾವಾಹಿಯನ್ನು ಜನರು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಇತರೆ ಎಲ್ಲ ಧಾರಾವಾಹಿಗಳನ್ನು ಮೆಟ್ಟಿನಿಂತು ಸತತ ನಾಲ್ಕನೇ ವಾರ ಕೂಡ ಕರ್ಣ ತನ್ನ ದಾಖಲೆ ಮುಂದೆವರೆಸಿದ್ದಾನೆ. ಮೊದಲ ವಾರ ಕರ್ಣ ಧಾರಾವಾಹಿಗೆ ಅರ್ಬನ್ + ರೂರಲ್‌ನಲ್ಲಿ 10.2 ಟಿವಿಆರ್, ಎರಡನೇ ವಾರ 10.4 ಟಿವಿಆರ್, ಮೂರನೇ ವಾರ 10.2 ಟಿವಿಆರ್ ಲಭಿಸಿತ್ತು. ನಾಲ್ಕನೇ ವಾರ 9.6 ಟಿವಿಆರ್ ಪಡೆದಿತ್ತು. ಇದೀಗ ಐದನೇ ವಾರ ಕರ್ಣ ಸೀರಿಯಲ್‌ಗೆ 10.1 ಟಿವಿಆರ್ (ಅರ್ಬನ್ + ರೂರಲ್ ಮಾರ್ಕೆಟ್) ಲಭಿಸಿದೆ.
ಇನ್ನು 9.8 ಟಿವಿಆರ್ ದಾಖಲಿಸಿ ಲಕ್ಷ್ಮೀ ನಿವಾಸ ಎರಡನೇ ಸ್ಥಾನ ಪಡೆದುಕೊಂಡರೆ, ನಾ ನಿನ್ನ ಬಿಡಲಾರೆ ಸೀರಿಯಲ್ 9.4 ಟಿವಿಆರ್ ಪಡೆದುಕೊಂಡು ಮೂರನೇ ಸ್ಥಾನದಲ್ಲಿದೆ. ಅಣ್ಣಯ್ಯ ಸೀರಿಯಲ್ 9.3 ಟಿವಿಆರ್ ಪಡೆದು ನಾಲ್ಕನೇ ಸ್ಥಾನ ಮತ್ತು ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ 8.7 ಟಿವಿಆರ್‌ನೊಂದಿಗೆ ಐದನೇ ಸ್ಥಾನದಲ್ಲಿದೆ.
Bharjari Bachelors: ಭರ್ಜರಿ ಬ್ಯಾಚ್ಯುಲರ್ಸ್ನಲ್ಲಿ ಸಿಕ್ಕ ಹಣವನ್ನು ಸುನೀಲ್ ಏನು ಮಾಡಿದ್ರು ನೋಡಿ
ಇನ್ನು ಕಲರ್ಸ್ ಕನ್ನಡದ ವಿಚಾರಕ್ಕೆ ಬಂದರೆ ಅರ್ಬಲ್ + ರೂರಲ್ ಮಾರ್ಕೆಟ್‌ನಲ್ಲಿ 5.5 ಟಿವಿಆರ್ ಪಡೆದು ನಂದಗೋಕುಲ ಸೀರಿಯಲ್ ಕಲರ್ಸ್ನ ನಂಬರ್ ಒನ್ ಧಾರಾವಾಹಿ ಆಗಿದೆ. ಭಾರ್ಗವಿ ಎಲ್‌ಎಲ್‌ಬಿ ಅರ್ಬನ್ + ರೂರಲ್ ಮಾರ್ಕೆಟ್‌ನಲ್ಲಿ 5.4 ಟಿವಿಆರ್ ಪಡೆದುಕೊಂಡು ಎರಡನೇ ಸ್ಥಾನದಲ್ಲಿದೆ. ಭಾಗ್ಯಲಕ್ಷ್ಮೀ ಧಾರಾವಾಹಿಗೆ 5.1 ಟಿವಿಆರ್, ಮುದ್ದು ಸೊಸೆ ಧಾರಾವಾಹಿಗೆ 4.9 ಟಿವಿಆರ್ ಮತ್ತು ನಿನಗಾಗಿ ಧಾರಾವಾಹಿಗೆ 4.4 ಟಿವಿಆರ್ ಲಭಿಸಿದೆ.