ಕನ್ನಡ ಕಿರುತೆರೆಯಲ್ಲಿ ಕರ್ಣನ (Karna Serial) ಆಗಮನದ ನಂತರ ಸೀರಿಯಲ್ಗಳ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಟಿಆರ್ಪಿಯಲ್ಲಿ ಮೇಲೇಳಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಕರ್ಣನ ಮುಂದೆ ಇದು ಯಾವುದೂ ವರ್ಕ್ ಆಗುತ್ತಿಲ್ಲ. ಇದೀಗ 33ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಈ ವಾರ ಕೂಡ ಝೀ ಕನ್ನಡದಲ್ಲಿ ಕರ್ಣನ ಆರ್ಭಟ ಮುಂದುವರೆದಿದೆ. ಕಿರುತೆರೆ ಲೋಕದಲ್ಲಿ ಸತತ ಎಂಟನೇ ವಾರವೂ ನಂಬರ್ ಒನ್ ಧಾರಾವಾಹಿ ಆಗಿ ಕರ್ಣ ಇತಿಹಾಸ ನಿರ್ಮಿಸಿದ್ದಾನೆ.
ಮೊದಲ ವಾರ ಕರ್ಣ ಧಾರಾವಾಹಿಗೆ ಅರ್ಬನ್ + ರೂರಲ್‌ನಲ್ಲಿ 10.2 ಟಿವಿಆರ್, ಎರಡನೇ ವಾರ 10.4 ಟಿವಿಆರ್, ಮೂರನೇ ವಾರ 10.2 ಟಿವಿಆರ್ ಲಭಿಸಿತ್ತು. ನಾಲ್ಕನೇ ವಾರ 9.6 ಟಿವಿಆರ್ ಪಡೆದಿತ್ತು. ಐದನೇ ವಾರ ಕರ್ಣ ಸೀರಿಯಲ್‌ಗೆ 10.1 ಟಿವಿಆರ್ (ಅರ್ಬನ್ + ರೂರಲ್ ಮಾರ್ಕೆಟ್) ಲಭಿಸಿದರೆ ಆರನೇ ವಾರ 9.1 ಟಿವಿಆರ್ (ಅರ್ಬನ್ + ರೂರಲ್ ಮಾರ್ಕೆಟ್) ಏಳನೇ ವಾರ 9.2 ಟಿವಿಆರ್ ಪಡೆದುಕೊಂಡಿತ್ತು. ಇದೀಗ ಎಂಟನೇ ವಾರ ಕೂಡ 9.1 ಟಿವಿಆರ್ ದಾಖಲಿಸಿ ಕರ್ಣ ಧಾರಾವಾಹಿ ನಂಬರ್ 1 ಸ್ಥಾನದಲ್ಲಿ ಭದ್ರವಾಗಿದೆ.
ಇನ್ನು ಎರಡನೇ ಸ್ಥಾನದಲ್ಲಿ ಎರಡು ಧಾರಾವಾಹಿ ಇದೆ. 9.0 ಟಿವಿಆರ್ ದಾಖಲಿಸಿ ಅಣ್ಣಯ್ಯ ಮತ್ತು ಲಕ್ಷ್ಮೀ ನಿವಾಸ ಸೀರಿಯಲ್ ಎರಡನೇ ಸ್ಥಾನದಲ್ಲಿದೆ. ನಾ ನಿನ್ನ ಬಿಡಲಾರೆ ಸೀರಿಯಲ್ 7.9 ಟಿವಿಆರ್‌ನೊಂದಿಗೆ ಮೂರನೇ ಸ್ಥಾನ ಮತ್ತು 7.3 ಟಿವಿಆರ್‌ನೊಂದಿಗೆ ಆಮೃತಧಾರೆ ನಾಳ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ 7.2 ಟಿವಿಆರ್‌ನೊಂದಿಗೆ ಶ್ರಾವಣಿ ಸುಭ್ರಮಣ್ಯ ಮತ್ತು ಬ್ರಹ್ಮಗಂಟು ಧಾರಾವಾಹಿ ಇದೆ.
Drishti Bottu: ದೃಷ್ಟಿನ ಕ್ಷಮಿಸೋಕೆ ತಯಾರಿಲ್ಲ: ದುಃಖದಲ್ಲಿ ಮುಳುಗಿದ ದತ್ತಭಾಯ್
ಇನ್ನು ಕಲರ್ಸ್ ಕನ್ನಡದ ವಿಚಾರಕ್ಕೆ ಬಂದರೆ, ನಂದಗೋಕುಲ ಧಾರಾವಾಹಿ ಅರ್ಬಲ್ + ರೂರಲ್ ಮಾರ್ಕೆಟ್‌ನಲ್ಲಿ 5.4 ಟಿವಿಆರ್ ಪಡೆದು ಕಲರ್ಸ್ನ ನಂಬರ್ ಒನ್ ಧಾರಾವಾಹಿ ಆಗಿದೆ. ಭಾರ್ಗವಿ ಎಲ್‌ಎಲ್‌ಬಿ ಹಾಗೂ ಮುದ್ದು ಸೊಸೆ ಧಾರಾವಾಹಿ ಅರ್ಬನ್ + ರೂರಲ್ ಮಾರ್ಕೆಟ್‌ನಲ್ಲಿ 5.1 ಟಿವಿಆರ್ ಪಡೆದುಕೊಂಡು ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. 4.9 ಟಿವಿಆರ್ ನೊಂದಿಗೆ ಭಾಗ್ಯ ಲಕ್ಷ್ಮೀ ಸೀರಿಯಲ್ ನಾಲ್ಕನೇ ಸ್ಥಾನ ಮತ್ತು 4.1 ಟಿವಿಆರ್ ಮೂಲಕ ಯಜಮಾನ ಐದನೇ ಸ್ಥಾನದಲ್ಲಿದೆ.