ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿಯ (Karna Kannada serial) ಪ್ರತಿ ಎಪಿಸೋಡ್ ರೋಚಕತೆ ಸೃಷ್ಟಿಸಿದೆ. ಇದಕ್ಕೆ ಈ ಧಾರಾವಾಹಿ ಕಿರುತೆರೆ ಲೋಕದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಸದ್ಯ ಧಾರಾವಾಹಿಯಲ್ಲಿ ಊಹಿಸಲಾಗದ ಟ್ವಿಸ್ಟ್ ನೀಡಲಾಗಿದೆ. ಕರ್ಣ-ನಿಧಿ ಇಬ್ಬರೂ ಪ್ರೀತಿ ಮಾಡುತ್ತಿದ್ದಾರೆ. ನಿಧಿಯ ಹುಟ್ಟುಹಬ್ಬಕ್ಕೆ ಕೂಡ ಕರ್ಣ ದೊಡ್ಡದಾಗಿ ಸರ್ಪ್ರೈಸ್ ನೀಡಿದ್ದಾನೆ. ಆದರೆ, ಇದೀಗ ಝೀ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಕರ್ಣ ನಿಧಿಯ ಅಕ್ಕ ನಿತ್ಯಾಳನ್ನು ಮದುವೆ ಆಗುವುದನ್ನು ತೋರಿಸಲಾಗಿದೆ.
ಮೊನ್ನೆಯಷ್ಟೆ ಮತ್ತಿನ ಅಮಲಿನಲ್ಲಿ ಕರ್ಣ ನಿಧಿಗೆ ಮೊದಲ ಬಾರಿ ಪ್ರಪೋಸ್ ಮಾಡಿದ್ದ. ಇದಕ್ಕಿಂತ ಮುಂಚೆಯೇ ನಿಧಿ ಕರ್ಣನಿಗೆ ಪ್ರಪೋಸ್ ಮಾಡಿದ್ದಳು. ಆದರೆ, ಇದಕ್ಕೆ ಕರ್ಣನ ಕಡೆಯಿಂದ ಯಾವುದೇ ಉತ್ತರ ಬಂದಿರಲಿಲ್ಲ. ಬಳಿಕ ನಿಧಾನವಾಗಿ ಕರ್ಣ ನಿಧಿ ಕಡೆ ವಾಲುತ್ತ ತನ್ನ ಪ್ರೀತಿಯನ್ನು ಕೂಡ ಹೇಳಿಕೊಂಡಿದ್ದ.. ಇದಕ್ಕೆ ಕರ್ಣನ ತಂದೆ ರಮೇಶ್ ಅವರಿಂದ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿತ್ತು.
ರಮೇಶ್ ಹಾಗೂ ನಯನತಾರಾಗೆ ಬಿಟ್ಟರೆ ಕರ್ಣ-ನಿಧಿ ಲವ್ ವಿಷಯ ಬೇರೆ ಯಾರಿಗೂ ತಿಳಿದಿರಲಿಲ್ಲ. ನಿಧಿ ತನ್ನ ಅಕ್ಕ ನಿತ್ಯಾಳಿಗೆ ಕೂಡ ಹೇಳಿರಲಿಲ್ಲ.. ನಿತ್ಯಾಳಿಗೆ ಕರ್ಣನನ್ನು ಕಂಡರೆ ಅಷ್ಟಕ್ಕಷ್ಟೆ.. ಆತನಿಂದ ನಿತ್ಯಾ ಅನೇಕ ಸಮಸ್ಯೆ ಎದುರಿಸಬೇಕಾಗಿ ಬಂದಿತ್ತು. ಹೀಗಾಗಿ ನಿತ್ಯಾಳಿಗೆ ಕರ್ಣನ ಕಂಡರೆ ಆಗಲ್ಲ.. ಆದರೆ, ಇದೀಗ ಕರ್ಣನನ್ನೇ ನಿತ್ಯಾ ಮದುವೆ ಆಗಿದ್ದಾಳೆ. ಇದರಿಂದ ನಿಧಿಯ ಹೃದಯ ಒಡೆದು ಹೋಗಿದೆ.
ನಿತ್ಯಾ ತೇಜಸ್ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದಳು.. ಇವರ ಎಂಗೇಜ್ಮೆಂಟ್ ಕೂಡ ಆಗಿದೆ. ಮುಂಬರುವ ಎಪಿಸೋಡ್ಗಳಲ್ಲಿ ಇವರ ಮದುವೆ ಆಗಲಿದೆ. ಆದರೆ, ಮದುವೆ ದಿನ ತೇಜಸ್-ನಿತ್ಯಾ ನಡುವೆ ಏನೋ ಆಗಲಿದೆ.. ಹೀಗಾಗಿ ಇವರಿಬ್ಬರ ಮದುವೆ ನಿಲ್ಲುತ್ತೆ.. ಈ ಸಂದರ್ಭ ಕರ್ಣನ ಅಜ್ಜಿ ಹಾಗೂ ನಿತ್ಯಾಳ ಅಜ್ಜಿ ಕರ್ಣನನ್ನು ಮನವೊಲಿಸಿ ನೀನು ಮದುವೆ ಆಗು ಎಂದು ಹೇಳಬಹುದು. ಆಗ ದಾನ ಶೂರ ಕರ್ಣ ಬೇರೆ ದಾರಿಯಿಲ್ಲದೆ ನಿತ್ಯಾಳ ಕೊರಳಿಗೆ ತಾಳಿ ಕಟ್ಟುವ ಸಂದರ್ಭ ಬರುತ್ತದೆ.
ಇದಿಷ್ಟೇ ಅಲ್ಲ ಇಲ್ಲಿ ಮತ್ತೊಂದು ಟ್ವಿಸ್ಟ್ ಕೂಡ ನೀಡಲಾಗಿದೆ. ಕರ್ಣ ನಿಧಿಯನ್ನು ನೋಡಿಕೊಂಡೆ ನಿತ್ಯಾಳ ಕೊರಳಿಗೆ ತಾಳಿ ಕಟ್ಟಿರುವುದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಬಳಿಕ ಸಪ್ತಪದಿ ತುಳಿಯುವಾಗ ನಿತ್ಯಾ ಕಾಲು ಉಳುಕಿದಾದ ಬೈಮಿಸ್ಟೇಕ್ ಆಗಿ ಕರ್ಣ, ನಿತ್ಯಾಳ ಕೈ ಹಿಡಿಯುತ್ತಾನೆ, ಆಗ ಅವನಿಗೆ ನಿತ್ಯಾಳ ನಾಡಿ ಮಿಡಿತ ಗೊತ್ತಾಗುತ್ತದೆ. ಆ ನಾಡಿಮಿಡಿತದಿಂದ ನಿತ್ಯಾ ಪ್ರಗ್ನೆಂಟ್ ಎಂಬ ವಿಷಯ ಡಾಕ್ಟರ್ ಕರ್ಣನಿಗೆ ಅರಿವಾಗಿದೆ. ಅಸಲಿಗೆ ಈ ಮಗು ತೇಜಸ್ನದ್ದಾಗಿರುತ್ತದೆ.
ಸದ್ಯ ಕರ್ಣ ಧಾರಾವಾಹಿಯಲ್ಲಿ ಮುಂದಿನ ಎಪಿಸೋಡ್ಗಳು ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಈಗಾಗಲೇ ಕನ್ನಡದ ನಂಬರ್ ಒನ್ ಧಾರಾವಾಹಿಯಾಗಿ ಮಿಂಚುತ್ತಿರುವ ಕರ್ಣ ಮುಂದಿನ ಮದುವೆ ಎಪಿಸೋಡ್ನಲ್ಲಿ ಟಿಆರ್ಪಿ ವಿಚಾರದಲ್ಲಿ ದಾಖಲೆ ಸೃಷ್ಟಿಸುವುದು ಖಚಿತ.
BBK 12: ಬಿಗ್ ಬಾಸ್ನಲ್ಲಿ ರಕ್ಷಿತಾ ಶೆಟ್ಟಿಗೆ ಅವಮಾನ: ಸಾಮಾಜಿಕ ತಾಣಗಳಲ್ಲಿ ಭುಗಿಲೆದ್ದ ಆಕ್ರೋಶ