ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karna Serial: ಬಹುನಿರೀಕ್ಷಿತ ಕರ್ಣ ಧಾರಾವಾಹಿ ಆರಂಭಕ್ಕೆ ಮುಹೂರ್ತ ಫಿಕ್ಸ್: ಈ ದಿನಾಂಕದಿಂದ ಪ್ರಸಾರ ಆರಂಭ

ಕರ್ಣ ಧಾರಾವಾಹಿ ಜೂನ್ 16ರಿಂದ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ. ರಾತ್ರಿ 8 ಗಂಟೆಗೆ ಕರ್ಣನ ದರ್ಶನವಾಗಲಿದೆ. ಈ ಕುರಿತು ವಾಹಿನಿ ಅಧಿಕೃತವಾಗಿ ತಿಳಿಸಿದೆ. ‘‘ತನ್ನವರಿಗಾಗಿ ನಗುವಿನ ಔಷಧ ಕೊಡೋ ತ್ಯಾಗಮಯಿ ಜೀವಕ್ಕೊಂದು ಸಾಂತ್ವನದ ಹೃದಯ! ಕರ್ಣ | ಇದೇ ಜೂನ್ 16ರಿಂದ ಸೋಮ-ಶುಕ್ರ ರಾತ್ರಿ 8ಕ್ಕೆ’’ ಎಂದು ಪ್ರೊಮೋವನ್ನು ಝೀ ಕನ್ನಡ ಬಿಡುಗಡೆ ಮಾಡಿದೆ.

ಬಹುನಿರೀಕ್ಷಿತ ಕರ್ಣ ಧಾರಾವಾಹಿ ಆರಂಭಕ್ಕೆ ಮುಹೂರ್ತ ಫಿಕ್ಸ್

Karna Serial

Profile Vinay Bhat Jun 6, 2025 7:44 AM

ಝೀ ಕನ್ನಡ ವಾಹಿನಿಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಧಾರಾವಾಹಿಯೊಂದು ಶುರುವಾಗಲಿದೆ. ಈಗಾಗಲೇ ತನ್ನ ಪ್ರೊಮೋ ಮೂಲಕ ದೊಡ್ಡ ಹೈಪ್ ಕ್ರಿಯೆಟ್ ಮಾಡಿರುವ ಕರ್ಣ ಧಾರಾವಾಹಿಯ (Karna Serial) ಪ್ರಸಾರದ ದಿನಾಂಕ ಹಾಗೂ ಸಮಯ ಅನೌನ್ಸ್ ಆಗಿದೆ. ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿ ಕೇವಲ ಒಂದೇ ಒಂದು ಪ್ರೊಮೋ ಮೂಲಕ ವೀಕ್ಷಕರನ್ನು ಕಾದು ಕುಳಿದುಕೊಳ್ಳುವಂತೆ ಮಾಡಿದೆ. ಡಾಕ್ಟರ್​ ಕರ್ಣ ಆಗಿ ಕಿರಣ್ ರಾಜ್ ಟಿವಿ ಪರೆದೆ ಮೇಲೆ ಮಿಂಚೋಕೆ ಮತ್ತೇ ಬರುತ್ತಿದ್ದಾರೆ. ಜೊತೆಗೆ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ ಕರ್ಣನಿಗೆ ನಾಯಕಿಯಾಗಿದ್ದಾರೆ.

ಕರ್ಣ ಧಾರಾವಾಹಿ ಜೂನ್ 16ರಿಂದ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ. ರಾತ್ರಿ 8 ಗಂಟೆಗೆ ಕರ್ಣನ ದರ್ಶನವಾಗಲಿದೆ. ಈ ಕುರಿತು ವಾಹಿನಿ ಅಧಿಕೃತವಾಗಿ ತಿಳಿಸಿದೆ. ‘‘ತನ್ನವರಿಗಾಗಿ ನಗುವಿನ ಔಷಧ ಕೊಡೋ ತ್ಯಾಗಮಯಿ ಜೀವಕ್ಕೊಂದು ಸಾಂತ್ವನದ ಹೃದಯ! ಕರ್ಣ | ಇದೇ ಜೂನ್ 16ರಿಂದ ಸೋಮ-ಶುಕ್ರ ರಾತ್ರಿ 8ಕ್ಕೆ’’ ಎಂದು ಪ್ರೊಮೋವನ್ನು ಝೀ ಕನ್ನಡ ಬಿಡುಗಡೆ ಮಾಡಿದೆ.

ಕರ್ಣ ಧಾರಾವಾಹಿಯಲ್ಲಿ ಮತ್ತೊಂದು ವಿಶೇಷ ಇದೆ. ಅದುವೇ ಎರಡು ನಾಯಕಿ. ಈ ಧಾರಾವಾಹಿಯಲ್ಲಿ ಭವ್ಯಾ ಜೊತೆಗೆ ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಕೂಡ ನಾಯಕಿ ಆಗಿದ್ದಾರೆ. ಅಂದಹಾಗೆ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಈ ಧಾರಾವಾಹಿ ಪ್ರಸಾರ ಕಾಣಲಿದೆ. ಈ ಸಮಯದಲ್ಲಿ ಸದ್ಯ ಲಕ್ಷ್ಮೀ ನಿವಾಸ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ನಿತ್ಯ ಒಂದು ಗಂಟೆ ಪ್ರಸಾರ ಕಾಣುತ್ತಿದೆ. ಅದನ್ನು ಅರ್ಧಗಂಟೆಗೆ ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಭವ್ಯಾ ಗೌಡ ಅವರು ಈ ಧಾರಾವಾಹಿಯಲ್ಲಿ ನಿಧಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಅವರು ಮೆಡಿಕಲ್ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೈನಕಾಲಜಿಸ್ಟ್‌ ಆಗಿ ಕಿರಣ್‌ ರಾಜ್‌ ನಟಿಸುತ್ತಿದ್ದಾರೆ. ಕರ್ಣನ ಫ್ಯಾಮಿಲಿಯಲ್ಲಿ ಹಿರಿಯ ನಟಿ ಆಶಾ ರಾಣಿ, ನಟ - ನಿರ್ದೇಶಕ ನಾಗಾಭರಣ, ಒಲವಿನ ನಿಲ್ದಾಣ ಸೀರಿಯಲ್ ಖ್ಯಾತಿಯ ವರಲಕ್ಷ್ಮೀ ಶ್ರೀನಿವಾಸ್ ಮತ್ತು ನಟಿ ಶ್ಯಾಮ್ ಸಿಮ್ರನ್ ಇದ್ದಾರೆ. ಶ್ರುತಿ ನಾಯ್ಡು ನಿರ್ಮಾಣದ ಕರ್ಣ ಸೀರಿಯಲ್‌ ಬರುತ್ತಿದೆ.

Aishwarya Shindogi: ವಿಲನ್ ಪಾತ್ರದ ಮೂಲಕ ಮತ್ತೆ ಕಿರುತೆರೆಗೆ ಮರಳಿದ ಐಶ್ವರ್ಯಾ ಸಿಂಧೋಗಿ: ಯಾವ ಧಾರಾವಾಹಿ?