ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karna Serial: ಇಂದಿನಿಂದ ತ್ರಿಕೋನ ಪ್ರೇಮಕಥೆಯ ಬಹುನಿರೀಕ್ಷಿತ ಕರ್ಣ ಧಾರಾವಾಹಿ ಆರಂಭ

ಝೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಹೊಸ ಕರ್ಣ ಧಾರಾವಾಹಿ ಶುರುವಾಗಲಿದೆ. ಈಗಾಗಲೇ ತನ್ನ ಪ್ರೊಮೋ ಮೂಲಕ ದೊಡ್ಡ ಹೈಪ್ ಕ್ರಿಯೆಟ್ ಮಾಡಿರುವ ಕರ್ಣ ಧಾರಾವಾಹಿ ಇಂದು ರಾತ್ರಿ 8 ಗಂಟೆಯಿಂದ ಪ್ರಸಾರ ಕಾಣಲಿದೆ. ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿ ಕೇವಲ ಒಂದೇ ಒಂದು ಪ್ರೊಮೋ ಮೂಲಕ ವೀಕ್ಷಕರನ್ನು ಕಾದು ಕುಳಿದುಕೊಳ್ಳುವಂತೆ ಮಾಡಿದೆ.

ಇಂದಿನಿಂದ ತ್ರಿಕೋನ ಪ್ರೇಮಕಥೆಯ ಕರ್ಣ ಧಾರಾವಾಹಿ ಆರಂಭ

Karna Serial

Profile Vinay Bhat Jun 16, 2025 7:38 AM

ಝೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಹೊಸ ಕರ್ಣ ಧಾರಾವಾಹಿ (Karna serial) ಶುರುವಾಗಲಿದೆ. ಈಗಾಗಲೇ ತನ್ನ ಪ್ರೊಮೋ ಮೂಲಕ ದೊಡ್ಡ ಹೈಪ್ ಕ್ರಿಯೆಟ್ ಮಾಡಿರುವ ಕರ್ಣ ಧಾರಾವಾಹಿ ಇಂದು ರಾತ್ರಿ 8 ಗಂಟೆಯಿಂದ ಪ್ರಸಾರ ಕಾಣಲಿದೆ. ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿ ಕೇವಲ ಒಂದೇ ಒಂದು ಪ್ರೊಮೋ ಮೂಲಕ ವೀಕ್ಷಕರನ್ನು ಕಾದು ಕುಳಿದುಕೊಳ್ಳುವಂತೆ ಮಾಡಿದೆ. ಡಾಕ್ಟರ್​ ಕರ್ಣ ಆಗಿ ಕಿರಣ್ ರಾಜ್ ಟಿವಿ ಪರೆದೆ ಮೇಲೆ ಮಿಂಚೋಕೆ ಮತ್ತೇ ಬರುತ್ತಿದ್ದಾರೆ.

ಈ ಧಾರಾವಾಹಿಯಲ್ಲಿ ಕರ್ಣನಿಗೆ ಜೋಡಿಯಾಗಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ ಇದ್ದಾರೆ. ಇದರ ಜೊತೆಗೆ ಭವ್ಯಾ ತಂಗಿ ಪಾತ್ರದಲ್ಲಿ ನಮ್ರತಾ ಗೌಡ ಕೂಡ ನಟಿಸುತ್ತಿದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆಯ ಧಾರಾವಾಹಿ ಆಗಿದೆ. ನಮ್ರತಾ ನಿತ್ಯಾ ಅನ್ನೋ ಪಾತ್ರ ಮಾಡ್ತಿದ್ದಾರೆಬ ಭವ್ಯಾ ಪಾತ್ರದ ಹೆಸರು ನಿಧಿ. ನಿತ್ಯಾ, ನಿಧಿ ಇಬ್ಬರೂ ಅಕ್ಕ-ತಂಗಿ. ಅಜ್ಜಿ ಜೊತೆಗೆ ಜೀವನ ಮಾಡ್ತಾ ಇರುತ್ತಾರೆ. ಅಜ್ಜಿ ಪಾತ್ರದಲ್ಲಿ ಹಿರಿಯ ನಟಿ ಗಾಯತ್ರಿ ಪ್ರಭಾಕರ್​ ಅವರು ಕಾಣಿಸಿಕೊಳ್ತಿದ್ದಾರೆ.

ಇನ್ನು ಕರ್ಣನ ಬಗ್ಗೆ ಹೇಳುವುದಾದರೆ.. ಕಸದಬುಟ್ಟಿಯಲ್ಲಿ ಅನಾಥವಾಗಿ ಬಿದ್ದಿದ್ದ ಕರ್ಣ ಎನ್ನುವ ಮಗುವನ್ನು ಪ್ರತಿಷ್ಠಿತ ಕುಟುಂಬದ ರಾಮಕೃಷ್ಣ ವಸಿಷ್ಠ ಅವರು ರಕ್ಷಿಸುತ್ತಾರೆ. ತಾತನಿಗೆ ಕೊಟ್ಟ ಮಾತಿನಂತೆ ಕರ್ಣನು ದೊಡ್ಡವನಾದ ಮೇಲೆ ಪ್ರಸೂತಿ, ಸ್ತ್ರೀರೋಗ ತಜ್ಞನಾಗಿ ತಾತ ಕಟ್ಟಿಸಿದ ಆಸ್ಪತ್ರೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಾನೆ. ಜನಪ್ರಿಯ ಸ್ತ್ರೀರೋಗ ತಜ್ಞ ಆಗಿರುವ ಈತ ಬಡವರಿಗಾಗಿ ತೋರಿಸುವ ಕಾಳಜಿ, ವೃತ್ತಿಪರ ನಿಷ್ಠೆ ಎಲ್ಲರಿಗೂ ಮಾದರಿಯಾಗಲಿದೆ.

ಆದರೆ, ಕರ್ಣನಿಗೆ ಮನೆಯಲ್ಲಿ ಕಿಂಚಿತ್ತೂ ಬೆಲೆಯಿಲ್ಲ. ತನ್ನದೇ ಮನೆಯಲ್ಲಿ ಅನಾಥನಂತೆ ಬದುಕುತ್ತಿರುತ್ತಾನೆ. ಹೊರಗಿನ ಪ್ರಪಂಚಕ್ಕೆ ಜನಪ್ರಿಯ ಡಾಕ್ಟರ್‌ ಆಗಿದ್ದರೂ ಕೂಡ ಮನೆಯಲ್ಲಿ ಮಾತ್ರ ಕೆಲಸಗಾರನಂತೆ ಇರುತ್ತಾನೆ. ಮನೆಯ ಎಲ್ಲಾ ಸದಸ್ಯರ ಕೆಲಸವನ್ನು ತಾನೇ ಮಾಡುವ ಕರ್ಣ ಅಮ್ಮ, ಅಜ್ಜಿಯ ಪಾಲಿಗೆ ಮುದ್ದಿನ ಮಗ. ಎಲ್ಲ ನೋವನ್ನು ನುಂಗುತ್ತಾ, ಕಷ್ಟಗಳನ್ನು ಎದುರಿಸುವುದೇ ಈ ಧಾರಾವಾಹಿಯ ಕಥಾ ವಸ್ತು. ಇಬ್ಬರು ಹೀರೋಯಿನ್​ಗಳಲ್ಲಿ ಕರ್ಣ ಯಾರನ್ನು ಪ್ರೀತಿ ಮಾಡ್ತಾನೆ? ಯಾರನ್ನು ಮದುವೆ ಆಗ್ತಾನೆ ಎನ್ನೋದು ಇಲ್ಲಿರುವ ದೊಡ್ಡ ಪ್ರಶ್ನೆ ಆಗಿದೆ. ಇದರ ಜೊತೆಗೆ ನಿಧಿಗೆ ಕರ್ಣನ ಮೇಲೆ ಲವ್‌ ಇರುತ್ತದೆ. ನಿತ್ಯಾ ಹಾಗೂ ಕರ್ಣನ ಮಧ್ಯೆ ಪ್ರೀತಿ ಹುಟ್ಟತ್ತಾ? ನಿತ್ಯಾ ಹಾಗೂ ನಿಧಿ ನಡುವೆ ಕರ್ಣನಿಗೆ ಜೋಡಿ ಆಗೋರು ಯಾರು ಎನ್ನೋದು ನೋಡಬೇಕಿದೆ.

Jyothi Rai: ಮಾದಕ ಚೆಲುವೆ ಜ್ಯೋತಿ ರೈ ಬಿಗ್ ಬಾಸ್ ಮನೆಗೆ ಎಂಟ್ರಿ?

ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರ್ತಿರುವ ಕರ್ಣ ಧಾರಾವಾಹಿಯಲ್ಲಿ ಕಿರಣ್ ರಾಜ್‌, ಭವ್ಯಾ, ನಮ್ರತಾ ಜೊತೆ ದೊಡ್ಡ ತಾರೆಯರ ದಂಡೇ ಇದೆ. ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಿದ್ದ ವರಲಕ್ಷ್ಮೀ ಶ್ರೀನಿವಾಸ್ ಮತ್ತು ಶ್ಯಾಮ್ ಸಿಮ್ರನ್‌ ನಟಿಸುತ್ತಿದ್ದಾರೆ.