ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿ (Karna Serial) ಕಳೆದ ಕೆಲವು ದಿನಗಳಿಂದ ರೋಚಕತೆ ಸೃಷ್ಟಿಸಿದೆ. ಸದ್ಯ ಧಾರಾವಾಹಿಯಲ್ಲಿ ಊಹಿಸಲಾಗದ ಟ್ವಿಸ್ಟ್ ನೀಡಲಾಗುತ್ತಿದೆ. ಒಂದುಕಡೆ ನಿತ್ಯಾ-ತೇಜಸ್ ಮದುವೆ ಕಾರ್ಯ ಶುರುವಾಗಿದೆ. ಅದ್ಧೂರಿಯಾಗಿ ಮಂಟಪ ಮಾಡಲಾಗಿದೆ. ಎಲ್ಲ ಸಂಬಂಧಿಕರು ಕೂಡ ಹಾಜರಾಗಿದ್ದಾರೆ. ಅತ್ತ ನಿಧಿ-ಕರ್ಣ ಮದುವೆ ಮಂಟಪದಲ್ಲೂ ತಮ್ಮದೇ ಪ್ರೀತಿಯ ಲೋಕದಲ್ಲಿ ಮುಳುಗಿದ್ದಾರೆ. ಹೀಗಿರುವಾಗ ಎಲ್ಲರಿಗೂ ಬರಸಿಡಿಲಿನಂತಹ ಸುದ್ದಿಯೊಂದು ಬಂದಿದೆ.
ನಿತ್ಯಾ ಹಾಗೂ ತೇಜಸ್ ಹಸೆಮಣೆ ಮೇಲೆ ಕೂರಬೇಕು ಎನ್ನುವಷ್ಟರಲ್ಲಿ ತೇಜಸ್ ಹಾಗೂ ಅವನ ಅಪ್ಪ-ಅಮ್ಮ ಕಾಣೆಯಾಗಿದ್ದಾರೆ. ಎಲ್ಲರೂ ಹುಡುಕಿದರೂ ಕೂಡ ಅವರ ಸುಳಿವೇ ಇಲ್ಲ. ಮೊದಲೇ ತಾನು ಅಂದುಕೊಂಡ ರೀತಿಯಲ್ಲಿ ಮದುವೆ ಆಗುತ್ತಿಲ್ಲ ಎಂಬ ಬೇಸರ ನಿತ್ಯಾಗಿದೆ. ಹೀಗಿರುವಾಗ ಈಗ ಮದುವೆ ಮಂಟಪದಿಂದ ತೇಜಸ್ ಓಡಿ ಹೋಗಿದ್ದಾನೆ. ಇದು ಆಕೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ತೇಜಸ್ ಅಂತೂ ಮೋಸ ಮಾಡಿ ಹೋದ, ಈಗ ಬೇರೆಯವರಲ್ಲಿ ಯಾರಾದರೂ ನನ್ನ ಮೊಮ್ಮಗಳನ್ನು ಮದುವೆ ಆಗಲಿ ಎಂದು ನಿತ್ಯಾ ಅಜ್ಜಿ ಶಾಂತಿ ಕೋರಿದ್ದಾಳೆ. ಆದರೆ, ಯಾರೊಬ್ಬರೂ ಮದುವೆ ಆಗಲು ಒಪ್ಪಿಲ್ಲ. ಇನ್ನೊಂದು ಕಡೆ ಹಸೆಮಣೆ ಏರಿದಮೇಲೆ, ಮದುವೆ ನಿತ್ತಿದೆ ಎಂದಮೇಲೆ, ಹುಡುಗಿಯಲ್ಲಿ ಏನಾದರೂ ಸಮಸ್ಯೆ ಇರಬಹುದು ಎಂದು ಜನರು ಮಾತಾಡಿಕೊಳ್ತಾರೆ. ಇದನ್ನೆಲ್ಲ ಕೇಳಿ ಮೊಮ್ಮಗಳ ಜೀವನ ಹಾಳಾಯ್ತು ಎಂದು ಅವಳು ಅತ್ತಿದ್ದಳು. ಇಲ್ಲಿಗೆ ನಮ್ಮ ಜೀವನ ಮುಗಿಯಿತು ಎಂದು ಕೊನೆಗೆ ಬೇರೆ ದಾರಿ ಕಾಣದೆ ನಿತ್ಯಾಳಿಗೂ ಪೆಟ್ರೋಲ್ ಸುರಿದು, ತಾನೂ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಅಜ್ಜಿ ನಿರ್ಧರಿಸಿದ್ದಾರೆ.
ಆಗ .. ಅಜ್ಜಿ ಮುಂದೆ ಬಂದು, ಯಾರೂ ಏನು ಮಾಡ್ಕೋ ಬೇಕಾಗಿಲ್ಲ.. ನಿತ್ಯಾಳ ಮದುವೆ ನಡೆಯುತ್ತೆ.. ನಿತ್ಯಾಳ ಮದುವೆ ಆಗೋ ಹುಡುಗ ಕರ್ಣ ಎಂದು ಹೇಳಿದ್ದಾರೆ. ಇದು ಕರ್ಣ ಹಾಗೂ ನಿಧಿಗೆ ಶಾಕ್ ನೀಡಿದೆ. ತೇಜಸ್ ಒಳ್ಳೆಯವನೇ ಇರಬಹುದು. ಆದರೆ ಕರ್ಣನ ತಂದೆ ರಮೇಶ್ ಕುತಂತ್ರದಿಂದ ಈ ಮದುವೆ ಮುರಿದಿದೆ, ಎಂದು ಮುಂಬರುವ ಎಪಿಸೋಡ್ನಲ್ಲಿ ಗೊತ್ತಾಗಲಿದೆ. ಕರ್ಣ ಹಾಗೂ ನಿಧಿ ಪ್ರೀತಿ ವಿಷಯ ತಿಳಿದ ರಮೇಶ್‌ಗೆ ಇವರಿಬ್ಬರಿಗೂ ಬ್ರೇಕಪ್ ಮಾಡಿಸಿ, ಕರ್ಣನಿಗೆ ಇನ್ನಷ್ಟು ನೋವು ಕೊಡುವ ಆಸೆ ಇತ್ತು. ನಿತ್ಯಾ, ಕರ್ಣನನ್ನು ಇಷ್ಟಪಡೋದಿಲ್ಲ, ನಮ್ಮ ದಾರಿಗೂ ಅಡ್ಡ ಬರೋದಿಲ್ಲ ಎಂದು ಅವನು ಲೆಕ್ಕಾಚಾರ ಹಾಕಿದ್ದಾನೆ. ಸದ್ಯ ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ.
BBK 12: ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ಡಬಲ್ ಗೇಮ್: ಬೆನ್ನಿಗೆ ಚೂರಿ ಹಾಕಿದ್ದು ಯಾರು?