ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prithwi Bhat: ಆದಷ್ಟು ಬೇಗ ನಮ್ಮನ್ನು ಒಪ್ಪಿ ಮನೆಗೆ ಕರೆಸಿ: ಪೋಷಕರಲ್ಲಿ ಕೈ ಮುಗಿದು ಕೇಳಿದ ಪೃಥ್ವಿ ಭಟ್

ಝೀ ಕನ್ನಡದ ಸರಿಗಮಪ ಗಾಯಕಿ ಪೃಥ್ವಿ ಭಟ್ ಪತಿ ಅಭಿಷೇಕ್ ಜೊತೆ ಹನಿಮೂನ್ಗೆಂದು ಮಲೇಷ್ಯಾಕ್ಕೆ ಹೋಗಿಬಂದಿದ್ದಾರೆ. ಇದೀಗ ಈ ಜೋಡಿ ಸಂದರ್ಶನವೊಂದರಲ್ಲಿ ಕೂತಿದ್ದು, ಕೆಲ ವಿಚಾರ ಹಂಚಿಕೊಂಡಿದ್ದಾರೆ. ಕೀರ್ತಿ ENT ಕ್ಲಿನಿಕ್ ಸಂದರ್ಶನದಲ್ಲಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಹಾಜರಾಗಿದ್ದು, ತಮ್ಮ ಮದುವೆ, ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

Prithwi Bhat

ಝೀ ಕನ್ನಡದ ಸರಿಗಮಪ ಗಾಯಕಿ ಪೃಥ್ವಿ ಭಟ್ (Prithwi Bhat) ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಾನು ಪ್ರೀತಿಸಿ ಹುಡುಗನನ್ನು ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಮಗಳ ವಿವಾಹದ ಬಳಿಕ ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಲ್ಲಿಂದ ಗಾಯಕಿಯ ಮದುವೆ ವಿವಾದ ವಿಷಯವಾಗಿತ್ತು. ಪೋಷಕರ ವಿರೋಧದ ನಡುವೆಯೂ ಪೃಥ್ವಿ ಭಟ್ ದೇವಾಲಯದಲ್ಲಿ ಮಾರ್ಚ್‌ 27 ರಂದು ಅಭಿಷೇಕ್‌ ಅವರೊಂದಿಗೆ ಮದುವೆಯಾಗಿದ್ದರು.

ಮದುವೆಯ ಬಳಿಕ ಪೃಥ್ವಿ ಭಟ್ ಅದ್ಧೂರಿಯಾಗಿ ರಿಸೆಪ್ಶನ್‌ ಮಾಡಿಕೊಂಡಿದ್ದರು. ಇದಕ್ಕೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಬಂದಿದ್ದರು. ನಿರೂಪಕಿ ಅನುಶ್ರೀ, ನಟಿ ಮೋಕ್ಷಿತಾ, ಪೈ, ಬಿಗ್​ಬಾಸ್​ ಸೀಸನ್ 11ರ ವಿನ್ನರ್​, ಗಾಯಕ ಹನುಮಂತ ಲಮಾಣಿ, ವಿಜಯ್​ ಪ್ರಕಾಶ್ ದಂಪತಿ, ನಟ ಒಳ್ಳೆ ಹುಡುಗ ಪ್ರಥಮ್, ಸಿಂಗರ್ ಸುನೀಲ್, ಹಂಸಲೇಖ ಅವರ ಪತ್ನಿ ಲತಾ ಹಾಗೂ ಸರಿಗಮಪ ಸ್ಪರ್ಧಿಗಳು ಕೂಡ ಆಗಮಿಸಿ ಶುಭ ಹಾರೈಸಿದ್ದರು.

ಝೀ ಕನ್ನಡದ ಸರಿಗಮಪ ಶೋನಲ್ಲಿ ಪೃಥ್ವಿ ಭಟ್ ಭಾಗವಹಿಸಿದ ವೇಳೆ ಅಭಿಷೇಕ್ ಜೊತೆ ಪ್ರೀತಿ ಹುಟ್ಟಿತ್ತು. ಅಭಿಷೇಕ್ ಝೀ ಕನ್ನಡದಲ್ಲಿ ಎಕ್ಸ್‌ಕ್ಯೂಟಿವ್ ಪ್ರಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಂದಿಷ್ಟು ವರ್ಷದ ಪ್ರೀತಿಯ ಬಳಿಕ ಪೃಥ್ವಿ ಭಟ್ ಹಾಗೂ ಅಭಿಷೇಕ್ ಇಬ್ಬರೂ ಮದುವೆ ಆಗುವುದಕ್ಕೆ ನಿರ್ಧರಿಸಿದ್ದರು. ಮದುವೆಯ ಬಳಿಕ ಈ ಜೋಡಿ ಹನಿಮೂನ್​ಗೆಂದು ಮಲೇಷ್ಯಾಕ್ಕೆ ಹೋಗಿಬಂದಿದ್ದಾರೆ. ಇದೀಗ ಈ ಜೋಡಿ ಸಂದರ್ಶನವೊಂದರಲ್ಲಿ ಕೂತಿದ್ದು, ಕೆಲ ವಿಚಾರ ಹಂಚಿಕೊಂಡಿದ್ದಾರೆ.

ಕೀರ್ತಿ ENT ಕ್ಲಿನಿಕ್ ಸಂದರ್ಶನದಲ್ಲಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಹಾಜರಾಗಿದ್ದು, ತಮ್ಮ ಮದುವೆ, ಪ್ರೀತಿ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ವೈರಲ್ ಆಗುತ್ತಿದೆ. ಪ್ರೋಮೊದಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಜೋಡಿ ಹಂಚಿಕೊಂಡಿದೆ. ಮದುವೆ ಬಳಿಕ ಪೃಥ್ವಿ ಅವರ ತಂದೆ ಜೊತೆ ಅಭಿಷೇಕ್ ಫೋನ್ ಮಾಡಿ ಮಾತನಾಡಿದ್ದು, ತಾವು ಮಾಡಿದ್ದು ತಪ್ಪು ಎಂದು ಕ್ಷಮಿಸಿ ಎಂದು ಹೇಳಿದ್ದಾರಂತೆ.



ಪೋಷಕರ ಒಪ್ಪಿಗೆ ಇಲ್ಲದೇ ಮದುವೆಯಾದ ಮಾತನಾಡಿದ ಅವರು, "ಆ ಕ್ಷಣಕ್ಕೆ ನಮಗೆ ಬೇರೆ ದಾರಿ ಇರಲಿಲ್ಲ. ಹಾಗಾಗಿ ಮದುವೆ ಆಗಬೇಕಾಯಿತು. ಅಪ್ಪ ಮೆಸೇಜ್ ಮಾಡ್ತಾರೆ" ಎಂದು ತಿಳಿಸಿದ್ದಾರೆ. ಪ್ರೀತಿ ಮಾಡಿ ಮದುವೆ ಆಗುವುದು ತಪ್ಪು ಎನಿಸುತ್ತಿಲ್ಲ ಎಂದು ಅಭಿ- ಪೃಥ್ವಿ ಹೇಳಿದ್ದಾರೆ. ಪೋಷಕರು ಖುಷಿಯಾಗಿ ಇರಬೇಕು, ಆದಷ್ಟು ಬೇಗ ನಮ್ಮನ್ನು ಒಪ್ಪಿ ಮನೆಗೆ ಕರೆದರೆ ಸಾಕು ಎಂದು ಪೃಥ್ವಿ ಭಟ್ ಪೋಷಕರಲ್ಲಿ ಕೈ ಮುಗಿದು ಮನವಿ ಮಾಡಿದ್ದಾರೆ.

Kannada Serial TRP: ಮುದ್ದು ಸೊಸೆ, ಭಾಗ್ಯ ಲಕ್ಷ್ಮೀ ಹಿಂದಿಕ್ಕಿ ನಂಬರ್ ಒನ್ ಧಾರಾವಾಹಿಯಾದ ಭಾರ್ಗವಿ ಎಲ್.ಎಲ್.ಬಿ