#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

BBK 11: ರಜತ್ ಬಾಯಿಂದ ಪುನಃ ಬಂತು ಆ ಪದ: ಮಂಜು ವಿರುದ್ಧ ಹೊಡೆದಾಡುವ ಮಟ್ಟಕ್ಕೆ ಜಗಳ

ಜಗಳಗಳಿಂದಲೇ ಕೂಡಿದ್ದ ಈ ಸೀಸನ್ನಲ್ಲಿ ಇದೀಗ ಸೀಸನ್ನ ಕೊನೆಯ ವಾರದಲ್ಲಿ ಕೂಡ ಹೊಡೆದಾಟದ ಮಟ್ಟಕ್ಕೆ ಜಗಳ ನಡೆದಿದೆ. ಇದು ನಡೆದಿರುವುದು ಉಗ್ರಂ ಮಂಜು ಹಾಗೂ ರಜತ್ ಕಿಶನ್ ನಡುವೆ. ಇದಕ್ಕೆ ಕಾರಣವಾಗಿದ್ದು ಬಿಗ್ ಬಾಸ್ ನೀಡಿರುವ ಒಂದು ಚಟುವಟಿಕೆ.

ರಜತ್ ಬಾಯಿಂದ ಪುನಃ ಬಂತು ಆ ಪದ: ಮಂಜು ವಿರುದ್ಧ ಹೊಡೆದಾಡುವ ಮಟ್ಟಕ್ಕೆ ಜಗಳ

Rajath and Manju

Profile Vinay Bhat Jan 20, 2025 8:49 AM

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅಂತಿಮ ಘಟ್ಟದತ್ತ ಸಾಗುತ್ತಿದೆ. ಇದೀಗ ಫಿನಾಲೆ ವೀಕ್ ಪ್ರಾರಂಭವಾಗಿದ್ದು ಮುಂದಿನ ಶನಿವಾರ-ಭಾನುವಾರ ಗ್ರ್ಯಾಂಡ್ ಫೈನಲ್ ನಡೆಯಲಿದೆ. ಕಳೆದ ವಾರ ನಡೆದ ಡಬಲ್ ಎಲಿಮಿನೇಷನ್​ನಿಂದಾಗಿ ಸದ್ಯ ಮನೆಯೊಳಗೆ ಆರು ಮಂದಿ ಇದ್ದಾರಷ್ಟೆ. ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್​, ಭವ್ಯಾ ಗೌಡ, ರಜತ್ ಹಾಗೂ ಉಗ್ರಂ ಮಂಜು ಗ್ರ್ಯಾಂಡ್​ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಘಟಾನುಘಟಿಗಳೇ ಈ ಲಿಸ್ಟ್​ನಲ್ಲಿರುವ ಕಾರಣ ಯಾರು ಗೆಲ್ಲುತ್ತಾರೆ ಎಂಬುದು ರೋಚಕತೆ ಸೃಷ್ಟಿಸಿದೆ. ಇದರ ಮಧ್ಯೆ ಫಿನಾಲೆ ವಾರದ ಮೊದಲ ದಿನವೇ ಬಿಗ್ ಬಾಸ್ ರಣರಂಗವಾಗಿ ಮಾರ್ಪಟ್ಟಿದೆ. ಡಬಲ್ ಎಲಿಮಿನೇಷನ್ ಬಳಿಕ ಮನೆಯಲ್ಲಿ ಏನಾಯಿತು?, ಕೊನೆ ಘಳಿಗೆಯಲ್ಲಿ ಯಾರ ಮಧ್ಯೆ ಜಗಳ ನಡೆದಿದೆ?, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಫಿನಾಲೇ ವೀಕ್ ಎಂದರೆ ಈ ಹಿಂದಿನ ಸೀಸನ್​ಗಳಲ್ಲಿ ಸ್ಪರ್ಧಿಗಳು ಆರಾಮವಾಗಿ ಇರುತ್ತಿದ್ದರು. ಅವರಿಗೆ ಕೆಲ ವಿಶೇಷ ಸೌಲಭ್ಯವನ್ನೆಲ್ಲ ನೀಡಲಾಗಿರುತ್ತಿತ್ತು. ಆದರೆ, ಈ ಬಾರಿ ಅದು ಸಂಪೂರ್ಣ ಬದಲಾಗಿದೆ. ಜಗಳಗಳಿಂದಲೇ ಕೂಡಿದ್ದ ಈ ಸೀಸನ್​ನಲ್ಲಿ ಇದೀಗ ಸೀಸನ್​ನ ಕೊನೆಯ ವಾರದಲ್ಲಿ ಕೂಡ ಹೊಡೆದಾಟದ ಮಟ್ಟಕ್ಕೆ ಜಗಳ ನಡೆದಿದೆ. ಇದು ನಡೆದಿರುವುದು ಉಗ್ರಂ ಮಂಜು ಹಾಗೂ ರಜತ್ ಕಿಶನ್ ನಡುವೆ. ಇದಕ್ಕೆ ಕಾರಣವಾಗಿದ್ದು ಬಿಗ್ ಬಾಸ್ ನೀಡಿರುವ ಒಂದು ಚಟುವಟಿಕೆ.

ಮನದಲ್ಲಿ ಉದಿಗಿರುವ ಕೋಪ-ಬೇಸರ-ಹತಾಶೆಯನ್ನು ಮಡಿಕೆ ಒಡೆಯುತ್ತ ಮನದೊಳಗಿನ ಭಾರವನ್ನು ಇಳಿಸಬೇಕು ಎಂದು ಬಿಗ್ ಬಾಸ್ ಒಂದು ಚಟುವಟಿಕೆ ನೀಡಿದ್ದಾರೆ. ಇದರಲ್ಲಿ ಉಗ್ರಂ ಮಂಜು ಅವರು ಮಿಸ್ಟರ್ ರಜತ್ ಎಂದು ಹೆಸರು ತೆಗೆದುಕೊಂಡಿದ್ದಾರೆ. ಮುಂಚೆ ಹೇಳ್ತೀರಾ ಗ್ಯಾಂಗ್​ಗಳನ್ನೆಲ್ಲ ಹರಿದಾಕ್ತೀನಿ ಅಂತಾ.. ಏನು ಹರಿದಾಕೋಕೆ ಆಗಿಲ್ಲ ನಂದು ಮತ್ತು ಗೌತಮಿ ಫ್ರೆಂಡ್​ಶಿಪ್​ನ.. ಆಗ ರಜತ್ ಅವರು ಮಂಜು ಅವರನ್ನು ಭವ್ಯಾ ಜೊತೆ ಇಮಿಟೇಟ್ ಮಾಡಿ, ಗುಳ್ಳೆ ನರಿ ತರಾ ಹೆಂಗಿದ್ದ ಏಳು-ಎಂಟು ವಾರ ಎಂದು ತೋರಿಸಿದ್ದಾರೆ.



ಇದರಿಂದ ಕೆರಳಿದ ಮಂಜು, ನಿನ್ನ ವ್ಯಕ್ತಿತ್ವ ನೀನು ನೋಡ್ಕೊ ಹೋಗಲ್ಲೆ.. ಎಷ್ಟೊ ಜನ ನೋಡಿದ್ದೀನಿ ನಾನೂನು ಎಂದು ಹೇಳಿದ್ದಾರೆ. ಇದರು ರಜತ್​ಗೆ ಮತ್ತಷ್ಟು ಕೋಪ ತರಿಸಿದೆ. ಒಳ್ಳೆ ಸಡೆ ನನ್ ಮಗನೆ.. ಏಳೆಂಟು ವಾರದಿಂದ ಗುಳ್ಳೆ ನರಿ ತರ ಇದೆ ಇವಗೇನೋ.. ಬರ್ತೀಯಾ.. ಬರ್ತೀಯಾ.. ಎಂದು ರಜತ್ ಎದುರು ಎದುರು ಹೋಗಿದ್ದಾರೆ. ಈ ಕುರಿತ ಪ್ರೊಮೊವನ್ನು ಕಲರ್ಸ್ ಕನ್ನಡ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಸದ್ಯ ದೊಡ್ಮನೆಯಲ್ಲಿ ಶೋ ಮುಗಿಯುವ ಹಂತದಲ್ಲಿದ್ದರೂ ಜಗಳಗಳು ಮುಗಿಯುವಂತೆ ಕಾಣುತ್ತಿಲ್ಲ. ರಜತ್​ಗೆ ಪದಗಳ ಮೇಲೆ ಹಿಡಿತ ಇರಲಿ ಎಂದು ಸುದೀಪ್ ಅಷ್ಟು ಬಾರಿ ಹೇಳಿದ್ದರೂ ಇವರು ತಮಗೆ ಬಂದಂತೆ ಮಾತನಾಡುವುದು, ಆಡುವುದು ಮಾತ್ರ ವೀಕ್ಷಕರಿಗೆ ಬೇಸರ ತರಿಸಿದೆ.

BBK 11: ಮಹತ್ವದ ಘಟ್ಟದಲ್ಲೇ ಧನರಾಜ್-ಗೌತಮಿ ಎಲಿಮಿನೇಟ್ ಆಗಲು ಏನು ಕಾರಣ?