BBK 11: ಮಹತ್ವದ ಘಟ್ಟದಲ್ಲೇ ಧನರಾಜ್-ಗೌತಮಿ ಎಲಿಮಿನೇಟ್ ಆಗಲು ಏನು ಕಾರಣ?
ಕಳೆದ ವಾರ ಡಬಲ್ ಎಲಿಮಿನೇಷನ್ ನಡೆದಿದೆ. ಮಿಡ್ ವೀಕ್ ಎಲಿಮಿನೇಷನ್ ರದ್ದಾದ ಕಾರಣ ಶನಿವಾರ ಗೌತಮಿ ಜಾಧವ್ ಹಾಗೂ ಭಾನುವಾರ ಧನರಾಜ್ ಆಚಾರ್ ಮನೆಯಿಂದ ಆಚೆ ಬಂದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇನ್ನೇನು ಏಳು ದಿನಗಳಲ್ಲಿ ಶೋ ಮುಕ್ತಾಯಗೊಳ್ಳಲಿದೆ. ಇದೇ ಬರುವ ಶನಿವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈಗಾಗಲೇ ತ್ರಿವಿಕ್ರಮ್, ಹನುಮಂತ, ಮೋಕ್ಷಿತಾ, ಉಗ್ರಂ ಮಂಜು, ಭವ್ಯಾ ಗೌಡ ಹಾಗೂ ರಜತ್ ಕಿಶನ್ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ಇದರ ಮಧ್ಯೆ ಕಳೆದ ವಾರ ಡಬಲ್ ಎಲಿಮಿನೇಷನ್ ನಡೆದಿದೆ. ಮಿಡ್ ವೀಕ್ ಎಲಿಮಿನೇಷನ್ ರದ್ದಾದ ಕಾರಣ ಶನಿವಾರ ಹಾಗೂ ಭಾನುವಾರ ಒಬ್ಬಬ್ಬ ಸ್ಪರ್ಧಿ ಮನೆಯಿಂದ ಆಚೆ ಬಂದರು.
ಶನಿವಾರ ಗೌತಮಿ ಜಾಧವ್ ಅವರು ದೊಡ್ಮನೆಯಿಂದ ಆಚೆ ಬಂದಿದ್ದಾರೆ. ಇವರನ್ನು ಫೈನಲ್ ಸ್ಪರ್ಧಿ ಎಂದೇ ನಂಬಲಾಗಿತ್ತು. ಆದರೆ, ಇವರ ದಿಢೀರ್ ಎಲಿಮಿನೇಷನ್ ಎಲ್ಲರಿಗೂ ಅಚ್ಚರಿ ನೀಡಿದೆ. ಶೋ ಆರಂಭವಾದಾಗ ತುಂಬಾ ಸೈಲೆಂಟ್ ಆಗಿದ್ದ ಗೌತಮಿ ಅವರು ಉಗ್ರಂ ಮಂಜು ಜೊತೆ ಕ್ಲೋಸ್ ಆಗುತ್ತಾ ಮುನ್ನಲೆಗೆ ಬಂದರು. ಇವರಿಬ್ಬರ ನಡುವಣ ಸ್ನೇಹ ದೊಡ್ಮನೆಯಲ್ಲಿ ದೊಡ್ಡ ಮಟ್ಟದ ಸೌಂಡ್ ಮಾಡಿತು. ಎಷ್ಟರ ಮಟ್ಟಿಗೆ ಎಂದರೆ ಇದು ಇವರಿಬ್ಬರ ಆಟಕ್ಕೂ ತೊಂದರೆ ಆಯಿತು. ಕಿಚ್ಚ ಸುದೀಪ್ ಅವರು ಪ್ರತೀ ವೀಕೆಂಡ್ ಬಂದು ಮಂಜು ಹಾಗೂ ಗೌತಮಿಗೆ ಎಚ್ಚರಿ ನೀಡಿದರೂ ಇವರು ತಿದ್ದಿಕೊಳ್ಳಲಿಲ್ಲ.
ಗೌತಮಿ ಅವರು ಆರಂಭದಿಂದಲೂ ಮಂಜು ಅವರೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಕಳೆದ ವಾರ ಮಂಜು ಅವರ ಸ್ನೇಹದಿಂದ ದೂರ ಉಳಿದು ಗೇಮ್‌ನಲ್ಲಿ ತೊಡಗಿಕೊಂಡು ವೈಯಕ್ತಿಕವಾಗಿ ಆಡುತ್ತೇನೆ ಎಂದಿದ್ದರು. ಆದರೆ, ಅದು ಒಂದು ದಿನಕ್ಕೆ ಮಾತ್ರ ಸೀಮಿತವಾಗಿತ್ತು. ಇದೀಗ ಅಂತಿಮವಾಗಿ ಗೌತಮಿ ಅವರಿಗೆ ಕಡಿಮೆ ವೋಟಿಂಗ್ ಬಂದ ಕಾರಣ ಅವರು ಎಲಿಮಿನೇಟ್ ಆಗಿದ್ದಾರೆ.
ಇನ್ನು ಭಾನುವಾರ ಮತ್ತೊಂದು ಶಾಕಿಂಗ್ ಎಲಿಮಿನೇಷನ್ ನಡೆದಿದೆ. ಕಳೆದ ವಾರ ಅದ್ಭುತ ಪ್ರದರ್ಶನ ತೋರಿ ಕೊನೆಯ ಟಾಸ್ಕ್ನಲ್ಲಿ ಎಡವಿದ್ದ ಧನರಾಜ್ ಆಚಾರ್ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಹನುಮಂತನ ವೈಲ್ಡ್ ಕಾರ್ಡ್ ಎಂಟ್ರಿ ಬಳಿಕ ಸ್ಟ್ರಾಂಗ್ ಕಂಟೆಸ್ಟಂಟ್ ಆಗಿ ಬದಲಾಗಿದ್ದ ಧನರಾಜ್ ಆಚಾರ್ ಇದೀಗ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. ಫಿನಾಲೆ ವೀಕ್‌ಗೆ ಒಂದು ಹೆಜ್ಜೆ ಬಾಕಿ ಇರುವಾಗಲೇ ಎಡವಿದ್ದಾರೆ. ಹಲವು ಟಾಸ್ಕ್ ಗಳಲ್ಲಿ ಧನರಾಜ್ ಸಖತ್ ಹೋರಾಟ ನೀಡಿ ಗೆದ್ದಿದ್ದರು. ವೀಕ್ಷಕರ ಮನೆಮನವನ್ನು ಅವರು ಗೆದ್ದಿದ್ದರು. ಆದರೆ ಇದೀಗ ಧನರಾಜ್ ಅವರು ಫಿನಾಲೆಗೆ ಒಂದು ವಾರ ಇರುವಾಗಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.