Rajath BBK 11: ಫಿನಾಲೆಯಲ್ಲಿ ಯುವನ್ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?
ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಎರಡನೇ ರನ್ನರ್ ಅಪ್ ಆಗಿರುವ ರಜತ್ ಕಿಶನ್ ಅವರು ವಿಶ್ವವಾಣಿ ಜೊತೆ ದೊಡ್ಮನೆಯೊಳಗಿನ ಹಾಗೂ ಜನರ ಪ್ರತಿಕ್ರಿಯೆಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ (Bigg Boss Kannada 11) ತೆರೆಬಿದ್ದಾಗಿದೆ. ಹನುಮಂತ ವಿನ್ನರ್ ಆಗಿದ್ದು, ತ್ರಿವಿಕ್ರಮ್ ಅವರು ಫಸ್ಟ್ ರನ್ನರ್ ಅಪ್, ರಜತ್ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಜನರಿನ್ನೂ ಬಿಗ್ ಬಾಸ್ ಗುಂಗಿನಿಂದ ಹೊರಬರುತ್ತಿಲ್ಲ. ಕೆಲವರು ಶೋ ಮುಗಿಯಿತಲ್ಲ ಇನ್ನೇನು ನೋಡೋದು ಎಂಬ ಬೇಸರದಲ್ಲಿದ್ದಾರೆ. ಇದರ ಮಧ್ಯೆ ಬಿಬಿಕೆ 11ನ ಫಿನಾಲೆ ಸ್ಪರ್ಧಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ.
ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಎರಡನೇ ರನ್ನರ್ ಅಪ್ ಆಗಿರುವ ರಜತ್ ಕಿಶನ್ ಅವರು ವಿಶ್ವವಾಣಿ ಜೊತೆ ದೊಡ್ಮನೆಯೊಳಗಿನ ಹಾಗೂ ಜನರ ಪ್ರತಿಕ್ರಿಯೆಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ನೀಡಿರುವ ಗಿಫ್ಟ್ ಕುರಿತು ಕೂಡ ಕೆಲ ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ.
ಫಿನಾಲೆಯಲ್ಲಿ ಬಿಗ್ ಬಾಸ್ ತಂಡ ಕಿಚ್ಚ ಸುದೀಪ್ ಅವರಿಗಾಗಿ ಒಂದು ಡ್ಯಾನ್ಸ್ ಪರ್ಫಾರ್ಮೆನ್ಸ್ ಡೆಡಿಕೇಟ್ ಮಾಡಿದ್ದರು. ಇದನ್ನು ನೋಡಿ ಕಿಚ್ಚ ಸುದೀಪ್ ಕಣ್ಣೀರು ಹಾಕಿದ್ದಾರೆ. ಕಳೆದ ವರ್ಷ 2024 ಅಕ್ಟೋಬರ್ 20ನೇ ತಾರೀಖಿನಂದು ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ನಿಧನ ಹೊಂದಿದ್ದರು. ಹೀಗಾಗಿ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಅವರ ಅಮ್ಮನ ಧ್ವನಿಯನ್ನು ಮರುಕಳಿಸಲಾಯಿತು. ಈ ವೇಳೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಯುವನ್ ಕುಮಾರ್ ಬಾಲ್ಯದ ಕಿಚ್ಚ ಸುದೀಪ್ ಆಗಿ ಡ್ಯಾನ್ಸ್ ಮಾಡಿದರು.
ಯುವನ್ ಡ್ಯಾನ್ಸ್ ಮೆಚ್ಚಿದ ಕಿಚ್ಚ ಸುದೀಪ್ ಅವರು ತಾವು ಧರಿಸಿದ್ದ ಬೆಲೆ ಬಾಳುವ ಪ್ಲಾಟಿನಂ ಚೈನ್ ಅನ್ನು ಗಿಫ್ಟ್ ಆಗಿ ಕೊಟ್ಟರು. ಈ ಕುರಿತು ರಜತ್ ಅವರು ವಿಶ್ವವಾಣಿ ಜೊತೆಗಿನ ಸಂದರ್ಶನದಲ್ಲಿ ಕಿಚ್ಚ ಸುದೀಪ್ ಅವರನ್ನು ಹಾಡಿಹೊಗಳಿದ್ದಾರೆ. ಎಷ್ಟೊ ಜನರ ಹತ್ತಿರ ಕೋಟ್ಯಾಂತರ ರೂಪಾಯಿ ದುಡ್ಡು ಇರುತ್ತೆ. ಆದ್ರೆ ಅವರು 5 ಪೈಸೆ ಬಿಚ್ಚಲ್ಲ. ನಾವು ನೋಡಿದ್ದೀವಿ ಅಂತವರನ್ನ.. ಆದ್ರೆ ಸುದೀಪ್ ಸರ್ ನನ್ಗೆ ಜಾಕೆಟ್ ಕೊಟ್ರು ಅದ್ರ ಅಮೌಂಟ್ ಬೇಡ ಬಿಡಿ.. ನನ್ಗೆ ಮೊನ್ನೆಯಷ್ಟೆ ಗೊತ್ತಾಯಿತು ಅಮೌಂಟ್.. ಅದನ್ನ ಮಾಡೋಕೆ ಒಂದುವರೆ ತಿಂಗಳು ಟೈಮ್ ತೆಗೊಂಡಿದ್ದಾರೆ. ಮೊನ್ನೆ ಫಿನಾಲೆಯಲ್ಲಿ ಚಿಕ್ಕ ಮಗುವಿಗೆ ಗಿಫ್ಟ್ ಕೊಟ್ರು.. ಅದರ ರೇಟ್ ಕೇಳಿದ್ರೆ ತಲೆ ಕೆಡಿಸಿಕೊಂಡು ಬಿಡ್ತೀರಾ ಎಂದು ಹೇಳಿದ್ದಾರೆ.
ಕಿಚ್ಚ ಸುದೀಪ್ ರಜತ್‌ಗೆ ನೀಡಿರುವ ಜಾಕೆಟ್‌ನ ಬೆಲೆ ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಇರಬಹುದು ಎನ್ನಲಾಗಿದೆ. ಈ ಬಗ್ಗೆ ಸ್ವತಃ ರಜತ್‌ಗೆ ಜಾಕೆಟ್ ನೀಡಿದ ನಟ ರಾಜೀವ್ ಅವರೇ ತಿಳಿಸಿದ್ದಾರೆ. ಆ ಜಾಕೆಟ್‌ನ ಬೆಲೆ ಏನಿಲ್ಲ ಎಂದರೂ ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಎಂದು ಹೇಳಿದ್ದಾರೆ.
Hanumantha BBK 11: ಈ ಹಿಂದೆಯೇ ನನಗೆ ಬಿಗ್ ಬಾಸ್ ಆಫರ್ ಬಂದಿತ್ತು: ಗೆಲುವಿನ ಬಳಿಕ ರಹಸ್ಯ ಬಿಚ್ಚಿಟ್ಟ ಹನುಮಂತ