ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss kannada 12) ಶುರುವಾಗಿ ಎರಡು ದಿನ ಆಗಿದ್ದಷ್ಟೆ. ಅದಾಗಲೇ ವೀಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ಊಹಿಸಲಾಗದ ಟ್ವಿಸ್ಟ್ ನೀಡಲಾಗುತ್ತಿದೆ. ಮನೆಯೊಳಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳಿಗೆ ಬಿಗ್ ಬಾಸ್ ಪದೇ ಪದೇ ಇದು ಹಿಂದಿನ ಸೀಸನ್ಗಳ ರೀತಿ ಅಲ್ಲ.. ಈ ಸೀಸನ್ನಲ್ಲಿ ಮಾರಿಹಬ್ಬವೇ ಇರಲಿದೆ ಎಂದು ಹೇಳಿದ್ದಾರೆ. ಹೀಗಿರುವಾಗಲೇ ಮೊದಲ ದಿನವೇ ದೊಡ್ಮನೆಯಲ್ಲಿ ಯಾರೂ ಊಹಿಸಲಾದಂತ ಟ್ವಿಸ್ಟ್ ಕೊಡಲಾಯಿತು. ಕೊನೆಯ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟ ರಕ್ಷಿತಾ ಶೆಟ್ಟಿ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಎಲಿಮಿನೇಟ್ ಆದರು.
ಮೊದಲ ದಿನವೇ ಬಿಗ್ ಬಾಸ್ನಲ್ಲಿ ಎಲಿಮಿನೇಷನ್ ಇರುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಇದ್ದರೂ ಇದೊಂದು ಗಿಮಿಕ್ ಆಗಿರಬಹುದೆಂದು ಅಂದುಕೊಂಡಿದ್ದರು. ಆದರೆ, ಕಲರ್ಸ್ ಕನ್ನಡ ತನ್ನ ಅಧಿಕೃತ ಸಾಮಾಜಿಕ ತಾಣಗಳಲ್ಲಿ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ ಎಂದು ಪ್ರಕಟಿಸಿದೆ. ಇದನ್ನ ಕಂಡು ಅವರ ಫ್ಯಾನ್ಸ್ ಸಿಟ್ಟಿಗೆದ್ದಿದ್ದಾರೆ. ರಕ್ಷಿತಾಗೆ ಅವಮಾನ ಮಾಡಲಾಗಿದೆ.. ಈರೀತಿ ಎಲಿಮಿನೇಷನ್ ಮಾಡಕೂಡದು ಎಂದು ಹೇಳುತ್ತಿದ್ದಾರೆ.
ಸೋಷಿಯಲ್ ಮೀಡಿಯಾದ ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಜಯಪ್ರಕಾಶ್ ಗೌಡ ಅವರು, ‘ಕರ್ದು ಅವಮಾನ ಮಾಡೋದು ಎಷ್ಟು ಸರಿ, ಇದು ನಿಮಗೆ ಸರಿ ಅನಿಸುತ್ತಿದೆಯೇ?’ ಎಂದು ಹೇಳಿದ್ದಾರೆ. ಅರ್ಧ ಗಂಟೆ ಕೂಡ ಮನೆಯಲ್ಲಿ ಇರೋಕೆ ಇಲ್ಲ ಅಂದ್ರೆ ಇವರನ್ನು ಕರೆಸಿದ್ದು ಏಕೇ? ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಬಿಗ್ ಬಾಸ್ ಪ್ರೋಮೊಗಿಂತ ರಕ್ಷಿತಾ ಪ್ರೋಮೋ ತುಂಬಾ ವೈರಲ್ ಆಗಿತ್ತು.... 11M ದಾಟಿದೆ, ಇದರಲ್ಲೇ ಗೊತ್ತಾಗುತ್ತೆ ಅವರ ಫ್ಯಾನ್ ಕ್ರೇಜ್ ಹೇಗಿತ್ತು ಅಂತ.. ಹೀಗಿದ್ದಾಗ ಅವರನ್ನು ಹೊರಗೆ ಕಳುಹಿಸಿದ್ದು ತಪ್ಪು ಎಂದು ಫ್ಯಾನ್ಸ್ ಹೇಳಿದ್ದಾರೆ.
ಒಟ್ಟಾರೆ ರಕ್ಷಿತಾ ಅವರ ಎಲಿಮಿನೇಷನ್ ಅನೇಕರಿಗೆ ಕೋಪತರಿಸಿದೆ. ಅವರಿಗೆ ತಮ್ಮ ಟ್ಯಾಲೆಂಟ್ ತೋರಿಸಲು ಒಂದು ಅವಕಾಶ ಕೂಡ ಕೊಡಲಿಲ್ಲ ಎಂಬುದು ಅನೇಕರ ವಾದ. ಈ ಬಾರಿಯ ಸೀಸನ್ನಲ್ಲಿ ಮೊದಲೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡಲಾಗುತ್ತಿದೆ. ಹೀಗಿರುವಾಗ ಒಂದು ವಾರ ಕಳೆದು ಮತ್ತೆ ರಕ್ಷಿತಾ ಅವರು ಬಿಗ್ ಬಾಸ್ ಮನೆಗೆ ವಾಪಾಸ್ ಬರುತ್ತಾರ ಎಂಬುದು ನೋಡಬೇಕಿದೆ.
ಮೂರನೇ ವಾರವೇ ಮೊದಲ ಫೈನಲ್:
ಸಾಮಾನ್ಯವಾಗಿ ಬಿಗ್ ಬಾಸ್ ಶೋನಲ್ಲಿ 100ನೇ ದಿನಕ್ಕೆ ಅಥವಾ 100 ದಿನ ಕಳೆದು ಒಂದೆರಡು ವಾರದಲ್ಲಿ ಫಿನಾಲೆ ನಡೆಯುತ್ತೆ. ಇದು ಕಳೆದ 11 ಸೀಸನ್ನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಬಾರಿ ಆಗಿಲ್ಲ.. ಕೇವಲ ಮೂರನೇ ವಾರದಲ್ಲೇ ಮೊದಲ ಫೈನಲ್ ನಡೆಯಲಿದೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಇದನ್ನ ಕೇಳಿ ಸ್ಪರ್ಧಿಗಳಿಗೆ ನಡುಕ ಶುರುವಾಗಿದೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಹೊಸ ಪ್ರೋಮೋದಲ್ಲಿ ಈ ವಿಚಾರ ರಿವೀಲ್ ಆಗಿದೆ.
‘‘ಈ ಸೀಸನ್ನಲ್ಲಿ ಯಾರು ಗೆಲ್ಲುತ್ತಾರೆ ಎಂದು ನೋಡೋದಕ್ಕೆ ನೂರು ದಿನಗಳ ಕಾಲ ಕಾಯಬೇಕಿಲ್ಲ.. ಮೂರನೇ ವಾರದಲ್ಲೇ ಒಂದು ಫಿನಾಲೆ ನಡೆಯಲಿದೆ.. ನಿಮಲ್ಲಿ ಯಾರು, ಯಾವಾಗ ಹೇಗೆ ಬೇಕಾದರೂ ಎಲಿಮಿನೇಟ್ ಆಗಬಹುದು.. ಒಬ್ಬೊಬ್ಬರಾಗಿ ಹೋಗಬಹುದು.. ಗುಂಪು-ಗುಂಪಾಗಿ ಎಲಿಮಿನೇಟ್ ಆಗಬಹುದು. ಎಲಿಮಿನೇಷನ್ ಭಯದಿಂದ ಮುಕ್ತರಾಗಬೇಕಾದರೆ ಅದಕ್ಕೆ ಒಂದೇ ದಾರಿ’’ ಎಂದು ಬಿಗ್ ಬಾಸ್ ಮನೆಯ ಸದಸ್ಯರಿಗೆ ಹೇಳಿದ್ದಾರೆ.
BBK 12: ಮೂರನೇ ವಾರದಲ್ಲೇ ಬಿಗ್ ಬಾಸ್ ಕನ್ನಡ 12 ಫೈನಲ್: ಸ್ಪರ್ಧಿಗಳಿಗೆ ಊಹಿಸಲಾಗದ ಟ್ವಿಸ್ಟ್